
ದಿ ಕೇರಳ ಸ್ಟೋರಿ
ನವದೆಹಲಿ: ‘ದಿ ಕೇರಳ ಸ್ಟೋರಿ’ ಚಿತ್ರದ ಪ್ರದರ್ಶನ ನಿಷೇಧಿಸಿ ಪಶ್ಚಿಮ ಬಂಗಾಳ ಸರ್ಕಾರ ಮೇ 8 ರಂದು ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಸಾರ್ವಜನಿಕರ ಅಸಹಿಷ್ಣುತೆಗೆ ಶಾಸನಬದ್ಧ ನಿಬಂಧನೆಗಳನ್ನು ಬಳಸಲಾಗದು ಎಂದು ಗುರುವಾರ ಹೇಳಿರುವ ಸುಪ್ರೀಂಕೋರ್ಟ್ ಕೇರಳ ಸ್ಟೋರಿ ಚಲನಚಿತ್ರ ನಿಷೇಧಿಸುವ ಪಶ್ಚಿಮ ಬಂಗಾಳ ಸರ್ಕಾರದ ಆದೇಶವನ್ನು ತಡೆ ಹಿಡಿಯಬಹುದು ಎಂದು ಹೇಳಿದೆ.
'ದಿ ಕೇರಳ ಸ್ಟೋರಿ'ಗೆ ಸೆನ್ಸಾರ್ ಮಂಡಳಿ ಪ್ರಮಾಣೀಕರಣ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯನ್ನು ಜುಲೈ ಎರಡನೇ ವಾರದಲ್ಲಿ ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.
ಮತಾಂತರ ಮಾಡಲಾದ ಮಹಿಳೆಯರ ಸಂಖ್ಯೆಯು 32 ಸಾವಿರ ಎಂದು ಹೇಳಲು ಯಾವುದೇ ಅಧಿಕೃತ ಡೇಟಾ ಲಭ್ಯವಿಲ್ಲ ಅಥವಾ ಬೇರೆ ಯಾವುದೇ ನಿಖರ ಅಂಕಿ ಅಂಶಗಳಿಲ್ಲ ಎಂಬುದನ್ನು ಮೇ 20ರಂದು ಸಂಜೆ 5 ಗಂಟೆ ಒಳಗೆ ಈ ಡಿಸ್‌ಕ್ಲೈಮರ್‌ನಲ್ಲಿ ಸ್ಪಷ್ಪಪಡಿಸುವಂತೆ ನಿರ್ಮಾಪಕರಿಗೆ ಸುಪ್ರೀಂ ಕೋರ್ಟ್ ಹೇಳಿದೆ.
ಇದನ್ನೂ ಓದಿ: ದಿ ಕೇರಳ ಸ್ಟೋರಿ' ನಿರ್ಮಾಪಕರಿಂದ ಮತಾಂತರಗೊಂಡಿದ್ದ 300 ಸಂತ್ರಸ್ತರಿಗೆ ಪುನರ್ವಸತಿ!
ಚಲನಚಿತ್ರಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ಪ್ರಮಾಣೀಕರಣವನ್ನು ನೀಡಿರುವುದರಿಂದ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ರಾಜ್ಯ ಸರ್ಕಾರದ ಕರ್ತವ್ಯವಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠ ಹೇಳಿತು.
'ದಿ ಕೇರಳ ಸ್ಟೋರಿ' ಚಿತ್ರದ ಮೇಲೆ ಪ್ರತ್ಯಕ್ಷ ಅಥವಾ ಪರೋಕ್ಷ ವಾಗಿ ನಿಷೇಧವಿಲ್ಲ ಎಂಬುದಕ್ಕೆ ತಮಿಳುನಾಡಿನ ಭರವಸೆಗಾಗಿ ದಾಖಲೆಯನ್ನು ಸುಪ್ರೀಂ ಕೋರ್ಟ್ ದಾಖಲೆಗೆ ತೆಗೆದುಕೊಂಡಿದೆ. ಪ್ರತಿ ಚಿತ್ರಮಂದಿರದಲ್ಲಿ ಸಾಕಷ್ಟು ಭದ್ರತೆಯನ್ನು ಒದಗಿಸಬೇಕು ಮತ್ತು ಚಲನಚಿತ್ರ ಪ್ರೇಕ್ಷಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯವಾದ ವ್ಯವಸ್ಥೆಗಳನ್ನು ಮಾಡಬೇಕು ಎಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.