ಮತಾಂತರಗೊಂಡಿದ್ದ 300 ಸಂತ್ರಸ್ತರಿಗೆ 'ದಿ ಕೇರಳ ಸ್ಟೋರಿ' ನಿರ್ಮಾಪಕರಿಂದ ಪುನರ್ವಸತಿಯ ಭರವಸೆ!

ಆಶ್ರಮವೊಂದರಲ್ಲಿ ಮತಾಂತರಗೊಂಡ 300 ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ಉಪಕ್ರಮವನ್ನು 'ದಿ ಕೇರಳ ಸ್ಟೋರಿ' ಚಿತ್ರದ ನಿರ್ಮಾಪಕ ವಿಪುಲ್ ಶಾ ಬುಧವಾರ ಘೋಷಿಸಿದ್ದು, 51 ಲಕ್ಷ ರೂಪಾಯಿ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.
ದಿ ಕೇರಳ ಸ್ಟೋರಿ ಚಿತ್ರದ ಪೋಸ್ಟರ್
ದಿ ಕೇರಳ ಸ್ಟೋರಿ ಚಿತ್ರದ ಪೋಸ್ಟರ್

ಮುಂಬೈ: ಆಶ್ರಮವೊಂದರಲ್ಲಿ ಮತಾಂತರಗೊಂಡ 300 ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ಉಪಕ್ರಮವನ್ನು 'ದಿ ಕೇರಳ ಸ್ಟೋರಿ' ಚಿತ್ರದ ನಿರ್ಮಾಪಕ ವಿಪುಲ್ ಶಾ ಬುಧವಾರ ಘೋಷಿಸಿದ್ದು, 51 ಲಕ್ಷ ರೂಪಾಯಿ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.

'ದಿ ಕೇರಳ ಸ್ಟೋರಿ' ಮೇ 5ರಂದು ಬಿಡುಗಡೆಯಾಗಿದ್ದು, ಅಂದಿನಿಂದ ವಿವಾದಗಳಲ್ಲಿ ಸಿಲುಕಿಕೊಂಡಿದೆ. ಕೆಲವು ರಾಜ್ಯಗಳಲ್ಲಿ ಚಿತ್ರ ಪ್ರದರ್ಶನವನ್ನು ನಿಷೇಧಿಸಲಾಗಿದೆ. ಮತ್ತೆ ಇನ್ನು ಕೆಲ ರಾಜ್ಯಗಳಲ್ಲಿ ತೆರಿಗೆ ವಿನಾಯ್ತಿ ನೀಡಲಾಗಿದೆ.

ಸುದೀಪ್ತೋ ಸೇನ್ ನಿರ್ದೇಶನದ ಈ ಚಿತ್ರದಲ್ಲಿ ನಟಿ ಅದಾ ಶರ್ಮಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಮತಾಂತರದ ಸಂತ್ರಸ್ತರಿಗೆ ಸಹಾಯ ಮಾಡುವ ಉದ್ದೇಶದಿಂದ ಈ ಚಿತ್ರವನ್ನು ನಿರ್ಮಿಸಿದ್ದೇನೆ ಮತ್ತು ಅವರ ಉಪಕ್ರಮವು 'ಹೆಣ್ಣುಮಕ್ಕಳನ್ನು ರಕ್ಷಿಸಿ' ಆ ದಿಕ್ಕಿನಲ್ಲಿ ಒಂದು ಹೆಜ್ಜೆಯಾಗಿದೆ ಎಂದು ಶಾ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕರು ಮಾತನಾಡಿ, ''ಕೇರಳ ಸ್ಟೋರಿ ಚಿತ್ರ ನಿರ್ಮಿಸಲು ಮತ್ತು ಸುದೀಪ್ತ ಈ ಕಥೆಯನ್ನು ಮುನ್ನೆಲೆಗೆ ತಂದು ಸಿನಿಮಾ ಮಾಡಲು ಮುಖ್ಯ ಕಾರಣ ಈ ಹೆಣ್ಣುಮಕ್ಕಳಿಗೆ ಸಹಾಯ ಮಾಡುವುದಾಗಿದೆ. ಆಶ್ರಮದಲ್ಲಿರುವ 300 ಹೆಣ್ಣು ಮಕ್ಕಳಿಗೆ ಪುನರ್ವಸತಿ ಕಲ್ಪಿಸುವ ಮೂಲಕ ನಾವು ಇದನ್ನು ಪ್ರಾರಂಭಿಸಲಿದ್ದೇವೆ. ನಾವು, 'ಸನ್‌ಶೈನ್ ಪಿಕ್ಚರ್ಸ್' ಮತ್ತು 'ದಿ ಕೇರಳ ಸ್ಟೋರಿ' ತಂಡವು ರೂ 51 ಲಕ್ಷ ದೇಣಿಗೆ ನೀಡುವ ಮೂಲಕ ಇದನ್ನು ಪ್ರಾರಂಭಿಸುತ್ತೇವೆ ಎಂದರು. 

'ದಿ ಕೇರಳ ಸ್ಟೋರಿ' ತಂಡದ ಜೊತೆಗೆ 26 ಮಂದಿ ಮತಾಂತರದ ಬಲಿಪಶುಗಳೂ ವೇದಿಕೆಯಲ್ಲಿ ಕಾಣಿಸಿಕೊಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com