ಚಂಡೀಗಢ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೇ.22 ರಂದು ರಾತ್ರಿ ದೆಹಲಿಯಿಂದ ಚಂಡೀಗಢಕ್ಕೆ ಟ್ರಕ್ ನಲ್ಲಿ ಸಂಚಾರ ಮಾಡಿದ್ದ ಫೋಟೋ ಈಗ ವೈರಲ್ ಆಗತೊಡಗಿದೆ.
ಟ್ವಿಟರ್ ಹ್ಯಾಂಡಲ್ ನಲ್ಲಿ ಕಾಂಗ್ರೆಸ್ ಪಕ್ಷ ಈ ಫೋಟೋವನ್ನು ಹಂಚಿಕೊಂಡಿದ್ದು ನಿಮ್ಮ ರಾಹುಲ್ ಗಾಂಧಿ, ನಿಮ್ಮ ನಡುವೆ ಎಂಬ ಶೀರ್ಷಿಕೆ ನೀಡಿದೆ.
ಮಾಧ್ಯಮಗಳ ವರದಿಯನ್ನು ಉಲ್ಲೇಖಿಸಿರುವ ಕಾಂಗ್ರೆಸ್ ಪಕ್ಷ, ದೇಶದಲ್ಲಿ 90 ಲಕ್ಷ ಟ್ರಕ್ ಚಾಲಕರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಟ್ರಕ್ ಚಾಲಕರ ಮನಸ್ಸಿನ ಮಾತುಗಳನ್ನು (ಮನ್ ಕೀ ಬಾತ್) ನ್ನು ಅರ್ಥ ಮಾಡಿಕೊಳ್ಳುವುದಕ್ಕಾಗಿ ರಾಹುಲ್ ಟ್ರಕ್ ನಲ್ಲಿ ಸಂಚರಿಸಿ ಚಾಲಕರನ್ನು ಭೇಟಿ ಮಾಡಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ.
ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಕುಟುಂಬದೊಂದಿಗೆ ಶಿಮ್ಲಾಗೆ ಹೋಗುತ್ತಿದ್ದಾರೆ ಎಂದು ತಿಳಿದುಬಂದಿದೆ. ಕರ್ನಾಟಕ ಚುನಾವಣೆ ಸಂದರ್ಭದಲ್ಲಿ ರಾಹುಲ್ ಗಾಂಧಿ ಇದೇ ಮಾದರಿಯಲ್ಲಿ ಬೆಂಗಳೂರಿನಲ್ಲಿ ಬ್ಲಿಂಕಿಟ್ ಡೆಲಿವರಿ ಎಕ್ಸಿಕ್ಯೂಟಿವ್ ಜೊತೆ ಪಿಲಿಯನ್ ಸವಾರಿ ಮಾಡಿದ್ದರು ಈ ವೇಳೆ ಅವರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಯತ್ನಿಸಿದ್ದರು. ಶಿಮ್ಲಾ ಭೇಟಿ ಬಳಿಕ ಮೇ 29ರಂದು ರಾಹುಲ್ ಅಮೆರಿಕಕ್ಕೆ ತೆರಳಲಿದ್ದಾರೆ.
Advertisement