ಹೈದರಾಬಾದ್: ಶ್ರದ್ಧಾ ಹತ್ಯೆ ಮಾದರಿಯಲ್ಲೇ ಮಹಿಳೆ ಹತ್ಯೆಗೈದು ಪೀಸ್ ಪೀಸ್ ಮಾಡಿದ ವ್ಯಕ್ತಿಯ ಬಂಧನ
ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಶ್ರದ್ಧಾ ವಾಕರ್ ಹತ್ಯೆಯ ಮಾದರಿಯಲ್ಲೇ ಹೈದರಾಬಾದ್ ನಲ್ಲಿ ಮಹಿಳೆಯನ್ನು ಹತ್ಯೆ ಮಾಡಿದ ವ್ಯಕ್ತಿಯನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.
Published: 25th May 2023 01:15 AM | Last Updated: 25th May 2023 06:26 PM | A+A A-

ಸಾಂದರ್ಭಿಕ ಚಿತ್ರ
ಹೈದರಾಬಾದ್: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಶ್ರದ್ಧಾ ವಾಕರ್ ಹತ್ಯೆಯ ಮಾದರಿಯಲ್ಲೇ ಹೈದರಾಬಾದ್ ನಲ್ಲಿ ಮಹಿಳೆಯನ್ನು ಹತ್ಯೆ ಮಾಡಿದ ವ್ಯಕ್ತಿಯನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಬಿ ಚಂದ್ರಮೋಹನ್ (48) ಎಂದು ಗುರುತಿಸಲಾಗಿದೆ.
ಆರೋಪಿ ಚಂದ್ರ ಮೋಹನ್, ತನ್ನೊಂದಿಗೆ ಸಂಬಂಧ ಹೊಂದಿದ್ದ ಅನುರಾಧಾ ರೆಡ್ಡಿಯನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ. ನಂತರ ಆಕೆಯ ದೇಹವನ್ನು ವಿಲೇವಾರಿ ಮಾಡಲು ಹಲವು ತುಂಡುಗಳಾಗಿ ಕತ್ತರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
"ಮೇ 17 ರಂದು, ಅಫ್ಜಲ್ ನಗರದ ಸಮುದಾಯ ಭವನದ ಎದುರು, ಮೂಸಿ ನದಿಯ ಸಮೀಪ ಕಸ ಎಸೆಯುವ ಸ್ಥಳದಲ್ಲಿ, ತೀಗಲ್‌ಗುಡ ರಸ್ತೆಯ ಪಕ್ಕದಲ್ಲಿ ಕಪ್ಪು ಕವರ್‌ನಲ್ಲಿ ಅಪರಿಚಿತ ಮಹಿಳೆಯ ತಲೆ ಇರುವ ಮಾಹಿತಿಯನ್ನು ಪೌರ ಕಾರ್ಮಿಕರೊಬ್ಬರು ನಮಗೆ ತಿಳಿಸಿದ್ದರು" ಎಂದು ಆಗ್ನೇಯ ವಲಯ ಡಿಸಿಪಿ ಸಿ.ಎಚ್.ರೂಪೇಶ್ ಹೇಳಿದ್ದಾರೆ.
ಇದನ್ನು ಓದಿ: ಪ್ರಿಯಕರನ ಜೊತೆ ಸೇರಿ ಪತಿಯ ಹತ್ಯೆ: ಆತ್ಮಹತ್ಯೆ ಎಂದು ಬಿಂಬಿಸಿದ್ದ ಪತ್ನಿ ಬಂಧನ
"ನಾವು (ಪೊಲೀಸರು) ಈ ಕುರಿತು ತನಿಖೆಗಾಗಿ ಒಟ್ಟು ಎಂಟು ತಂಡಗಳನ್ನು ರಚಿಸಿದ್ದೇವೆ. ಒಂದು ವಾರದಲ್ಲಿ ನಮಗೆ ಒಬ್ಬ ಆರೋಪಿ ಪತ್ತೆಯಾದ. ಆರೋಪಿಯ ವಿಚಾರಣೆಯ ನಂತರ, ಮೃತರನ್ನು 55 ವರ್ಷದ ವೈ ಅನುರಾಧಾ ರೆಡ್ಡಿ ಎಂದು ಗುರುತಿಸಲಾಯಿತು" ಅವರು ತಿಳಿಸಿದ್ದಾರೆ.
ಆರೋಪಿಯು ಮೃತಳೊಂದಿಗೆ ಸಂಬಂಧ ಹೊಂದಿದ್ದನು ಮತ್ತು ಆರೋಪಿಯು ನೆಲ ಮಹಡಿಯಲ್ಲಿರುವ ತನ್ನ ಮನೆಯ ಒಂದು ಭಾಗವನ್ನು ಮಹಿಳೆಯ ವಾಸಕ್ಕೆ ನೀಡಿದ್ದನು. ಆರೋಪಿಯು ಈ ಮಹಿಳೆಯೊಂದಿಗೆ 2018 ರಿಂದ ಸಂಬಂಧ ಹೊಂದಿದ್ದು, ಆಕೆಯಿಂದ 7 ಲಕ್ಷ ರೂ. ಸಾಲ ಪಡೆದಿದ್ದನು. ಹಣ ವಾಪಸ್ ನೀಡುವಂತೆ ಮಹಿಳೆ ಪದೇ ಪದೇ ಮನವಿ ಮಾಡಿದರೂ ಹಣ ಹಿಂದಿರುಗಿಸಲಿಲ್ಲ. ಮೃತ ಮಹಿಳೆ ಹಣಕ್ಕಾಗಿ ಆರೋಪಿಯ ಮೇಲೆ ಪದೇಪದೆ ಒತ್ತಡ ಹಾಕುತ್ತಿದ್ದರು. ಇದರಿಂದ ಕೋಪಗೊಂಡ ಆರೋಪಿ ಮೇ 12 ರಂದು ಮಹಿಳೆಯನ್ನು ಹತ್ಯೆ ಮಾಡಿದ್ದಾನೆ ಎಂದು ರೂಪೇಶ್ ಹೇಳಿದ್ದಾರೆ.