ಉದಯನಿಧಿ ಸ್ಟಾಲಿನ್ ಫೌಂಡೇಶನ್‌ನ 36 ಕೋಟಿ ರೂ. ಮೊತ್ತದ ಆಸ್ತಿ, ಬ್ಯಾಂಕ್ ಠೇವಣಿ ಇಡಿಯಿಂದ ಜಪ್ತಿ

ಅಕ್ರಮ ಹಣ ವರ್ಗಾವಣೆ ಕುರಿತ ತನಿಖೆಯ ಭಾಗವಾಗಿ ಉದಯನಿಧಿ ಸ್ಟಾಲಿನ್ ಫೌಂಡೇಶನ್ ಅವರ ಬ್ಯಾಂಕ್ ಖಾತೆಯಲ್ಲಿ ಇರಿಸಲಾಗಿದ್ದ 34.7 ಲಕ್ಷ ರೂ ಹಾಗೂ ತಮಿಳುನಾಡಿನಾದ್ಯಂತ 36 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಸ್ಥಿರಾಸ್ತಿಯನ್ನು ಜಪ್ತಿ ಮಾಡಲಾಗಿದೆ.  
ತಂದೆ ತಾಯಿಯೊಂದಿಗೆ ಉದಯನಿಧಿ ಸ್ಟಾಲಿನ್
ತಂದೆ ತಾಯಿಯೊಂದಿಗೆ ಉದಯನಿಧಿ ಸ್ಟಾಲಿನ್

ಚೆನ್ನೈ: ಅಕ್ರಮ ಹಣ ವರ್ಗಾವಣೆ ಕುರಿತ ತನಿಖೆಯ ಭಾಗವಾಗಿ ಉದಯನಿಧಿ ಸ್ಟಾಲಿನ್ ಫೌಂಡೇಶನ್ ಅವರ ಬ್ಯಾಂಕ್ ಖಾತೆಯಲ್ಲಿ ಇರಿಸಲಾಗಿದ್ದ 34.7 ಲಕ್ಷ ರೂ ಹಾಗೂ ತಮಿಳುನಾಡಿನಾದ್ಯಂತ 36 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಸ್ಥಿರಾಸ್ತಿಯನ್ನು ಜಪ್ತಿ ಮಾಡಲಾಗಿದೆ.  

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ವಿವಿಧ ಸೆಕ್ಷನ್ ಅಡಿಯಲ್ಲಿ ಕಲ್ಲಾಲ್ ಗ್ರೂಪ್,  ಯುಕೆ ಮೂಲದ ಲೈಕಾ ಗ್ರೂಪ್ ಮತ್ತು ಅದರ ಭಾರತೀಯ ಕಂಪನಿಗಳಾದ ಲೈಕಾ ಪ್ರೊಡಕ್ಷನ್ಸ್ ಮತ್ತು ಲೈಕಾ ಹೋಟೆಲ್‌ಗಳ ವಿರುದ್ಧ ತನಿಖೆ ನಡೆಸಲಾಗುತ್ತಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ. 

ಏಪ್ರಿಲ್ ಮತ್ತು ಈ ತಿಂಗಳ ಆರಂಭದಲ್ಲಿ ಎರಡು ಸಂಸ್ಥೆಗಳಲ್ಲಿ ಇಡಿ ಶೋಧ ಕಾರ್ಯಾಚರಣೆ ನಡೆಸಿತ್ತು. ಚೆನ್ನೈನ ಸೆಂಟ್ರಲ್ ಕ್ರೈಮ್ ನಿಂದ ದಾಖಲಿಸಲಾದ ಎಫ್ ಐಆರ್ ಆಧಾರದ ಮೇಲೆ ತನಿಖೆ ನಡೆಸಲಾಗುತಿತ್ತು. ಕಲ್ಲಾಲ್ ಗ್ರೂಪ್ ಮತ್ತು ಅದರ ನಿರ್ದೇಶಕರು, ಸಂಸ್ಥಾಪಕರಾದ ಸರವಣನ್ ಪಳನಿಯಪ್ಪನ್, ವಿಜಯಕುಮಾರನ್, ಅರವಿಂತ್ ರಾಜ್ ಮತ್ತು ವಿಜಯ್ ಅನಂತ್ ಅವರು 114.37 ಕೋಟಿ ರೂಪಾಯಿಗಳನ್ನು ವಂಚಿಸಿದ್ದಾರೆ ಎಂದು ದೂರುದಾರ ಪೆಟ್ಟಿಗೋ ಕಮರ್ಷಿಯೋ ಇಂಟರ್ ನ್ಯಾಷನಲ್  ಎಲ್‌ಡಿಎ ನಿರ್ದೇಶಕ ಗೌರವ್ ಚರ್ಚಾ ಆರೋಪಿದ್ದರು ಎಂದು ಇಡಿ ಹೇಳಿಕೆಯಲ್ಲಿ ತಿಳಿಸಿದೆ.

ವಾಸ್ತವವಾಗಿ ಈ ವಂಚನೆಯೂ 300 ಕೋಟಿ ರೂ. ಆಗಿದೆ.  ಇದು ಆರೋಪಿಗಳು ಮತ್ತು ದೂರುದಾರರ ವಿರುದ್ಧ ಹುಡುಕಾಟಕ್ಕೆ ಕಾರಣವಾಯಿತು. ಮೇ 25 ರಂದು ಇಡಿ ತಮಿಳುನಾಡಿನಾದ್ಯಂತ 36.3 ಕೋಟಿ ರೂಪಾಯಿ ಮೌಲ್ಯದ ವಿವಿಧ ಸ್ಥಿರಾಸ್ತಿ ಮತ್ತು ಉದಯನಿಧಿ ಸ್ಟಾಲಿನ್ ಫೌಂಡೇಶನ್ ಅವರ ಬ್ಯಾಂಕ್ ಖಾತೆಯಲ್ಲಿ ಲಭ್ಯವಿದ್ದ 34.7 ಲಕ್ಷ ರೂಪಾಯಿ ಜಪ್ತಿ ಮಾಡಲಾಗಿದೆ ಎಂದು ತನಿಖಾ ಏಜೆನ್ಸಿ ಮಾಹಿತಿ ನೀಡಿದೆ. 

ಲೈಕಾ ಪ್ರೊಡಕ್ಷನ್ಸ್ ತಮಿಳು ಮತ್ತು ಹಿಂದಿ ಚಲನಚಿತ್ರಗಳ ನಿರ್ಮಾಣ ಮತ್ತು ವಿತರಣೆಯಲ್ಲಿ ತೊಡಗಿರುವ ಮನರಂಜನಾ ಕಂಪನಿಯಾಗಿದೆ ಮತ್ತು ಇದು ಇತ್ತೀಚೆಗೆ ಪೊನ್ನಿಯಿನ್ ಸೆಲ್ವನ್ 1 ಮತ್ತು ಪೊನ್ನಿಯಿನ್ ಸೆಲ್ವನ್: II ಚಿತ್ರಗಳಿಂದಾಗಿ ಸುದ್ದಿಯಲ್ಲಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com