ಮನ್ ಕಿ ಬಾತ್: ಪ್ರಧಾನಿ ಮೋದಿ ಜೊತೆ ಅನುಭವ ಹಂಚಿಕೊಂಡ ಅರುಣಾಚಲ ಪ್ರದೇಶ, ಬಿಹಾರ ವಿದ್ಯಾರ್ಥಿಗಳು

ಇಂದು ಭಾನುವಾರ ನಡೆದ 'ಮನ್ ಕಿ ಬಾತ್' ರೇಡಿಯೋ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅರುಣಾಚಲ ಪ್ರದೇಶದ ಗ್ಯಾಮರ್ ನ್ಯೋಕುಮ್ ಮತ್ತು ಬಿಹಾರದ ವಿಶಾಖ ಸಿಂಗ್ ಎಂಬ ಇಬ್ಬರು ವಿದ್ಯಾರ್ಥಿಗಳೊಂದಿಗೆ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಇಂದು ಭಾನುವಾರ ನಡೆದ 'ಮನ್ ಕಿ ಬಾತ್' ರೇಡಿಯೋ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅರುಣಾಚಲ ಪ್ರದೇಶದ ಗ್ಯಾಮರ್ ನ್ಯೋಕುಮ್ ಮತ್ತು ಬಿಹಾರದ ವಿಶಾಖ ಸಿಂಗ್ ಎಂಬ ಇಬ್ಬರು ವಿದ್ಯಾರ್ಥಿಗಳೊಂದಿಗೆ ಮಾತನಾಡಿದರು.

ಎರಡು ರಾಜ್ಯಗಳ ಜನರ ನಡುವೆ ಹೊಸ ಸಂಸ್ಕೃತಿಗಳನ್ನು ಪರಿಚಯಿಸುವ ಉದ್ದೇಶದಿಂದ ಯುವ ಸಂಗಮ ಉಪಕ್ರಮದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಆಂಧ್ರ ಪ್ರದೇಶದ ಎನ್ ಐಟಿಯಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಯಾಗಿರುವ ನ್ಯೋಕುಮ್ ಅವರು ತಮ್ಮ ಸಂಸ್ಥೆಯ ಮೂಲಕ ಯುವ ಸಂಗಮ್ ಬಗ್ಗೆ ಕಲಿತರು. ನಂತರ ಇಂಟರ್ನೆಟ್‌ನಲ್ಲಿ ಅದರ ಬಗ್ಗೆ ಮಾಹಿತಿಗಾಗಿ ಹುಡುಕಿದರು ಎಂದು ಪ್ರಧಾನಿ ಮೋದಿಯವರಿಗೆ ತಿಳಿಸಿದರು. ಅವರು ಯುವ ಸಂಗಮ್ ಮೂಲಕ ರಾಜಸ್ಥಾನಕ್ಕೆ ಪ್ರಯಾಣಿಸಿ ರಾಜ್ಯದ ಶ್ರೀಮಂತ ಸಂಸ್ಕೃತಿಯನ್ನು ಕಂಡಿದ್ದಾರೆ. 

ಅರುಣಾಚಲ ಪ್ರದೇಶದ ಹೊರಗಿನ ಸ್ಥಳಕ್ಕೆ ನಾನು ಮೊದಲ ಬಾರಿಗೆ ಭೇಟಿ ನೀಡಿದ್ದೇನೆ. ರಾಜಸ್ಥಾನದ ರೋಮಾಂಚಕ ಸಂಸ್ಕೃತಿಯ ಬಗ್ಗೆ ನಾನು ಕಲಿತಿದ್ದೇನೆ ಎಂದು ನ್ಯೋಕುಮ್ ಪ್ರಧಾನಿ ಮೋದಿಯೊಂದಿಗೆ ಹಂಚಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಅರುಣಾಚಲ ಪ್ರದೇಶದ ಗಡಿಯಲ್ಲಿ ನಿಯೋಜಿಸಲಾದ ಅನೇಕ ಸೈನಿಕರು ರಾಜಸ್ಥಾನದಿಂದ ಬಂದವರು ಎಂದು ಮೋದಿ ಗ್ಯಾಮರ್ ಅವರಿಗೆ ತಿಳಿಸಿದರು.

ಪಿಎಂ ಮೋದಿ, ತಮ್ಮ ಪ್ರಯಾಣದ ಬಗ್ಗೆ ಬ್ಲಾಗ್ ಬರೆಯಲು ನ್ಯೋಕುಮ್ ಅವರನ್ನು ವಿನಂತಿಸಿದರ. ಹೊಸ ಸಂಸ್ಕೃತಿಗಳ ಬಗ್ಗೆ ಹೇಗೆ ಕಲಿತರು ಮತ್ತು ರಾಜಸ್ಥಾನದ ಪರಂಪರೆಯನ್ನು ಅನುಭವಿಸಿದರು.

ನ್ಯೋಕುಮ್ ನಂತರ, ಪ್ರಧಾನಿ ಮೋದಿ ಬಿಹಾರದ ಸಸಾರಾಮ್ ಗ್ರಾಮದಿಂದ ವಿಶಾಖ ಸಿಂಗ್ ಅವರೊಂದಿಗೆ ಮಾತನಾಡಿದರು. ಅವರು ಪ್ರಸ್ತುತ ಕಂಪ್ಯೂಟರ್ ಸೈನ್ಸ್ ಓದುತ್ತಿದ್ದು, ಕಾರ್ಯಕ್ರಮದ ಎರಡನೇ ವರ್ಷದಲ್ಲಿದ್ದಾರೆ. ತನ್ನ ಕಾಲೇಜಿನ ವಾಟ್ಸಾಪ್ ಗ್ರೂಪ್ ಮೂಲಕ ಯುವ ಸಂಗಮ್ ಬಗ್ಗೆ ತಿಳಿದುಕೊಂಡಿದ್ದೇನೆ. ಅದರಲ್ಲಿ ಭಾಗವಹಿಸಲು ನಿರ್ಧರಿಸಿದ್ದೇನೆ ಎಂದು ಸಿಂಗ್ ಪ್ರಧಾನಿ ಮೋದಿಗೆ ತಿಳಿಸಿದರು.

ಬಿಹಾರ ಮತ್ತು ತಮಿಳುನಾಡಿನ ಆಹಾರ ಸಂಸ್ಕೃತಿ ವಿಭಿನ್ನವಾಗಿರುವ ಕಾರಣ, ನೀವು ಹೊಸ ಸಂಸ್ಕೃತಿಗಳ ಬಗ್ಗೆ ಕಲಿತಿದ್ದೀರಾ ಮತ್ತು ವಿಭಿನ್ನ ಆಹಾರಗಳನ್ನು ಪ್ರಯತ್ನಿಸಿದ್ದೀರಾ ಎಂದು ಪ್ರಧಾನಿ ಮೋದಿ ವಿಶಾಖಾ ಸಿಂಗ್ ಅವರನ್ನು ಕೇಳಿದಾಗ, ಎಲ್ಲವೂ ಅದ್ಭುತವಾಗಿದೆ ಎಂದು ಉತ್ತರಿಸಿದರು.

ವಿಶಾಖಾ ಅವರು ತಮ್ಮ ಅನುಭವವನ್ನು ಹಂಚಿಕೊಳ್ಳಲು ಮತ್ತು ಹೊಸ ಸಂಸ್ಕೃತಿಯ ಬಗ್ಗೆ ಹೇಗೆ ಕಲಿತರು ಎಂಬುದರ ಕುರಿತು ಇತರರಿಗೆ ತಿಳಿಸಲು ಬ್ಲಾಗ್ ಬರೆಯುವಂತೆ ಪ್ರಧಾನಿ ಮೋದಿ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com