ಕುನೋ ಕಾಡಿನ ದೊಡ್ಡ ಕಾಡು ಪ್ರದೇಶಕ್ಕೆ ಮತ್ತೊಂದು ಚೀತಾ ಬಿಡುಗಡೆ; ಆವರಣದಲ್ಲಿರುವ ಚೀತಾಗಳ ಸಂಖ್ಯೆ 7ಕ್ಕೆ ಏರಿಕೆ

ಕುನೋ ರಾಷ್ಟ್ರೀಯ ಉದ್ಯಾನವನ (ಕೆಎನ್ ಪಿ) ನಲ್ಲಿ ಮತ್ತೊಂದು ಚೀತಾವನ್ನು ಬೇಟೆಗೆ ಅನುಕೂಲಕರವಾಗಿರುವ ದೊಡ್ಡ ಆವರಣಕ್ಕೆ ಬಿಡುಗಡೆ ಮಾಡಲಾಗಿದೆ.  
ಚೀತಾ
ಚೀತಾ

ಭೋಪಾಲ್:  ಕುನೋ ರಾಷ್ಟ್ರೀಯ ಉದ್ಯಾನವನ (ಕೆಎನ್ ಪಿ) ನಲ್ಲಿ ಮತ್ತೊಂದು ಚೀತಾವನ್ನು ಬೇಟೆಗೆ ಅನುಕೂಲಕರವಾಗಿರುವ ದೊಡ್ಡ ಆವರಣಕ್ಕೆ ಬಿಡುಗಡೆ ಮಾಡಲಾಗಿದೆ.  

ಈ ಮೂಲಕ ಉದ್ಯಾನವನದ ದೊಡ್ಡ ಆವರಣದಲ್ಲಿರುವ ಚೀತಾಗಳ ಸಂಖ್ಯೆ 7 ಕ್ಕೆ ಏರಿಕೆಯಾಗಿದೆ. 3-4 ವರ್ಷ ವಯಸ್ಸಾಗಿರುವ ದಕ್ಷಿಣ ಆಫ್ರಿಕಾದ ಹೆಣ್ಣು ಚೀತಾ ನೀರ್ವಾ ಭಾನುವಾರ ಸಂಜೆ ಉದ್ಯಾನವನದ ಬೇಟೆಗೆ ಮುಕ್ತವಾಗಿರುವ ಆವರಣ ಪ್ರವೇಶಿಸಿದೆ ಎಂದು ರಾಷ್ಟ್ರೀಯ ಉದ್ಯಾನವನದ ವಿಭಾಗೀಯ ಅರಣ್ಯಾಧಿಕಾರಿ (ಡಿಎಫ್ಒ) ಪ್ರಕಾಶ್ ಕುಮಾರ್ ವರ್ಮಾ ತಿಳಿಸಿದ್ದಾರೆ.

ಇಲ್ಲಿಯವರೆಗೆ, ಏಳು ಚಿರತೆಗಳನ್ನು ಮುಕ್ತ ವಾತಾವರಣಕ್ಕೆ ಬಿಡುಗಡೆ ಮಾಡಲಾಗಿದೆ, ಆದರೆ ಇನ್ನೂ 10 ಚೀತಾಗಳನ್ನು ದೊಡ್ಡ ಆವರಣಗಳಲ್ಲಿ ಇರಿಸಲಾಗಿದೆ ಎಂದು ಅವರು ಹೇಳಿದರು.

ಉಳಿದ ಚಿರತೆಗಳನ್ನು ಕಾಡಿಗೆ ಬಿಡುವ ಕುರಿತು ಕೇಂದ್ರ ರಚಿಸಿರುವ ಸ್ಟೀರಿಂಗ್ ಸಮಿತಿ ನಿರ್ಧಾರ ಕೈಗೊಳ್ಳಲಿದೆ. ಸಮಿತಿಯ ಸದಸ್ಯರು ಮಂಗಳವಾರ ಕೆಎನ್‌ಪಿಗೆ ಭೇಟಿ ನೀಡಲಿದ್ದಾರೆ ಎಂದು ಸ್ಥಳೀಯ ಅಧಿಕಾರಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com