ಚೀನಾದ ಎಲ್ಎಸಿ ಪರಿಸ್ಥಿತಿ ಬಗ್ಗೆ ಕೇಂದ್ರ ಶ್ವೇತಪತ್ರ ಪ್ರಕಟಿಸಲಿ: ಕಾಂಗ್ರೆಸ್ ಆಗ್ರಹ
ಗಡಿ ವಿಷಯವಾಗಿ ಬಿಜೆಪಿ ನೇತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ಮನೀಷ್ ತಿವಾರಿ, ಚೀನಾದೊಂದಿಗಿನ ಎಲ್ಎಸಿಯಾದ್ಯಂತ ಇರುವ ಪರಿಸ್ಥಿತಿಯ ಬಗ್ಗೆ ತಕ್ಷಣವೇ ಶ್ವೇತ ಪತ್ರ ಪ್ರಕಟಿಸಲಿ ಎಂದು ಒತ್ತಾಯಿಸಿದ್ದಾರೆ.
Published: 30th May 2023 07:21 PM | Last Updated: 30th May 2023 07:43 PM | A+A A-

ಮನೀಶ್ ತಿವಾರಿ
ನವದೆಹಲಿ: ಗಡಿ ವಿಷಯವಾಗಿ ಬಿಜೆಪಿ ನೇತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ಮನೀಷ್ ತಿವಾರಿ, ಚೀನಾದೊಂದಿಗಿನ ಎಲ್ಎಸಿಯಾದ್ಯಂತ ಇರುವ ಪರಿಸ್ಥಿತಿಯ ಬಗ್ಗೆ ತಕ್ಷಣವೇ ಶ್ವೇತ ಪತ್ರ ಪ್ರಕಟಿಸಲಿ ಎಂದು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಮಾಜಿ ಕೇಂದ್ರ ಸಚಿವರು, ಪ್ರಧಾನಿ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ 9 ವರ್ಷದ ಆಡಳಿತವನ್ನು ವಿಮರ್ಶಿಸಿದ್ದಾರೆ. "ಯಾವುದೇ ಸರ್ಕಾರದ ಕಾರ್ಯಕ್ಷಮತೆ 5 ಮಾನದಂಡಗಳಲ್ಲಿರುತ್ತದೆ. ಅವು ಭಾರತದ ಬಾಹ್ಯ ಸುರಕ್ಷತೆ, ಆರ್ಥಿಕತೆಯ ಸ್ಥಿತಿ, ಸಾಮಾಜಿಕ ಒಗ್ಗಟ್ಟು, ಆಂತರಿಕ ಭದ್ರತೆ ಹಾಗೂ ಜಗತ್ತಿನ ಜೊತೆಗೆ ಭಾರತದ ಸಂಬಂಧ ಅಥವಾ ವಿದೇಶಾಂಗ ನೀತಿಗಳಾಗಿವೆ. ಪ್ರತಿಯೊಂದು ಮಾನದಂಡಗಳಲ್ಲಿಯೂ ಕಳೆದ 9 ವರ್ಷಗಳಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ ಎಂದು ತಿವಾರಿ ಆರೋಪಿಸಿದ್ದಾರೆ.
ಭಾರತವು ಹಲವಾರು ದಶಕಗಳಲ್ಲಿ ಎದುರಿಸುತ್ತಿರುವ ಬಾಹ್ಯ ಭದ್ರತಾ ಸವಾಲನ್ನು ಇಂದು ಎದುರಿಸುತ್ತಿದೆ ಎಂದು ಅವರು ಹೇಳಿದ್ದಾರೆ. "ಮೂರು ವರ್ಷಗಳಿಂದ, ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಭಾರತೀಯ ಭೂಪ್ರದೇಶದಲ್ಲಿ ನಡೆಸಿರುವ ಗಡಿ ಉಲ್ಲಂಘನೆಯಿಂದ ತನ್ನ ಪಡೆಯನ್ನು ಹಿಂತೆಗೆದುಕೊಂಡಿಲ್ಲ. ಭಾರತದ ಗ್ರಹಿಕೆಯಲ್ಲಿನ ವಲಯಗಳಲ್ಲಿ, ಎಲ್ಲಾ ಬಫರ್ ಭೂಪ್ರದೇಶವನ್ನು ಚೀನಾ ರಚಿಸಿದೆ ಎಂದು ತಿವಾರಿ ಆರೋಪಿಸಿದ್ದಾರೆ.
LIVE: Press Conference by Shri @ManishTewari in Bengaluru, Karnataka. https://t.co/sN4rq4BExa
— Congress (@INCIndia) May 30, 2023
"ಚೀನಾದೊಂದಿಗೆ ವಾಸ್ತವಿಕ ನಿಯಂತ್ರಣ ರೇಖೆಯ ಉದ್ದಕ್ಕೂ ಪರಿಸ್ಥಿತಿ ಏನು?, ಎಷ್ಟು ಬಫರ್ ವಲಯಗಳನ್ನು ರಚಿಸಲಾಗಿದೆ, ಅವುಗಳಲ್ಲಿ ಎಷ್ಟು ಭಾರತೀಯ ಭೂಪ್ರದೇಶದಲ್ಲಿವೆ ಮತ್ತು ಹೇಗೆ ಎಂಬುದರ ಕುರಿತು ಎನ್‌ಡಿಎ-ಬಿಜೆಪಿ ಸರ್ಕಾರ ತಕ್ಷಣವೇ ಶ್ವೇತಪತ್ರವನ್ನು ಪ್ರಕಟಿಸಬೇಕೆಂದು ನಾವು ಒತ್ತಾಯಿಸುತ್ತೇವೆ. ಹೆಚ್ಚಿನ ಪ್ರದೇಶವನ್ನು ನಾವು ಕಳೆದುಕೊಂಡಿದ್ದೇವೆ" ಎಂದು ಮನೀಷ್ ತಿವಾರಿ ಹೇಳಿದರು. ಭಾರತವು LAC ಉದ್ದಕ್ಕೂ 65 ಗಸ್ತು ಕೇಂದ್ರಗಳಲ್ಲಿ (PPs) 26 ಪ್ರವೇಶವನ್ನು ಕಳೆದುಕೊಂಡಿದೆ ಎಂದು ತಿಳಿಸುವ ವರದಿಗಳನ್ನು ಸುದ್ದಿಗೋಷ್ಠಿಯಲ್ಲಿ ತಿವಾರಿ ತೋರಿಸಿದ್ದು, ಇದು ಸುಮಾರು 2,000 ಚದರ ಕಿಲೋಮೀಟರ್ ಪ್ರದೇಶದಷ್ಟಿದೆ.