ಗೋವಾ-ದೆಹಲಿ ವಿಮಾನದಲ್ಲಿ ಪ್ರಯಾಣಿಕನಿಂದ ಏರ್ ಇಂಡಿಯಾ ಸಿಬ್ಬಂದಿಗೆ ಥಳಿತ
ಕಳೆದ ಕೆಲವು ತಿಂಗಳುಗಳಲ್ಲಿ ವಿಮಾನಗಳಲ್ಲಿ ಪ್ರಯಾಣಿಕರು ಅಸಭ್ಯವಾಗಿ ವರ್ತಿಸುವ ಮೂಲಕ ಇತರ ಜನರಿಗೆ ತೊಂದರೆ ನೀಡುವ ಇಂತಹ ಅನೇಕ ಪ್ರಕರಣಗಳು ಮುನ್ನೆಲೆಗೆ ಬಂದಿವೆ. ಏರ್ ಇಂಡಿಯಾದ ಗೋವಾ-ದೆಹಲಿ ವಿಮಾನದಲ್ಲಿ ಅಂತಹ ಒಂದು ಪ್ರಕರಣ ಕಂಡುಬಂದಿದೆ.
Published: 30th May 2023 07:09 PM | Last Updated: 30th May 2023 07:42 PM | A+A A-

ಏರ್ ಇಂಡಿಯಾ
ನವದೆಹಲಿ: ಕಳೆದ ಕೆಲವು ತಿಂಗಳುಗಳಲ್ಲಿ ವಿಮಾನಗಳಲ್ಲಿ ಪ್ರಯಾಣಿಕರು ಅಸಭ್ಯವಾಗಿ ವರ್ತಿಸುವ ಮೂಲಕ ಇತರ ಜನರಿಗೆ ತೊಂದರೆ ನೀಡುವ ಇಂತಹ ಅನೇಕ ಪ್ರಕರಣಗಳು ಮುನ್ನೆಲೆಗೆ ಬಂದಿವೆ. ಏರ್ ಇಂಡಿಯಾದ ಗೋವಾ-ದೆಹಲಿ ವಿಮಾನದಲ್ಲಿ ಅಂತಹ ಒಂದು ಪ್ರಕರಣ ಕಂಡುಬಂದಿದೆ.
ನಿನ್ನೆ ಗೋವಾದಿಂದ ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದ ಪುರುಷ ಪ್ರಯಾಣಿಕರೊಬ್ಬರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಇಳಿದ ನಂತರ ಭದ್ರತಾ ಸಿಬ್ಬಂದಿಗೆ ಹಸ್ತಾಂತರಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ಈ ಕುರಿತು ಮಾಹಿತಿ ನೀಡಿದೆ.
ಏರ್ ಇಂಡಿಯಾ ವಕ್ತಾರರು ಹೇಳುವಂತೆ, ಪ್ರಯಾಣಿಕರೊಬ್ಬರು ಸಿಬ್ಬಂದಿಯನ್ನು ನಿಂದಿಸಿದ್ದು ಅಲ್ಲದೆ ಅವರಲ್ಲಿ ಒಬ್ಬರ ಮೇಲೆ ಹಲ್ಲೆ ಮಾಡಿದ್ದಾರೆ. ದೆಹಲಿ ವಿಮಾನ ನಿಲ್ದಾಣದಲ್ಲಿ ಇಳಿದ ನಂತರವೂ ಸಹ ಪ್ರಯಾಣಿಕರು ಅಶಿಸ್ತಿನ ವರ್ತನೆಯನ್ನು ಮುಂದುವರೆಸಿದ್ದು ಆತನನ್ನು ಭದ್ರತಾ ಸಿಬ್ಬಂದಿಗೆ ಒಪ್ಪಿಸಲಾಯಿತು. ಘಟನೆ ಬಗ್ಗೆ ನಿಯಂತ್ರಕರಿಗೆ ಮಾಹಿತಿ ನೀಡಿದ್ದೇವೆ ಎಂದರು.
'ನಮ್ಮ ಸಿಬ್ಬಂದಿ ಮತ್ತು ಪ್ರಯಾಣಿಕರ ಸುರಕ್ಷತೆಯು ನಮಗೆ ಅತ್ಯಂತ ಮಹತ್ವದ್ದಾಗಿದೆ. ಪ್ರಯಾಣಿಕನ ಈ ಅಶಿಸ್ತಿನ ವರ್ತನೆಯನ್ನು ನಾವು ಬಲವಾಗಿ ಖಂಡಿಸುತ್ತೇವೆ. ಸಂತ್ರಸ್ತ ಸಿಬ್ಬಂದಿ ಸದಸ್ಯರಿಗೆ ನಾವು ಸಾಧ್ಯವಿರುವ ಎಲ್ಲ ನೆರವು ನೀಡುತ್ತೇವೆ. ಎಪ್ರಿಲ್ 10ರಂದು ದೆಹಲಿ-ಲಂಡನ್ ವಿಮಾನದಲ್ಲಿ ಇಬ್ಬರು ಮಹಿಳಾ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಕ್ಕಾಗಿ ಏರ್ ಇಂಡಿಯಾ ಪುರುಷನನ್ನು ಎರಡು ವರ್ಷಗಳ ಕಾಲ ಅಮಾನತುಗೊಳಿಸಿದ್ದು ಅಲ್ಲದೆ ಪ್ರಯಾಣವನ್ನು ನಿಷೇಧಿಸಲಾಗಿದೆ.
ಇದನ್ನೂ ಓದಿ: ವಿಮಾನ ಹಾರಾಟದ ಮಾರ್ಗ ಮಧ್ಯ ತುರ್ತು ಬಾಗಿಲು ತೆರೆದ ಪ್ರಯಾಣಿಕ: 12 ಮಂದಿಗೆ ಗಾಯ; ವಿಡಿಯೋ
ನಿಯಮಗಳ ಪ್ರಕಾರ, ಪ್ರಯಾಣಿಕರ ಇಂತಹ ನಡವಳಿಕೆಯನ್ನು ಮೂರು ಹಂತಗಳಲ್ಲಿ ವರ್ಗೀಕರಿಸಲಾಗಿದೆ. ದೈಹಿಕ ಸನ್ನೆಗಳು, ಮೌಖಿಕ ನಿಂದನೆ ಮತ್ತು ಆಲ್ಕೋಹಾಲ್ ನಶೆಯಂತಹ ಅಶಿಸ್ತಿನ ನಡವಳಿಕೆಯನ್ನು ಹಂತ 1 ಎಂದು ವರ್ಗೀಕರಿಸಲಾಗಿದೆ. ಆದರೆ ದೈಹಿಕವಾಗಿ ನಿಂದಿಸುವ ನಡವಳಿಕೆಗಳಾದ ತಳ್ಳುವುದು, ಒದೆಯುವುದು ಅಥವಾ ಲೈಂಗಿಕ ಕಿರುಕುಳವನ್ನು ಹಂತ 2 ಎಂದು ವರ್ಗೀಕರಿಸಲಾಗಿದೆ.
ವಿಮಾನ ನ್ಯಾವಿಗೇಷನ್ ಸಿಸ್ಟಮ್‌ಗಳನ್ನು ಹಾನಿಗೊಳಿಸುವುದು. ಕತ್ತು ಹಿಸುಕುವುದು ಮತ್ತು ಕೊಲ್ಲುವ ಉದ್ದೇಶದಿಂದ ಹಲ್ಲೆಯಂತಹ ದೈಹಿಕ ಹಿಂಸೆಯಂತಹ ಮಾರಣಾಂತಿಕ ನಡವಳಿಕೆಯನ್ನು ಹಂತ 3 ಎಂದು ಪರಿಗಣಿಸಲಾಗುತ್ತದೆ. ಅಶಿಸ್ತಿನ ನಡವಳಿಕೆಯ ಮಟ್ಟವನ್ನು ಅವಲಂಬಿಸಿ, ಸಂಬಂಧಿತ ಏರ್‌ಲೈನ್‌ನಿಂದ ರಚಿಸಲಾದ ಆಂತರಿಕ ಸಮಿತಿಯು ಅಶಿಸ್ತಿನ ನಡವಳಿಕೆಯ ತಪ್ಪಿತಸ್ಥ ಪ್ರಯಾಣಿಕರನ್ನು ವಿಮಾನಯಾನದಿಂದ ನಿಷೇಧಿಸುವ ಅವಧಿಯನ್ನು ನಿರ್ಧರಿಸಲಾಗುತ್ತದೆ.