ಸಾಕ್ಷಿ ಮಲ್ಲಿಕ್ ಹೊರತುಪಡಿಸಿ, ಮನೆಗಳಿಗೆ ಮರಳಿದ ಹೋರಾಟ ನಿರತ ಕುಸ್ತಿಪಟುಗಳು!
ಡಬ್ಲ್ಯುಎಫ್‌ಐ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಕುಸ್ತಿಪಟುಗಳ ಪೈಕಿ ಸಾಕ್ಷಿ ಮಲ್ಲಿಕ್ ರನ್ನು ಹೊರತು ಪಡಿಸಿ ಉಳಿದೆಲ್ಲ ರೆಸ್ಲರ್ ಗಳು ಮನೆಗೆ ಮರಳಿದ್ದಾರೆ ಎಂದು ಹೇಳಲಾಗಿದೆ.
Published: 31st May 2023 11:31 PM | Last Updated: 02nd June 2023 07:45 PM | A+A A-

ಮನೆಗಳಿಗೆ ಮರಳಿದ ಹೋರಾಟ ನಿರತ ಕುಸ್ತಿಪಟುಗಳು
ಹರಿದ್ವಾರ: ಡಬ್ಲ್ಯುಎಫ್‌ಐ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಕುಸ್ತಿಪಟುಗಳ ಪೈಕಿ ಸಾಕ್ಷಿ ಮಲ್ಲಿಕ್ ರನ್ನು ಹೊರತು ಪಡಿಸಿ ಉಳಿದೆಲ್ಲ ರೆಸ್ಲರ್ ಗಳು ಮನೆಗೆ ಮರಳಿದ್ದಾರೆ ಎಂದು ಹೇಳಲಾಗಿದೆ.
ಸಾಕ್ಷಿ ಮಲಿಕ್ ಹೊರತುಪಡಿಸಿ ಪ್ರತಿಭಟನಾ ನಿರತ ಕುಸ್ತಿಪಟುಗಳು ಹರಿಯಾಣದ ತಮ್ಮ ಮನೆಗಳಿಗೆ ಮರಳಿದ್ದಾರೆ ಮತ್ತು ಮೌನ ಪ್ರತಿಜ್ಞೆಯಿಂದಾಗಿ ಹರಿದ್ವಾರದಲ್ಲಿ ಕಾಯುತ್ತಿದ್ದ ಮಾಧ್ಯಮಗಳೊಂದಿಗೆ ಅವರು ಮಾತನಾಡಲಿಲ್ಲ ಎಂದು ಪ್ರತಿಭಟನಾ ಗುಂಪಿನ ಸದಸ್ಯರೊಬ್ಬರು ಬುಧವಾರ ತಿಳಿಸಿದ್ದಾರೆ.
ಇದನ್ನೂ ಓದಿ: ಲೈಂಗಿಕ ಕಿರುಕುಳ ಆರೋಪ ಸಾಬೀತಾದರೆ ನೇಣು ಹಾಕಿಕೊಳ್ಳುತ್ತೇನೆ: ಬ್ರಿಜ್ ಭೂಷಣ್ ಶರಣ್ ಸಿಂಗ್
ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಎಪ್ರಿಲ್ 23 ರಂದು ಜಂತರ್ ಮಂತರ್‌ನಲ್ಲಿ ಖ್ಯಾತ ಕುಸ್ತಿ ಪಟುಗಳು ತಮ್ಮ ಆಂದೋಲನವನ್ನು ಪುನರಾರಂಭಿಸಿದ್ದರು ಮತ್ತು ಮೇ 28 ರವರೆಗೆ ಅಲ್ಲಿಯೇ ಇದ್ದರು. ನೂತನ ಸಂಸತ್ ಭವನ ಉದ್ಘಾಟನಾ ದಿನದಂದು ಸಂಸತ್ ಭವನದ ಪ್ರವೇಶದ್ವಾರದಲ್ಲಿ ಪ್ರತಿಭಟನೆ ನಡೆಸಿದ್ದರಿಂದ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದರು. ನಂತರ, ಪ್ರತಿಭಟನಾ ಸ್ಥಳವನ್ನು ತೆರವುಗೊಳಿಸಿದರು. ಕುಸ್ತಿಪಟುಗಳನ್ನು ಜಂತರ್ ಮಂತರ್‌ಗೆ ಹಿಂತಿರುಗಿಸಲು ಅನುಮತಿಸುವುದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದರು. ಕುಸ್ತಿಪಟುಗಳ ವಿರುದ್ಧ ಪೊಲೀಸರ ಕ್ರಮಕ್ಕೆ ವಿವಿಧ ವಲಯಗಳಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಮಂಗಳವಾರ, ಅವರು ತಮ್ಮ ಪದಕಗಳನ್ನು ಪವಿತ್ರ ಗಂಗಾ ನದಿಯಲ್ಲಿ ಮುಳುಗಿಸುವುದಾಗಿ ಬೆದರಿಕೆ ಹಾಕಿದರು ಆದರೆ ರೈತ ಮುಖಂಡರು ಆ ರೀತಿ ಹೆಜ್ಜೆ ಇಡದಂತೆ ತಡೆದರು. ಬೆಳಗ್ಗೆಯಿಂದ ಅಳುತ್ತಿದ್ದರು. ಜಿಲ್ಲಾ ಮಟ್ಟದಲ್ಲಿ ಗೆದ್ದ ಪದಕವನ್ನೂ ಬಿಸಾಡುವುದು ಸುಲಭವಲ್ಲ ಅಂತಾರಾಷ್ಟ್ರೀಯ ದೊಡ್ಡ ಪದಕಗಳನ್ನು ಎಸೆಯಲು ಸಿದ್ಧರಾಗಿದ್ದರು. ಅವರ ಬಾಯಿಂದ ಒಂದು ಪದವೂ ಹೊರಡಲಿಲ್ಲ, ”ಎಂದು ಪ್ರತಿಭಟನಾಕಾರ ಗುಂಪಿನ ಸದಸ್ಯರೊಬ್ಬರು ಹೇಳಿದರು.
ಇದನ್ನೂ ಓದಿ: ಡಬ್ಲ್ಯುಎಫ್ಐ ಮುಖ್ಯಸ್ಥರ ವಿರುದ್ಧದ ಸಾಕ್ಷ್ಯ ಕೊರತೆ ಕುರಿತ ವರದಿ ತಪ್ಪು: ದೆಹಲಿ ಪೊಲೀಸ್
“ಮಂಗಳವಾರ ಮೌನ ಪ್ರತಿಜ್ಞೆ ಮಾಡಿದರು ಮತ್ತು ಅದಕ್ಕಾಗಿಯೇ ಅವರು ಹರಿದ್ವಾರದಲ್ಲಿ ಯಾರೊಂದಿಗೂ ಮಾತನಾಡಲಿಲ್ಲ. ಎಲ್ಲರೂ ತಮ್ಮ ತಮ್ಮ ಮನೆಗೆ ಮರಳಿದ್ದಾರೆ ಆದರೆ ಸಾಕ್ಷಿ ಇನ್ನೂ ದೆಹಲಿಯಲ್ಲಿದ್ದಾರೆ.. ಬೆಳಿಗ್ಗೆಯಿಂದ ಅವರು ಅಳುತ್ತಿದ್ದರು. ಗೆದ್ದ ಪದಕವನ್ನು ಎಸೆಯುವುದು ಸುಲಭವಲ್ಲ ಮತ್ತು ಆ ದೊಡ್ಡ ಅಂತರರಾಷ್ಟ್ರೀಯ ಪದಕಗಳನ್ನು ಎಸೆಯಲು ಅವರು ಸಿದ್ಧರಾಗಿದ್ದರು. ಅವರು ಆಘಾತಕ್ಕೊಳಗಾದರು, ಅವರ ಬಾಯಿಂದ ಒಂದು ಮಾತು ಹೊರಡಲಿಲ್ಲ, ”ಎಂದು ಹೇಳಿದರು.
ಡಬ್ಲ್ಯುಎಫ್‌ಐ ಮುಖ್ಯಸ್ಥರು ಎಲ್ಲಾ ಆರೋಪಗಳನ್ನು ಅಲ್ಲಗಳೆದಿದ್ದಾರೆ ಮತ್ತು ಒಂದು ಆರೋಪ ಸಾಬೀತಾದರೂ, ತಾನು ನೇಣು ಹಾಕಿಕೊಳ್ಳುತ್ತೇನೆ. ಪ್ರತಿಭಟನೆಯ ಹಿಂದೆ ರಾಜಕೀಯ ಪಿತೂರಿ ಇದೆ ಎಂದು ಬ್ರಿಜ್ ಭೂಷಣ್ ಆರೋಪಿಸಿದ್ದಾರೆ.