ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ಭ್ರಷ್ಟಾಚಾರದಲ್ಲಿ 'ಮಹಾದೇವ'ನನ್ನೂ ಕೂಡ ಬಿಟ್ಟಿಲ್ಲ; ಕಾಂಗ್ರೆಸ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ

ಛತ್ತೀಸ್‌ಗಢ ಸಿಎಂಗೆ ಮಹಾದೇವ್‌ ಬೆಟ್ಟಿಂಗ್‌ ಆ್ಯಪ್‌ ಪ್ರಮೋಟರ್ಸ್‌ನಿಂದ 500 ಕೋಟಿ ರೂ. ಹಣ ಸಂದಾಯವಾಗಿದೆ ಎಂಬ ಜಾರಿನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳ ಹೇಳಿಕೆ ಉಲ್ಲೇಖಿಸಿ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ‘ಮಹಾದೇವ’ ಹೆಸರಿನ ಮತ್ತೊಂದು ಹಗರಣದಲ್ಲಿ ಕಾಂಗ್ರೆಸ್ ತೊಡಗಿದೆ' ಎಂದು ವಾಗ್ದಾಳಿ ನಡೆಸಿದರು. 
Published on

ರಾಯ್‌ಪುರ: ಛತ್ತೀಸ್‌ಗಢ ಸಿಎಂಗೆ ಮಹಾದೇವ್‌ ಬೆಟ್ಟಿಂಗ್‌ ಆ್ಯಪ್‌ ಪ್ರಮೋಟರ್ಸ್‌ನಿಂದ 500 ಕೋಟಿ ರೂ. ಹಣ ಸಂದಾಯವಾಗಿದೆ ಎಂಬ ಜಾರಿನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳ ಹೇಳಿಕೆ ಉಲ್ಲೇಖಿಸಿ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ‘ಮಹಾದೇವ’ ಹೆಸರಿನ ಮತ್ತೊಂದು ಹಗರಣದಲ್ಲಿ ಕಾಂಗ್ರೆಸ್ ತೊಡಗಿದೆ' ಎಂದು ವಾಗ್ದಾಳಿ ನಡೆಸಿದರು. 

ಛತ್ತೀಸ್‌ಗಢದ ದುರ್ಗ್ ಜಿಲ್ಲೆಯಲ್ಲಿ ಶನಿವಾರ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ಮಾತನಾಡಿದ ಅವರು, 'ಛತ್ತೀಸ್‌ಗಢದ ಕಾಂಗ್ರೆಸ್ ಸರ್ಕಾರವು ಮಹಾದೇವನ ಹೆಸರಿನಲ್ಲಿಯೂ ರಾಜ್ಯದ ಜನರನ್ನು ಶೋಷಿಸುವ ಪ್ರತಿಯೊಂದು ಅವಕಾಶವನ್ನು ಬಳಸಿಕೊಳ್ಳುತ್ತಿದೆ. ಹವಾಲಾ ಹಣವನ್ನು ಚುನಾವಣಾ ಪ್ರಚಾರಕ್ಕೆ ಕಾಂಗ್ರೆಸ್‌ ಬೆಳೆಸಿಕೊಳ್ಳುತ್ತಿದೆ. ಇದೀಗ ತಮ್ಮ ಭ್ರಷ್ಟಾಚಾರಕ್ಕೆ 'ಮಹಾದೇವ'ನ ಹೆಸರನ್ನು ಬಿಟ್ಟಿಲ್ಲ. ರಾಜ್ಯವನ್ನು ಲೂಟಿ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

'ದುಬೈ ಮೂಲದ ಬೆಟ್ಟಿಂಗ್‌ ಆ್ಯಪ್‌ ಪ್ರವರ್ತಕರ ಜತೆ ಕಾಂಗ್ರೆಸ್‌ ನಂಟು ಹೊಂದಿದೆ. ತನಿಖಾಧಿಕಾರಿಗಳು ದಾಳಿ ನಡೆಸಿ ಹಣವನ್ನು ವಶಪಡಿಸಿಕೊಂಡಿದ್ದಾರೆ. ಭಯಗೊಂಡಿರುವ ಸಿಎಂ ಭೂಪೇಶ್‌ ಬಘೇಲ್‌ ಅವರೀಗ ಚುನಾವಣಾ ಪ್ರಚಾರಕ್ಕೆ ಇಳಿದಿದ್ದಾರೆ. ಯಾವುದೇ ಯೋಜನೆಗಳ ಅನುಮೋದನೆಗೆ ರಾಜ್ಯ ಸರ್ಕಾರ 30 ಪರ್ಸೆಂಟ್ ಕಮಿಷನ್ ಬೇಡಿಕೆ ಒಡ್ಡುತ್ತಿದೆ. 80 ಕೋಟಿ ಬಡತನ ಪೀಡಿತ ಜನಸಂಖ್ಯೆಗೆ ‘ಉಚಿತ ಪಡಿತರ ಯೋಜನೆ’ಯನ್ನು ಐದು ವರ್ಷಗಳವರೆಗೆ ವಿಸ್ತರಿಸುವುದಾಗಿ ಘೋಷಿಸಿದ ಅವರು, ದೇಶದ ಏಕೈಕ ಜಾತಿ ಎಂದು ಬಡವರಿಗೆ ಒತ್ತು ನೀಡಿದರು.

ಛತ್ತೀಸ್‌ಗಢದಲ್ಲಿ ಬಿಜೆಪಿ ಸರ್ಕಾರದ ಅಡಿಯಲ್ಲಿ, ಸಾವಿರಾರು ಬಡ ಕುಟುಂಬಗಳಿಗೆ ಶಾಶ್ವತ ಮನೆ, ಶೌಚಾಲಯ, ಉಚಿತ ಗ್ಯಾಸ್ ಸಂಪರ್ಕಗಳು ಮತ್ತು ಪ್ರತಿ ಮನೆಗೆ ನಲ್ಲಿ ನೀರು ಸರಬರಾಜು ಮಾಡಲಾಗುವುದು. ಬಡವರ ಕಲ್ಯಾಣದ ಅವರ ಬದ್ಧತೆಯನ್ನು ಒತ್ತಿ ಹೇಳಿದ ಪ್ರಧಾನಿ, ಅತ್ಯಂತ ಪ್ರಮುಖವಾದ ಜಾತಿ ಬಡತನವಾಗಿದೆ ಮತ್ತು ಬಿಜೆಪಿಯ ನೀತಿಗಳು ಕಳೆದ ಐದು ವರ್ಷಗಳಲ್ಲಿ 13.50 ಕೋಟಿ ಜನರನ್ನು ಬಡತನ ರೇಖೆಯಿಂದ ಮೇಲಕ್ಕೆತ್ತಿವೆ. ಕಾಂಗ್ರೆಸ್ ಜಾತಿ ಆಧಾರಿತ ರಾಜಕೀಯದಲ್ಲಿ ತೊಡಗಿದೆ. ಬಿಜೆಪಿ ದಲಿತರು ಮತ್ತು ಒಬಿಸಿ ಸಮುದಾಯಕ್ಕೆ ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ವ್ಯಾಪಕ ಪ್ರಾತಿನಿಧ್ಯ ಒದಗಿಸಿದೆ. ಕೇಂದ್ರ ಸಂಪುಟದಲ್ಲಿ ಹೆಚ್ಚಿನ ಸಂಖ್ಯೆಯ ಒಬಿಸಿ ಮಂತ್ರಿಗಳು ಇದ್ದಾರೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com