ಖ್ಯಾತ ಹೋಟೆಲ್ ಉದ್ಯಮಿ ಪೃಥ್ವಿ ರಾಜ್‌ ಸಿಂಗ್ ಒಬೆರಾಯ್ ನಿಧನ

ಭಾರತೀಯ ಹೋಟೆಲ್ ಉದ್ಯಮದ ದಿಗ್ಗಜ ಖ್ಯಾತ ಹೋಟೆಲ್ ಉದ್ಯಮಿ ಪೃಥ್ವಿ ರಾಜ್‌ ಸಿಂಗ್ ಒಬೆರಾಯ್ ಮಂಗಳವಾರ ನಿಧನರಾಗಿದ್ದು, ಅವರಿಗೆ 94 ವರ್ಷ ವಯಸ್ಸಾಗಿತ್ತು.
ಉದ್ಯಮಿ ಪೃಥ್ವಿ ರಾಜ್‌ ಸಿಂಗ್ ಒಬೆರಾಯ್ ನಿಧನ
ಉದ್ಯಮಿ ಪೃಥ್ವಿ ರಾಜ್‌ ಸಿಂಗ್ ಒಬೆರಾಯ್ ನಿಧನ
Updated on

ನವದೆಹಲಿ: ಭಾರತೀಯ ಹೋಟೆಲ್ ಉದ್ಯಮದ ದಿಗ್ಗಜ ಖ್ಯಾತ ಹೋಟೆಲ್ ಉದ್ಯಮಿ ಪೃಥ್ವಿ ರಾಜ್‌ ಸಿಂಗ್ ಒಬೆರಾಯ್ ಮಂಗಳವಾರ ನಿಧನರಾಗಿದ್ದು, ಅವರಿಗೆ 94 ವರ್ಷ ವಯಸ್ಸಾಗಿತ್ತು.

ಉದ್ಯಮಿ ಹಾಗೂ ಒಬೆರಾಯ್‌ ಸಮೂಹದ ಗೌರವಾಧ್ಯಕ್ಷ ಪೃಥ್ವಿ ರಾಜ್‌ ಸಿಂಗ್‌ (ಪಿ.ಆರ್‌.ಎಸ್) ಒಬೆರಾಯ್‌ ಅವರು ಇಂದು (ಮಂಗಳವಾರ) ನಿಧನರಾದರು ಎಂದು ಒಬೆರಾಯ್ ಗ್ರೂಪ್‌ನ ವಕ್ತಾರರು ತಿಳಿಸಿದ್ದಾರೆ. ʼನಮ್ಮ ಪ್ರೀತಿಯ ನಾಯಕ ಪಿ.ಆರ್‌.ಎಸ್ ಒಬೆರಾಯ್‌ ಅವರು ಇಂದು ಮುಂಜಾನೆ ನಿಧನರಾಗಿದ್ದಾರೆ. ಈ ವಿಚಾರ ತಿಳಿಸಲು ಅಪಾರ ದುಃಖವಾಗುತ್ತಿದೆ. ಒಬೆರಾಯ್ ಅವರ ಖ್ಯಾತಿಯು ಆತಿಥ್ಯ ಉದ್ಯಮದಲ್ಲಿ ಗಡಿಗಳನ್ನು ಮೀರಿದೆ. ಅವರ ನಿಧನವು ಒಬೆರಾಯ್‌ ಸಮೂಹಕ್ಕೆ, ದೇಶ ಮತ್ತು ವಿದೇಶದ ಹೋಟೆಲ್‌ ಉದ್ಯಮಕ್ಕೆ ತುಂಬಲಾರದ ನಷ್ಟವನ್ನುಂಟುಮಾಡಿದೆʼ ಎಂದು ಕಂಪನಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಅಂತ್ಯಕ್ರಿಯೆಯು ಇಂದು ಸಂಜೆ 4ಕ್ಕೆ ಕಪಶೇರಾದ ಒಬೆರಾಯ್ ಫಾರ್ಮ್‌ನ ಭಗವಂತಿ ಒಬೆರಾಯ್ ಚಾರಿಟೇಬಲ್ ಟ್ರಸ್ಟ್‌ನಲ್ಲಿ ನಡೆಯಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಒಬೆರಾಯ್ ಅವರು ಪ್ರವಾಸೋದ್ಯಮ ಮತ್ತು ಆತಿಥ್ಯದಲ್ಲಿ ದೇಶಕ್ಕೆ ನೀಡಿದ ಅಸಾಧಾರಣ ಕೊಡುಗೆಯನ್ನು ಗುರುತಿಸಿ ಪದ್ಮವಿಭೂಷಣ ಸೇರಿದಂತೆ ಹಲವಾರು ಪ್ರಶಸ್ತಿಗಳು ಮತ್ತು ಪುರಸ್ಕಾರಗಳನ್ನು ಪಡೆದಿದ್ದಾರೆ. ಅವರ ಅಸಾಧಾರಣ ನಾಯಕತ್ವ ಮತ್ತು ದೃಷ್ಟಿಕೋನವನ್ನು ಗುರುತಿಸಿ ILTM (ಅಂತರರಾಷ್ಟ್ರೀಯ ಐಷಾರಾಮಿ ಸಕ್ರಿಯ ಮಾರುಕಟ್ಟೆ) ನಲ್ಲಿ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಒಬೆರಾಯ್ ಅವರಿಗೆ ಹೋಟೆಲ್ಸ್ ಮ್ಯಾಗಜೀನ್ ಅಮೆರಿಕದಿಂದ 'ಕಾರ್ಪೊರೇಟ್ ಹೊಟೇಲಿಯರ್ ಆಫ್ ದಿ ವರ್ಲ್ಡ್' ಪ್ರಶಸ್ತಿಯನ್ನು ಸಹ ನೀಡಲಾಗಿತ್ತು.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com