'ಪಾಪಿ ಹೋದ್ರು, ಅವ್ರು ಸೋತ್ರು' ಭಾರತ ವಿಶ್ವಕಪ್ ಸೋಲಿಗೆ ಪ್ರಧಾನಿ ಮೋದಿ ವಿರುದ್ಧ ಮಮತಾ ಪರೋಕ್ಷ ವಾಗ್ದಾಳಿ

ಇತ್ತೀಚಿನ ವಿಶ್ವಕಪ್ ಫೈನಲ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋಲಿನ ಬಗ್ಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ ಮೋದಿ,ಮಮತಾ ಬ್ಯಾನರ್ಜಿ ಸಾಂದರ್ಭಿಕ ಚಿತ್ರ
ಪ್ರಧಾನಿ ಮೋದಿ,ಮಮತಾ ಬ್ಯಾನರ್ಜಿ ಸಾಂದರ್ಭಿಕ ಚಿತ್ರ

ಕೋಲ್ಕತ್ತಾ: ಇತ್ತೀಚಿನ ವಿಶ್ವಕಪ್ ಫೈನಲ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋಲಿನ ಬಗ್ಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

ಕೊಲ್ಕತ್ತಾದ ಈಡನ್ ಗಾರ್ಡನ್ ಅಥವಾ ಮುಂಬೈಯ ವಾಂಖೆಡೆಯಲ್ಲಿ ಫೈನಲ್‌ ಪಂದ್ಯ ನಡೆದಿದ್ದರೆ ಟೀಮ್ ಇಂಡಿಯಾ ಗೆಲ್ಲುತ್ತಿತ್ತು. ನಮ್ಮ ಆಟಗಾರರನ್ನು ಕೇಸರಿ ಧರಿಸುವಂತೆ ಮಾಡಲಾಯಿತು. ಆಟಗಾರರು ವಿರೋಧಿಸಿದ್ದರಿಂದ ಭಾರತ ತಂಡ ಪಂದ್ಯಗಳ ಸಮಯದಲ್ಲಿ ಕೇಸರಿ ಜರ್ಸಿ ಧರಿಸಲಿಲ್ಲ ಎಂದು ಅವರು ತಿಳಿಸಿದ್ದಾರೆ.

ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, 'ಅವರು ನಮ್ಮ ಆಟಗಾರರು ಕೇಸರಿ ಜರ್ಸಿಯನ್ನು ಧರಿಸುವಂತೆ ಮಾಡಿದರು. ಆದರೆ, ಆಟಗಾರರು ನೀಲಿ ಜೆರ್ಸಿ ಬದಲಾಯಿಸುವುದನ್ನು ವಿರೋಧಿಸಿದರು, ಆದ್ದರಿಂದ ಅವರು ನೀಲಿ ಜೆರ್ಸಿಗೆ ಕೇಸರಿ ಸ್ಪರ್ಶ ನೀಡಿದ್ದರು ಎಂದು ಅವರು ವಾಗ್ದಾಳಿ ನಡೆಸಿದರು. 

"ಭಾರತೀಯ ಕ್ರಿಕೆಟಿಗರು ಎಲ್ಲಾ ಪಂದ್ಯಗಳನ್ನು ಗೆದ್ದಿದ್ದರು. ಆದರೆ ಕೊನೆಯ ಪಂದ್ಯವನ್ನು  ವೀಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಹೋಗಿದ್ದರು ಎಂದು ಹೇಳಿದ ಮಮತಾ, ಯಾರ ಹೆಸರನ್ನೂ ಉಲ್ಲೇಖಿಸದೆ ಪಾಪಿಗಳು ಎಲ್ಲಿಗೆ ಹೋದರು, ತಮ್ಮ ಪಾಪಗಳನ್ನು ತೆಗೆದುಕೊಂಡು ಹೋಗುತ್ತಾರೆ. ಪಾಪ ಯಾವುದನ್ನೂ  ಬಿಡುವುದಿಲ್ಲ ಎಂಬ ಮಾತನ್ನು ಯಾರೂ ಮರೆಯಬಾರದು ಎಂದು ಹೇಳಿದರು.

ನವೆಂಬರ್ 19 ರಂದು ಅಹಮದಾಬಾದ್‌ನಲ್ಲಿ ನಡೆದ ಐಸಿಸಿ ವಿಶ್ವಕಪ್ ಫೈನಲ್‌ನಲ್ಲಿ ಭಾರತವು ಆಸ್ಟ್ರೇಲಿಯಾ ವಿರುದ್ಧ ಸೋತಿತ್ತು. ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಹಾಜರಿದ್ದ ಕಾರಣ ಭಾರತ ತಂಡ ಸೋತಿದೆ ಎಂದು ರಾಹುಲ್ ಗಾಂಧಿ ಟೀಕಿಸಿದ್ದರು. 

ಅಲ್ಲದೆ, ಪಕ್ಷದ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಕೇಳಿಬಂದ ಪ್ರಶ್ನೆ ಕೇಳಲು ಹಣದ ಆರೋಪದ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಮಮತಾ, ಸಂಸತ್ತಿನಿಂದ ಮೆಹುವಾ ಅವರನ್ನು ಹೊರಹಾಕಲು ಬಿಜೆಪಿ ಈ ರೀತಿಯ ಸಂಚು ಮಾಡಿದೆ. ಇದು ಚುನಾವಣೆಗೆ ಮುನ್ನ ಅವರು  ಹೆಚ್ಚು ಜನಪ್ರಿಯರಾಗಲು ಸಹಾಯ ಮಾಡುತ್ತದೆ. ಮಹುವಾ ಅವರನ್ನು ಲೋಕಸಭೆಯಿಂದ ಉಚ್ಚಾಟಿಸಿರುವುದು 2024ರ ಲೋಕಸಭೆ ಚುನಾವಣೆಯಲ್ಲಿ ಸಂಸದರಿಗೆ  ನೆರವಾಗಲಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಮಮತಾ, ಇಂತಹ ಹೇಡಿತನದ ಪಕ್ಷವನ್ನು ನಾನೆಂದೂ ನೋಡಿಲ್ಲ. ನಮ್ಮ ಮೈತ್ರಿಯ ಹೆಸರನ್ನು ಭಾರತ ಎಂದು ಇಟ್ಟುಕೊಂಡರೇ,  ಮರುದಿನವೇ  ದೇಶದ ಹೆಸರನ್ನು ಭಾರತ್ ಎಂದು ಬದಲಾಯಿಸಿದರು ಎಂದು ಭಾಷಣದುದ್ದಕ್ಕೂ ಬಿಜೆಪಿ ವಿರುದ್ಧ  ಕಿಡಿಕಾರಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com