ಇರುವುದೊಂದೇ ಸನಾತನ ಧರ್ಮ, ಅದನ್ನು ಹೊರತುಪಡಿಸಿದರೆ ಉಳಿದೆಲ್ಲವೂ... ಯೋಗಿ ಆದಿತ್ಯನಾಥ್ ವ್ಯಾಖ್ಯಾನವೇನು?
ಸನಾತನ ಧರ್ಮದ ನಿರ್ಮೂಲನೆ ಮಾಡಬೇಕು ಎಂದು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ನೀಡಿದ ಹೇಳಿಕೆಯು ದೇಶಾದ್ಯಂತ ವಿವಾದ ಸೃಷ್ಟಿಸಿದೆ. ಇದರ ಬೆನ್ನಲ್ಲೇ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸನಾತನ ಧರ್ಮದ ಕುರಿತು ಹೇಳಿಕೆ ನೀಡಿದ್ದಾರೆ.
Published: 03rd October 2023 10:28 AM | Last Updated: 03rd October 2023 10:28 AM | A+A A-

ಯೋಗಿ ಆದಿತ್ಯನಾಥ್
ಲಕ್ನೋ: ಸನಾತನ ಧರ್ಮದ ನಿರ್ಮೂಲನೆ ಮಾಡಬೇಕು ಎಂದು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ನೀಡಿದ ಹೇಳಿಕೆಯು ದೇಶಾದ್ಯಂತ ವಿವಾದ ಸೃಷ್ಟಿಸಿದೆ. ಇದರ ಬೆನ್ನಲ್ಲೇ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸನಾತನ ಧರ್ಮದ ಕುರಿತು ಹೇಳಿಕೆ ನೀಡಿದ್ದಾರೆ.
ಸನಾತನ ಧರ್ಮದ ಮಹತ್ವವನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೋಮವಾರ ಒತ್ತಿಹೇಳಿದ್ದು, ಸನಾತನ ಧರ್ಮ ಏಕೈಕ ಧರ್ಮವಾಗಿದೆ ಮತ್ತು ಉಳಿದೆಲ್ಲವೂ ಪಂಥಗಳು ಮತ್ತು ಪೂಜಾ ವಿಧಾನಗಳು ಎಂದು ಹೇಳಿದ್ದಾರೆ.
ಗೋರಖನಾಥ ದೇವಾಲಯದಲ್ಲಿ ನಡೆದ ‘ಶ್ರೀಮದ್ ಭಾಗವತ್ ಕಥಾ ಜ್ಞಾನ ಯಾಗ’ದ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ ಅವರು ಸನಾತನ ಧರ್ಮವು ಮಾನವೀಯತೆಯ ಧರ್ಮವಾಗಿದೆ ಮತ್ತು ಅದರ ಮೇಲಿನ ಯಾವುದೇ ದಾಳಿಯು ಇಡೀ ಮಾನವೀಯತೆಯನ್ನು ಅಪಾಯಕ್ಕೆ ತಳ್ಳುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸನಾತನ ಧರ್ಮ ಹೇಳಿಕೆ ವಿವಾದ: ಸುಪ್ರೀಂ ಕೋರ್ಟ್ ನಿಂದ ಯಾವುದೇ ನೋಟಿಸ್ ಬಂದಿಲ್ಲ ಎಂದ ಉದಯನಿಧಿ ಸ್ಟಾಲಿನ್
ಶ್ರೀಮದ್ ಭಾಗವತ್ ಸಾರವನ್ನು ನಿಜವಾಗಿಯೂ ಗ್ರಹಿಸಲು ಮುಕ್ತ ಮನಸ್ಥಿತಿಯನ್ನು ಹೊಂದುವ ಮಹತ್ವವನ್ನು ಒತ್ತಿ ಹೇಳಿದರು. ಜೊತೆಗೆ ಸಂಕುಚಿತ ಮನಸ್ಸಿನ ದೃಷ್ಟಿಕೋನಗಳು ಅದರ ಬೋಧನೆಗಳ ವಿಶಾಲತೆಯನ್ನು ಒಳಗೊಳ್ಳಲು ಹೆಣಗಾಡುತ್ತವೆ ಎಂದರು.
ಭಗವದ್ಗೀತೆ ಕುರಿತು ಮಾತನಾಡಿದ ಯೋಗಿ ಆದಿತ್ಯನಾಥ್, “ಭಗವದ್ಗೀತೆಯು ಮನುಕುಲಕ್ಕೆ ದಾರಿದೀಪವಾಗಿದೆ. ಇದರಿಂದ ಮಾನವ ಸರಿಯಾದ ದಾರಿಯಲ್ಲಿ ಸಾಗಲು ಸಾಧ್ಯವಾಗುತ್ತಿದೆ. ಕೆಲವು ಕುತ್ಸಿತ ಹಾಗೂ ಸಂಕುಚಿತ ಮನಸ್ಸುಗಳು ಭಗವದ್ಗೀತೆಯ ಸಾರದ ಬಗ್ಗೆ ನಕಾರಾತ್ಮಕ ಮಾಹಿತಿಯನ್ನು ಹರಡುತ್ತವೆ. ಆದರೆ, ಮನುಕುಲಕ್ಕೆ ಭಗವದ್ಗೀತೆಯು ದೀವಿಗೆಯಾಗಿದೆ” ಎಂದು ಹೇಳಿದರು.