ಅಂತಿಮ ಗಡುವಿನ ಹೊರತಾಗಿಯೂ ದೇಶದಲ್ಲೇ ಉಳಿದಿರುವ ಕೆನಡಾ ರಾಯಭಾರಿಗಳು..!: ಕಾರಣ?

ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಸಾವಿನ ಬಳಿಕ ಭಾರತ ಮತ್ತು ಕೆನಡಾ ನಡುವಿನ ಸಂಬಂಧ ಹಳಸಿದ ಬೆನ್ನಲ್ಲೇ ಉಭಯ ದೇಶಗಳೂ ಆಯಾ ದೇಶಗಳ ರಾಯಭಾರಿಗಳನ್ನು ದೇಶದಿಂದ ಉಚ್ಛಾಟನೆ ಮಾಡಿದ್ದವು. ಆದರೆ ಭಾರತದಲ್ಲಿರುವ ಕೆನಡಾ ರಾಯಭಾರಿಗಳು ಮಾತ್ರ ಇನ್ನೂ ದೇಶ ಬಿಟ್ಟು ತೆರಳಿಲ್ಲ ಎಂಬ ಮಾಹಿತಿ ತಿಳಿದುಬಂದಿದೆ.
ದೇಶದಲ್ಲೇ ಉಳಿದಿರುವ ಕೆನಡಾ ರಾಯಭಾರಿಗಳು
ದೇಶದಲ್ಲೇ ಉಳಿದಿರುವ ಕೆನಡಾ ರಾಯಭಾರಿಗಳು

ನವದೆಹಲಿ: ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಸಾವಿನ ಬಳಿಕ ಭಾರತ ಮತ್ತು ಕೆನಡಾ ನಡುವಿನ ಸಂಬಂಧ ಹಳಸಿದ ಬೆನ್ನಲ್ಲೇ ಉಭಯ ದೇಶಗಳೂ ಆಯಾ ದೇಶಗಳ ರಾಯಭಾರಿಗಳನ್ನು ದೇಶದಿಂದ ಉಚ್ಛಾಟನೆ ಮಾಡಿದ್ದವು. ಆದರೆ ಭಾರತದಲ್ಲಿರುವ ಕೆನಡಾ ರಾಯಭಾರಿಗಳು ಮಾತ್ರ ಇನ್ನೂ ದೇಶ ಬಿಟ್ಟು ತೆರಳಿಲ್ಲ ಎಂಬ ಮಾಹಿತಿ ತಿಳಿದುಬಂದಿದೆ.

ಈ ಹಿಂದೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಅವರು ನಿಜ್ಜರ್ ಹತ್ಯೆಯ ಹಿಂದೆ ಭಾರತದ ಕೈವಾಡದ ಕುರಿತು ಆರೋಪಿಸಿದ್ದರು. ಈ ಆರೋಪದ ಬೆನ್ನಲ್ಲೇ ಭಾರತ ಸರ್ಕಾರ ಕೆನಡಾ ರಾಯಭಾರಿಗಳನ್ನು ಅಕ್ಟೋಬರ್ 10ರೊಳಗೆ ದೇಶ ತೊರೆಯುವಂತೆ ಸೂಚಿಸಿತ್ತು. ಆದರೆ ದಿನಾಂಕ 12 ಆದರೂ ಕೂಡ ಕೆನಡಾ ರಾಯಭಾರಿಗಳು ದೇಶ ತೊರೆದಿಲ್ಲ ಎಂದು ಫೈನಾನ್ಷಿಯಲ್ ಟೈಮ್ಸ್‌ ವರದಿ ಮಾಡಿದೆ.

ಇದರ ನಡುವೆಯೇ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಕೆನಡಾದ ಸಹವರ್ತಿ ಮೆಲಾನಿ ಜೋಲಿ ಅವರೊಂದಿಗೆ ನ್ಯೂಯಾರ್ಕ್‌ನಲ್ಲಿ ಯುಎನ್‌ಜಿಎಯ ಬದಿಯಲ್ಲಿ ರಹಸ್ಯ ಸಭೆ ನಡೆಸಿದರು ಎಂದು ವರದಿಯಾಗಿದೆ. ಈ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಸಂಪರ್ಕಿಸಿದಾಗ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಮತ್ತು ದೆಹಲಿಯಲ್ಲಿರುವ ಕೆನಡಾದ ಹೈಕಮಿಷನ್ ಈ ವಿಷಯದ ಬಗ್ಗೆ ಯಾವುದೇ ಹೇಳಿಕೆಗಳನ್ನು ಮಾಡಿಲ್ಲ. 

ಇದನ್ನೂ ಓದಿ: ಭಾರತದಲ್ಲಿ ಖಲೀಸ್ಥಾನಿಗಳಿಗೆ ಸಹಕಾರ, ಆಶ್ರಯ ನೀಡುತ್ತಿದ್ದ ಸಿಖ್ ಗೆ ಕೆನಡಾ ಪ್ರವೇಶ: ವರದಿ
 
ಏತನ್ಮಧ್ಯೆ ಕೆನಡಿಯನ್ನರಿಗೆ ವೀಸಾ ಸೇವೆಗಳನ್ನು ಭಾರತ ಸ್ಥಗಿತಗೊಳಿಸಿದೆ. ಕೆನಡಾದಲ್ಲಿ ಭಾರತೀಯ ರಾಜತಾಂತ್ರಿಕರಿಗೆ ಬೆದರಿಕೆ ಇರುವುದರಿಂದ ಅವರು ಕಾನ್ಸುಲೇಟ್ ಸೇವೆಗಳನ್ನು ನೀಡಲು ಸಾಧ್ಯವಿಲ್ಲ ಎಂದು ಜೈಶಂಕರ್ ಈ ಹಿಂದೆ ಹೇಳಿದ್ದರು.

"ನಾವು ಸಮಾನತೆಯನ್ನು ಕಾಯ್ದುಕೊಳ್ಳಲು ಬಯಸುತ್ತೇವೆ ಮತ್ತು ಕೆನಡಾದ ರಾಜತಾಂತ್ರಿಕರು ನಮ್ಮ ಆಂತರಿಕ ವಿಷಯಗಳಲ್ಲಿ ಮಧ್ಯಪ್ರವೇಶಿಸುತ್ತಿದ್ದಾರೆ. ಆದ್ದರಿಂದ, ಕೆನಡಾದ ಕಾರ್ಯಾಚರಣೆಗಳನ್ನು ಕಡಿಮೆ ಮಾಡಲು ನಾವು ಬಯಸುತ್ತೇವೆ" ಎಂದು MEA ವಕ್ತಾರ ಅರಿಂದಮ್ ಬಾಗ್ಚಿ ಈ ಹಿಂದೆ ಹೇಳಿದ್ದರು.

ಏತನ್ಮಧ್ಯೆ, ಟ್ರೂಡೊ ಅವರು ಬ್ರಿಟಿಷ್ ಪ್ರಧಾನಿ ರಿಷಿ ಸುನಕ್, ಜೋರ್ಡಾನ್ ರಾಜ ಅಬ್ದುಲ್ಲಾ II ಬಿನ್ ಅಲ್-ಹುಸೇನ್ ಮತ್ತು ಯುಎಇ ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯೆದ್ ಸೇರಿದಂತೆ ವಿವಿಧ ರಾಷ್ಟ್ರಗಳ ಮುಖ್ಯಸ್ಥರಿಗೆ ಫೋನ್ ಕರೆಗಳನ್ನು ಮಾಡುತ್ತಿದ್ದಾರೆ. ಅವರು ತಮ್ಮ ಎಲ್ಲಾ ಸಂಭಾಷಣೆಗಳಲ್ಲಿ ನಿಜ್ಜರ್ ಹತ್ಯೆಯ ಬಗ್ಗೆ ಪ್ರಸ್ತಾಪಿಸಿದ್ದಾರೆ. ಅಲ್ಲದೆ ಭಾರತ-ಕೆನಡಾ ರಾಜತಾಂತ್ರಿಕ ವಿವಾದದ ಬಗ್ಗೆ ಮಾತನಾಡಿದ್ದಾರೆ. ಕಾನೂನು ಮತ್ತು ರಾಜತಾಂತ್ರಿಕ ಸಂಬಂಧಗಳ ವಿಯೆನ್ನಾ ಒಪ್ಪಂದವನ್ನು ಗೌರವಿಸುವ ಪ್ರಾಮುಖ್ಯತೆಯನ್ನು ಜೈಶಂಕರ್ ಒತ್ತಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com