ಮಣಿಪುರ ಲೈಂಗಿಕ ದೌರ್ಜನ್ಯ ವೀಡಿಯೋ ಪ್ರಕರಣ: 7 ಮಂದಿ ವಿರುದ್ಧ ಸಿಬಿಐ ಚಾರ್ಜ್ ಶೀಟ್
ನವದೆಹಲಿ: ಮಣಿಪುರದಲ್ಲಿ ಲೈಂಗಿಕ ದೌರ್ಜನ್ಯದ ವೀಡಿಯೋ ವೈರಲ್ ಆದ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಮಂದಿ ವಿರುದ್ಧ ಸಿಬಿಐ ಚಾರ್ಜ್ ಶೀಟ್ ದಾಖಲಿಸಿದೆ.
ಈ ಪೈಕಿ ಓರ್ವ ಬಾಲಾಪರಾಧಿಯೂ ಇರುವುದು ಗಮನಾರ್ಹ, ಮಣಿಪುರದ ಕಾಂಗ್ಪೋಪಿ ಜಿಲ್ಲೆಯಲ್ಲಿ ಮೇ ತಿಂಗಳಲ್ಲಿ ಇಬ್ಬರು ಬುಡಕಟ್ಟು ಮಹಿಳೆಯರನ್ನು ನಗ್ನವಾಗಿ ಪರೇಡ್ ಮಾಡಲಾಗಿದ್ದ ವೀಡಿಯೋ ಬಹಿರಂಗಗೊಂಡಿತ್ತು.
ದೇಶ, ಜಾಗತಿಕವಾಗಿ ಈ ಘಟನೆಯನ್ನು ಖಂಡಿಸಲಾಗಿತ್ತು. ಸುಪ್ರೀಂ ಕೋರ್ಟ್ ಮಧ್ಯಪ್ರವೇಶದಿಂದಾಗಿ ಪ್ರಕರಣ ಸಿಬಿಐ ಗೆ ಹಸ್ತಾಂತರವಾಗಿತ್ತು. ಈಗ ತನಿಖಾ ಸಂಸ್ಥೆ 6 ಮಂದಿ ವಿರುದ್ಧ ಗುವಾಹಟಿಯ ಸಿಬಿಐ ವಿಶೇಷ ನ್ಯಾಯಾಲಯದ ಎದುರು ಆರೋಪ ಪಟ್ಟಿ ದಾಖಲಿಸಿದೆ. ಮೇ 4 ರಂದು, ಶಸ್ತ್ರಸಜ್ಜಿತವಾದ ಸುಮಾರು 900-1000 ವ್ಯಕ್ತಿಗಳ ಗುಂಪೊಂದು, ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯ ಬಿ ಫೈನೋಮ್ ಗ್ರಾಮಕ್ಕೆ ಪ್ರವೇಶಿಸಿ, ಮನೆಗಳನ್ನು ಧ್ವಂಸಗೊಳಿಸಿ, ಸುಟ್ಟುಹಾಕಿ, ಆಸ್ತಿಗಳನ್ನು ದೋಚಿತು, ಗ್ರಾಮಸ್ಥರ ಮೇಲೆ ಹಲ್ಲೆ, ಕೊಲೆಗಳು ಮತ್ತು ಲೈಂಗಿಕವಾಗಿ ದೌರ್ಜನ್ಯ ಎಸಗಿತು ಎಂದು ಆರೋಪಿಸಲಾಗಿದೆ. ಮಹಿಳೆಯರ ಮೇಲೆ ಹಲ್ಲೆ ನಡೆಸಿದರು.
ಈ ಘಟನೆಯಲ್ಲಿ ಮಹಿಳೆಯೊಬ್ಬರು ಬೆತ್ತಲೆಯಾಗಿ ಮೆರವಣಿಗೆ ನಡೆಸಿದ ಕುಟುಂಬದ ಇಬ್ಬರು ಸದಸ್ಯರು ಸಹ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾಗಿದೆ. ಮಣಿಪುರ ಪೊಲೀಸರು ಬಂಧಿಸಿರುವ ಆರೋಪಿಗಳು ಘಟನೆಯಲ್ಲಿ ಭಾಗಿಯಾಗಿದ್ದಾರೆ ಎಂದು ಸಿಬಿಐ ತನಿಖೆ ಹೇಳಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ