ವಯನಾಡಿನ ಬಾವಲಿಗಳಲ್ಲಿ ನಿಪಾ ವೈರಸ್ ಇರುವುದನ್ನು ಐಸಿಎಂಆರ್ ದೃಢಪಡಿಸಿದೆ: ಕೇರಳ ಆರೋಗ್ಯ ಸಚಿವೆ

ವಯನಾಡಿನಲ್ಲಿ ಬಾವಲಿಗಳಿಂದ ಸಂಗ್ರಹಿಸಿದ ಮಾದರಿಯಲ್ಲಿ ನಿಪಾ ವೈರಸ್ ಇರುವುದನ್ನು ಐಸಿಎಂಆರ್ ದೃಢಪಡಿಸಿದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ. ಬತ್ತೇರಿ ಮತ್ತು ಮಾನಂತವಾಡಿಯಲ್ಲಿ ಮಾದರಿಗಳನ್ನು ಸಂಗ್ರಹಿಸಲಾಗಿದೆ. 
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ
Updated on

ತಿರುವನಂತಪುರಂ: ವಯನಾಡಿನಲ್ಲಿ ಬಾವಲಿಗಳಿಂದ ಸಂಗ್ರಹಿಸಿದ ಮಾದರಿಯಲ್ಲಿ ನಿಪಾ ವೈರಸ್ ಇರುವುದನ್ನು ಐಸಿಎಂಆರ್ ದೃಢಪಡಿಸಿದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ. ಬತ್ತೇರಿ ಮತ್ತು ಮಾನಂತವಾಡಿಯಲ್ಲಿ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಆತಂಕಪಡುವ ಅಗತ್ಯವಿಲ್ಲ. ಆದರೆ, ಆದರೆ ಜಾಗೃತಿ ಮೂಡಿಸಲು ಈ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. 

'ನಾವು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮತ್ತು ವಯನಾಡಿನಲ್ಲಿ ಆರೋಗ್ಯ ಕಾರ್ಯಕರ್ತರಿಗೆ ತರಬೇತಿ ನೀಡಲು ನಿರ್ಧರಿಸಿದ್ದೇವೆ. ನಿರಂತರ ಮೇಲ್ವಿಚಾರಣೆಯಿಂದಾಗಿ ನಾವು ನಿಪಾ ವೈರಸ್ ಇರುವಿಕೆಯನ್ನು ಗುರುತಿಸಲು ಸಾಧ್ಯವಾಗಿದೆ. ಎಲ್ಲಿಂದ ಬೇಕಾದರೂ ಪ್ರಕರಣಗಳು ವರದಿಯಾಗಬಹುದು' ಎಂದು ವೀಣಾ ಹೇಳಿದರು.

ಇತರ ಜಿಲ್ಲೆಗಳಲ್ಲಿಯೂ ನಿಪಾ ವೈರಸ್ ಇರುವಿಕೆಯನ್ನು ಖಚಿತಪಡಿಸಿಕೊಳ್ಳಲು ಇದೇ ರೀತಿಯ ಅಧ್ಯಯನಗಳು ನಡೆಯುತ್ತಿವೆ. ಐಸಿಎಂಆರ್ ರಾಜ್ಯದ ವಿವಿಧ ಭಾಗಗಳಿಂದ ಮಾದರಿ ಸಂಗ್ರಹಿಸಿ ಸಂಶೋಧನೆಗಳನ್ನು ಮಾಡಿದೆ ಎಂದು ಹೇಳಿದರು.

ಪಕ್ಷಿ ತಿಂದಿರುವ ಹಣ್ಣುಗಳನ್ನು ತಿನ್ನದಂತೆ ಮತ್ತು ಯಾವುದೇ ರೋಗಲಕ್ಷಣಗಳನ್ನು ನಿರ್ಲಕ್ಷ್ಯಿಸದಂತೆ ಆರೋಗ್ಯ ಸಚಿವರು ಜನರಿಗೆ ಒತ್ತಾಯಿಸಿದ್ದಾರೆ.

ಕಳೆದ ಸೆಪ್ಟೆಂಬರ್‌ನಲ್ಲಿ ರಾಜ್ಯದ ಕೋಯಿಕ್ಕೋಡ್‌ ಜಿಲ್ಲೆಯಲ್ಲಿ ನಾಲ್ಕನೇ ಬಾರಿಗೆ ನಿಪಾ ವೈರಸ್ ಪ್ರಕರಣಗಳು ವರದಿಯಾಗಿದ್ದವು. ಎರಡು ಸಾವು ಸೇರಿದಂತೆ ಆರು ಸಕಾರಾತ್ಮಕ ಪ್ರಕರಣಗಳು ವರದಿಯಾಗಿದ್ದವು. 

ಐಸಿಎಂಆರ್ ಅಧ್ಯಯನವು ಕೋಯಿಕ್ಕೋಡ್‌ನ ಬಾವಲಿಗಳಲ್ಲಿ ನಿಪಾ ವೈರಸ್‌ನ ಪ್ರತಿಕಾಯಗಳನ್ನು ಕಂಡುಹಿಡಿಯಬಹುದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com