ಬಿಹಾರದ ಛಪ್ರಾದಲ್ಲಿ ಧಾರ್ಮಿಕ ಘರ್ಷಣೆ: ಅಂತರ್ಜಾಲ ಸೇವೆ ಸ್ಥಗಿತ

ಬಿಹಾರದ ಛಪ್ರಾದಲ್ಲಿ ಧಾರ್ಮಿಕ ವಿಚಾರಕ್ಕೆ ಘರ್ಷಣೆ ಉಂಟಾಗಿದ್ದು, ಅಂತರ್ಜಾಲ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. 
ಪೊಲೀಸ್ ಭದ್ರತೆ (ಸಾಂಕೇತಿಕ ಚಿತ್ರ)
ಪೊಲೀಸ್ ಭದ್ರತೆ (ಸಾಂಕೇತಿಕ ಚಿತ್ರ)

ಪಾಟ್ನ: ಬಿಹಾರದ ಛಪ್ರಾದಲ್ಲಿ ಧಾರ್ಮಿಕ ವಿಚಾರಕ್ಕೆ ಘರ್ಷಣೆ ಉಂಟಾಗಿದ್ದು, ಅಂತರ್ಜಾಲ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. 

ಧಾರ್ಮಿಕ ಮೆರವಣಿಗೆ ನಡೆಯುತ್ತಿದ್ದ ವೇಳೆ ಈ ಘರ್ಷಣೆ ಸಂಭವಿಸಿದ್ದು, ಪರಿಸ್ಥಿತಿ ನಿಯಂತ್ರಿಸುವುದಕ್ಕಾಗಿ ಗೃಹ ಇಲಾಖೆ ಅಂತರ್ಜಾಲ ಸೇವೆಗಳನ್ನು ಸ್ಥಗಿತಗೊಳಿಸಿದೆ. 

ಪೋಲೀಸರ ಪ್ರಕಾರ, ಸರನ್ ಜಿಲ್ಲೆಯ ಪ್ರಧಾನ ಕಛೇರಿಯಾಗಿರುವ ಛಪ್ರಾದ ಭಗವಾನ್ ಬಜಾರ್ ಪ್ರದೇಶದಲ್ಲಿ ದುರ್ಗಾದೇವಿಯ ವಿಗ್ರಹಗಳನ್ನು ನೀರಿನಲ್ಲಿ ವಿಸರ್ಜನೆ ಮಾಡುವುದಕ್ಕೂ ಮುನ್ನ ಕೈಗೊಳ್ಳಲಾದ ಮೆರವಣಿಗೆಯ ವೇಳೆ ಈ ಘರ್ಷಣೆ ಉಂಟಾಗಿದೆ.

ಮೆರವಣೆಗೆ ವೇಳೆ ದೊಡ್ಡ ಧ್ವನಿಯಲ್ಲಿ ಡಿಜೆಯನ್ನು ಹಾಕಲಾಗಿತ್ತು. ಕೆಲವು ಕಿಡಿಗೇಡಿಗಳು ಈ ವೇಳೆ ಕಲ್ಲು ತೂರಾಟ ನಡೆಸಿದ್ದರು. ಪೊಲೀಸರು ಸ್ಥಳಕ್ಕೆ ತೆರಳಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ ಎಂದು ಇಲಾಖೆ ತಿಳಿಸಿದೆ.

ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಮುಂದಿನ ಕ್ರಮಕ್ಕಾಗಿ ವಿಡಿಯೋ ತುಣುಕಿನ ಸಹಾಯದಿಂದ ಕಿಡಿಗೇಡಿಗಳನ್ನು ಗುರುತಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com