ಹಮಾಸ್ ಉಗ್ರ ದಾಳಿಗೆ ಇಸ್ರೇಲ್‌ ಪ್ರತಿಕ್ರಿಯೆ 'ಅಸಮರ್ಪಕ' ಎಂದ ತರೂರ್; ಯುದ್ಧ ನಿಲ್ಲಿಸಲು ಆಗ್ರಹ

ಜಗತ್ತು ಒಂದು ಭೀಕರ ದುರಂತಕ್ಕೆ ಸಾಕ್ಷಿಯಾಗಿದೆ ಎಂದ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು, ಅಕ್ಟೋಬರ್ 7ರಂದು ನಡೆದ ಹಮಾಸ್ ಭಯೋತ್ಪಾದಕ ದಾಳಿಗೆ ಇಸ್ರೇಲ್ ನೀಡುತ್ತಿರುವ ಪ್ರತಿಕ್ರಿಯೆ "ಸಮರ್ಪಕವಾಗಿಲ್ಲ" ಎಂದು...
ಶಶಿ ತರೂರ್
ಶಶಿ ತರೂರ್

ಕೋಝಿಕೋಡ್(ಕೇರಳ): ಜಗತ್ತು ಒಂದು ಭೀಕರ ದುರಂತಕ್ಕೆ ಸಾಕ್ಷಿಯಾಗಿದೆ ಎಂದ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು, ಅಕ್ಟೋಬರ್ 7ರಂದು ನಡೆದ ಹಮಾಸ್ ಭಯೋತ್ಪಾದಕ ದಾಳಿಗೆ ಇಸ್ರೇಲ್ ನೀಡುತ್ತಿರುವ ಪ್ರತಿಕ್ರಿಯೆ "ಸಮರ್ಪಕವಾಗಿಲ್ಲ" ಎಂದು ಹೇಳಿದ್ದಾರೆ.

ಗಾಜಾದಲ್ಲಿ 2008 ರಿಂದ ಇಲ್ಲಿವರೆಗೆ ನಡೆದ ದಾಳಿಗಳಿಗೆ ಹೋಲಿಸಿದರೆ ಕಳೆದ 19 ದಿನಗಳಲ್ಲಿ ಇಸ್ರೇಲ್ ನಡೆಸಿದ ದಾಳಿಯಲ್ಲಿ ಹೆಚ್ಚಿನ ಸಂಖ್ಯೆಯ ಪ್ಯಾಲೆಸ್ತೀನ್ ಜನರು ಸಾವನ್ನಪ್ಪಿದ್ದಾರೆ ಎಂದು ಶಶಿ ತರೂರ್ ಹೇಳಿದ್ದಾರೆ.

ಪ್ಯಾಲೆಸ್ತೀನ್ ಜನರಿಗೆ ಬೆಂಬಲ ಸೂಚಿಸಲು ಗುರುವಾರ ಕೇರಳದ ಕೋಝಿಕ್ಕೋಡ್‌ನಲ್ಲಿ ಇಂಡಿಯನ್ ಯುನೈಟೆಡ್ ಮುಸ್ಲಿಂ ಲೀಗ್(ಐಯುಎಂಎಲ್) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ತರೂರ್, ಗಾಜಾದಲ್ಲಿ ವೈಮಾನಿಕ ದಾಳಿ ನಿಲ್ಲಿಸುವಂತೆ ಇಸ್ರೇಲ್ ಗೆ ಒತ್ತಾಯಿಸಿದರು ಮತ್ತು ಮಹಾತ್ಮ ಗಾಂಧಿಯವರ ಕಾಲದಿಂದಲೂ ಭಾರತ ಯಾವಾಗಲೂ ಶಾಂತಿಯ ಪರವಾಗಿ ನಿಂತಿದೆ ಎಂದು ಹೇಳಿದರು.

"ಕೊಳದೆ 19 ದಿನಗಳಿಂದ, ಜಗತ್ತು ಅತ್ಯಂತ ಭೀಕರ ಮಾನವ ಹಕ್ಕು ಉಲ್ಲಂಘನೆಗೆ ಸಾಕ್ಷಿಯಾಗಿದೆ. ನಾವು ಭೀಕರ ದುರಂತವನ್ನು ನೋಡುತ್ತಿದ್ದೇವೆ. ಭಯೋತ್ಪಾದಕರು ಇಸ್ರೇಲ್ ದಾಳಿ ಮಾಡಿದರು. ಹಮಾಸ್ ಭಯೋತ್ಪಾದಕ ಸಂಘಟನೆ, ಇಸ್ರೇಲ್ ಗಾಜಾಕ್ಕೆ ಆಹಾರ, ನೀರು ಮತ್ತು ವಿದ್ಯುತ್ ನೀಡುವುದನ್ನು ನಿಲ್ಲಿಸಿದೆ. ನಾವು ಇಸ್ರೇಲ್ ನ ಬಾಂಬ್ ದಾಳಿಯನ್ನು ಖಂಡಿಸುತ್ತೇವೆ" ಎಂದು ತರೂರ್ ಕೋಝಿಕ್ಕೋಡ್ ಬೀಚ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಈ ಹಿಂದೆ ವಿಶ್ವಸಂಸ್ಥೆಯ ರಾಜತಾಂತ್ರಿಕರಾಗಿ ಸೇವೆ ಸಲ್ಲಿಸಿದ್ದ ತರೂರ್, ಹಮಾಸ್ ದಾಳಿಗೆ ಪ್ರತಿಕ್ರಿಯೆಯಾಗಿ ಇಸ್ರೇಲ್‌, ಗಾಜಾ ಮೇಲೆ ನಡೆಸುತ್ತಿರುವ ವೈಮಾನಿಕ ದಾಳಿಗಳು "ಅಸಮರ್ಪಕವಾಗಿವೆ" ಎಂದು ಹೇಳಿದರು.

ಗಾಜಾದಲ್ಲಿ ಉದ್ಭವಿಸಿರುವ ಬಿಕ್ಕಟ್ಟು ಮುಸ್ಲಿಂಮರ ಸಮಸ್ಯೆಯಲ್ಲ. ಅದು ಮಾನವ ಹಕ್ಕುಗಳ ಸಮಸ್ಯೆ ಎಂದು ಅವರು ಎತ್ತಿ ತೋರಿಸಿದ ತರೂರ್, "ಯುದ್ಧಕ್ಕೆ ಯಾವುದೇ ಧರ್ಮ ಇಲ್ಲ" ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com