ಸರ್ಜಿಕಲ್ ಸ್ಟ್ರೈಕ್ ನೇತೃತ್ವ ವಹಿಸಿದ್ದ ನಿವೃತ್ತ ಸೇನಾಧಿಕಾರಿಗೆ ಮಣಿಪುರದ ಟಾಸ್ಕ್!!

ಕಳೆದ ಹಲವು ತಿಂಗಳುಗಳಿಂದ ಹಿಂಸಾಚಾರದಿಂದ ನಲುಗಿ ಹೋಗಿರುವ ಮಣಿಪುರದಲ್ಲಿ ಶಾಂತಿ ಸ್ಥಾಪನೆಯ ಟಾಸ್ಕ್ ಅನ್ನು ಮಹತ್ವದ ವ್ಯಕ್ತಿಗೆ ಕೇಂದ್ರ ಸರ್ಕಾರ ನೀಡಿದೆ. 
ಕರ್ನಲ್ (ನಿವೃತ್ತ) ನೆಕ್ಟರ್ ಸಂಜೆನ್ಬಮ್
ಕರ್ನಲ್ (ನಿವೃತ್ತ) ನೆಕ್ಟರ್ ಸಂಜೆನ್ಬಮ್

ಇಂಫಾಲ: ಕಳೆದ ಹಲವು ತಿಂಗಳುಗಳಿಂದ ಹಿಂಸಾಚಾರದಿಂದ ನಲುಗಿ ಹೋಗಿರುವ ಮಣಿಪುರದಲ್ಲಿ ಶಾಂತಿ ಸ್ಥಾಪನೆಯ ಟಾಸ್ಕ್ ಅನ್ನು ಮಹತ್ವದ ವ್ಯಕ್ತಿಗೆ ಕೇಂದ್ರ ಸರ್ಕಾರ ನೀಡಿದೆ. 

ಈ ಹಿಂದೆ ಮ್ಯಾನ್ಮಾರ್ ನೆಲದಲ್ಲಿ ಸರ್ಜಿಕಲ್ ಸ್ಟ್ರೈಕ್ ಕಾರ್ಯಾಚರಣೆ ನೇತೃತ್ವ ವಹಿಸಿದ್ದ ನಿವೃತ್ತ ಸೇನಾಧಿಕಾರಿ ಕರ್ನಲ್ (ನಿವೃತ್ತ) ನೆಕ್ಟರ್ ಸಂಜೆನ್ಬಮ್ ಅವರನ್ನು ಐದು ವರ್ಷಗಳ ಅಧಿಕಾರಾವಧಿಗೆ ಮಣಿಪುರ ಪೊಲೀಸ್ ಇಲಾಖೆಯಲ್ಲಿ ಹಿರಿಯ ಸೂಪರಿಂಟೆಂಡೆಂಟ್ (ಯುದ್ಧ) ಆಗಿ ನೇಮಿಸಿದೆ.  2015 ರಲ್ಲಿ ಮ್ಯಾನ್ಮಾರ್‌ನಲ್ಲಿ ಭಾರತದ ಸರ್ಜಿಕಲ್ ಸ್ಟ್ರೈಕ್‌ಗಳಲ್ಲಿ ಇದೇ ಅಧಿಕಾರಿ ಕರ್ನಲ್ (ನಿವೃತ್ತ) ನೆಕ್ಟರ್ ಸಂಜೆನ್ಬಮ್ ಪ್ರಮುಖ ಪಾತ್ರ ವಹಿಸಿದ್ದರು. ಈಗ ಕಳೆದ ಎರಡು ತಿಂಗಳಲ್ಲಿ 170 ಕ್ಕೂ ಹೆಚ್ಚು ಜೀವಗಳನ್ನು ಬಲಿ ಪಡೆದ ರಾಜ್ಯದಲ್ಲಿನ ಅಶಾಂತಿಯನ್ನು ನಿಭಾಯಿಸಲು ಮಣಿಪುರ ಸರ್ಕಾರಕ್ಕೆ ಸಹಾಯ ಮಾಡಲಿದ್ದಾರೆ. 

ಸೇನಾಧಿಕಾರಿ ಕರ್ನಲ್ (ನಿವೃತ್ತ) ನೆಕ್ಟರ್ ಸಂಜೆನ್ಬಮ್ 21 ಪ್ಯಾರಾ (ವಿಶೇಷ ಪಡೆಗಳು) ನಲ್ಲಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ಕೀರ್ತಿ ಚಕ್ರ - ಶಾಂತಿಕಾಲದ ಎರಡನೇ ಅತ್ಯುನ್ನತ ಶೌರ್ಯ ಪ್ರಶಸ್ತಿ - ಮತ್ತು ಶೌರ್ಯ ಚಕ್ರ - ಮೂರನೇ ಅತ್ಯುನ್ನತ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. 

ಮಣಿಪುರದ ಜಂಟಿ ಕಾರ್ಯದರ್ಶಿ (ಗೃಹ) ಆಗಸ್ಟ್ 28 ರಂದು ಹೊರಡಿಸಿದ ಆದೇಶದಲ್ಲಿ ಜೂನ್ 12 ರ ಕ್ಯಾಬಿನೆಟ್ ನಿರ್ಧಾರದ ನಂತರ ನೇಮಕಾತಿ ಮಾಡಲಾಗಿದೆ. ಸಿಎಂ ಎನ್ ಬಿರೇನ್ ಸಿಂಗ್ ಸರ್ಕಾರ ಮತ್ತು ಕೇಂದ್ರ ಸರ್ಕಾರವು ಈಶಾನ್ಯ ರಾಜ್ಯದಲ್ಲಿ ಹಿಂಸಾಚಾರದ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ಶತಾಯಗತಾಯ ಹಿಂಸಾಚಾರವನ್ನು ತಡೆಯುವ ನಿಟ್ಟಿನಲ್ಲಿ ಈ ನೇಮಕಾತಿ ಮಾಡಿದೆ ಎಂದು ಹೇಳಲಾಗಿದೆ. 

ಮಣಿಪುರದಲ್ಲಿ ಮೈತಿ ಮತ್ತು ಕುಕಿ ಸಮುದಾಯಗಳ ನಡುವಿನ ಜನಾಂಗೀಯ ಹಿಂಸಾಚಾರದಲ್ಲಿ ಇದುವರೆಗೆ 100 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಮಣಿಪುರದ ಜನಸಂಖ್ಯೆಯ ಶೇಕಡ 53 ರಷ್ಟಿರುವ ಮೈತೈಗಳು ಇಂಫಾಲ್ ಕಣಿವೆಯಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದಾರೆ. ಬುಡಕಟ್ಟು ಜನಾಂಗದವರು -- ನಾಗಾಗಳು ಮತ್ತು ಕುಕಿಗಳು -- ಜನಸಂಖ್ಯೆಯ ಮತ್ತೊಂದು ಶೇಕಡಾ 40 ರಷ್ಟಿದ್ದಾರೆ ಮತ್ತು ಬೆಟ್ಟದ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com