ಕನ್ಯಾಕುಮಾರಿ ಬೀಚ್‌ನಲ್ಲಿ ಮುಳುಗಿ ಬೆಂಗಳೂರಿನ ಇಬ್ಬರು ಪ್ರವಾಸಿಗರು ಸಾವು, ಯುವತಿ ರಕ್ಷಣೆ

ತಮಿಳುನಾಡಿನ ಕನ್ಯಾಕುಮಾರಿ ಬೀಚ್ ನಲ್ಲಿ ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಇಬ್ಬರು ಸಾವನ್ನಪ್ಪಿದ್ದು ಓರ್ವ ಯುವತಿಯನ್ನು ರಕ್ಷಿಸಲಾಗಿದೆ.  
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕನ್ಯಾಕುಮಾರಿ: ತಮಿಳುನಾಡಿನ ಕನ್ಯಾಕುಮಾರಿ ಬೀಚ್ ನಲ್ಲಿ ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಇಬ್ಬರು ಸಾವನ್ನಪ್ಪಿದ್ದು ಓರ್ವ ಯುವತಿಯನ್ನು ರಕ್ಷಿಸಲಾಗಿದೆ.  

ಮೃತರನ್ನು ಬೆಂಗಳೂರು ಮೂಲದ 30 ವರ್ಷದ ಮಣಿ ಮತ್ತು 30 ವರ್ಷದ ಸುರೇಶ್ ಎಂದು ತಿಳಿದುಬಂದಿದೆ. ಇನ್ನು 25 ವರ್ಷದ ಬಿಂದು ಎಂಬುವರನ್ನು ರಕ್ಷಿಸಲಾಗಿದೆ. ಎಲ್ಲರೂ ಬೆಂಗಳೂರಿನ ಟೆಕ್ನೋ ಪಾರ್ಕ್ ಉದ್ಯೋಗಿಯಾಗಿದ್ದರು. ಶನಿವಾರ ಕನ್ಯಾಕುಮಾರಿಗೆ ಆಗಮಿಸಿದ ಅವರು ಖಾಸಗಿ ಹೋಟೆಲ್‌ನಲ್ಲಿ ತಂಗಿದ್ದರು. 

ಇಂದು ಬೆಳಗ್ಗೆ ಬೀಚ್‌ ಬಳಿಗೆ ಹತ್ತು ಮಂದಿ ತೆರಳಿದ್ದು ಈಜಲು ಸಮುದ್ರಕ್ಕೆ ಇಳಿದಿದ್ದರು. ದುರದೃಷ್ಟವಶಾತ್, ಮಣಿ, ಸುರೇಶ್ ಮತ್ತು ಬಿಂದು ಸಮುದ್ರದ ಬೃಹತ್ ಅಲೆಗಳಿಗೆ ಸಿಲುಕಿದ್ದರು. ಇದನ್ನು ಕಂಡ ಮೀನುಗಾರರು ಮತ್ತು ನೆರೆಹೊರೆಯವರು ರಕ್ಷಣೆಗೆ ಮುಂದಾಗಿದ್ದು ಬಿಂದುವನ್ನು ಮಾತ್ರ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ಅವರನ್ನು ಚಿಕಿತ್ಸೆಗಾಗಿ ಕನ್ಯಾಕುಮಾರಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು.

ಮಾಹಿತಿಯ ಮೇರೆಗೆ ಕನ್ಯಾಕುಮಾರಿ ಕೋಸ್ಟ್ ಗಾರ್ಡ್ ಗ್ರೂಪ್ ಪೊಲೀಸರು, ಇನ್‌ಸ್ಪೆಕ್ಟರ್ ನವೀನ್ ನೇತೃತ್ವದಲ್ಲಿ ತ್ವರಿತವಾಗಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com