'ಯಾರೂ ಮಾಡದಿದ್ದರೆ ನಾನೇ ಉದಯನಿಧಿ ಶಿರಚ್ಛೇದ ಮಾಡುತ್ತೇನೆ' ಮತ್ತೆ ಗುಡುಗಿದ ಅಯೋಧ್ಯೆ ಅರ್ಚಕ
ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರ “ಸನಾತನ ಧರ್ಮ ನಿರ್ಮೂಲನೆ” ಹೇಳಿಕೆಗೆ ಸಂಬಂಧಿಸಿದಂತೆ ಅವರ ಶಿರಚ್ಛೇದನ ಮಾಡಬೇಕು ಎಂದು ಕರೆ ನೀಡಿ ಸುದ್ದಿಯಾಗಿರುವ ಅಯೋಧ್ಯೆಯ ಅರ್ಚಕ ಪರಮಹಂಸ ಆಚಾರ್ಯ ಅವರು ತಮ್ಮ ಹೇಳಿಕೆಗೆ ಬದ್ಧರಾಗಿ ಪುನರುಚ್ಛರಿಸಿದ್ದಾರೆ.
ಯಾರೂ ಮಾಡದಿದ್ದರೆ “ಅಗತ್ಯವಿದ್ದರೆ, ನಾನೇ ಎಂಕೆ ಸ್ಟಾಲಿನ್ ಅವರ ಮಗನ ಶಿರಚ್ಛೇದ ಮಾಡುತ್ತೇನೆ.ಯಾರಾದರೂ ಶಿರಚ್ಛೇದ ಮಾಡಲು ಮುಂದಾದರೆ ಅವರಿಗೆ ಇನ್ನೂ 10 ಕೋಟಿ ರೂಪಾಯಿ ಹೆಚ್ಚು ಬಹುಮಾನವನ್ನು ಹೆಚ್ಚಿಸುತ್ತೇನೆ ಎಂದಿದ್ದಾರೆ.
“ಮೊದಲು ಸನಾತನ ಧರ್ಮದ ಇತಿಹಾಸವನ್ನು ಓದಿ ನಂತರ ಅದರ ವಿರುದ್ಧ ಹೇಳಿಕೆ ನೀಡಿ ಎಂದು ನಾನು ಅವರಿಗೆ ಹೇಳಲು ಬಯಸುತ್ತೇನೆ, ಅವರು ನಮ್ಮ ಸನಾತನ ಧರ್ಮದ ವಿರುದ್ಧ ಏನು ಹೇಳಿದ್ದರೂ ಕ್ಷಮೆಯಾಚಿಸಬೇಕು. ಕ್ಷಮೆ ಕೇಳದಿದ್ದರೆ, ಅವರು ಮುಖ್ಯಮಂತ್ರಿಗಳ ಮಗನಾದರೂ ಚಿಂತೆಯಿಲ್ಲ, ಶಿರಚ್ಛೇದ ಮಾಡುವವರಿಗೆ ಇನ್ನೂ 10 ಕೋಟಿ ರೂಪಾಯಿ ಹೆಚ್ಚು ಕೊಡುತ್ತೇನೆ, ಬೇಕಿದ್ದರೆ ನಾನೇ ಶಿರಚ್ಛೇದ ಮಾಡುತ್ತೇನೆ ಎಂದು ಆಕ್ರೋಶಭರಿತರಾಗಿ ಹೇಳಿದ್ದಾರೆ.
‘ಸನಾತನ ಧರ್ಮ’ದಿಂದಲೇ ದೇಶವಾಗಿದ್ದು, ಅವರು ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಬೇಕು. ಅವರು ದೇಶದ 100 ಕೋಟಿ ಜನರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದಿದ್ದಾರೆ.