ಸನಾತನ ಧರ್ಮದ ಕುರಿತು ಉದಯನಿಧಿ ಸ್ಟಾಲಿನ್ ಹೇಳಿಕೆ ಆಘಾತಕಾರಿ: ಪ್ರಧಾನಿ ಮೋದಿ

ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂಬ ತಮಿಳುನಾಡು ಸಿಎಂ ಪುತ್ರ ಹಾಗೂ ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆ ಆಘಾತಕಾರಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪ್ರಧಾನಿ ಮೋದಿ-ಉದಯನಿಧಿ ಸ್ಟಾಲಿನ್
ಪ್ರಧಾನಿ ಮೋದಿ-ಉದಯನಿಧಿ ಸ್ಟಾಲಿನ್

ನವದೆಹಲಿ: ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂಬ ತಮಿಳುನಾಡು ಸಿಎಂ ಪುತ್ರ ಹಾಗೂ ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆ ಆಘಾತಕಾರಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಇತ್ತೀಚೆಗೆ ಸನಾತನ ಧರ್ಮದ ವಿರುದ್ಧ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರ ವಿವಾದಾತ್ಮಕ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಉದಯನಿಧಿ ಹೇಳಿಕೆ ಆಘಾತಕಾರಿ ಎಂದು ಹೇಳಿದ್ದಾರೆ. 

ಸಚಿವ ಸಂಪುಟ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ಮೋದಿ, “ಸನಾತನ ಧರ್ಮದ ಮೇಲಿನ ಇಂತಹ ಟೀಕೆಗಳು ಅತ್ಯಂತ ಆಘಾತಕಾರಿ ಮತ್ತು ಅತ್ಯಂತ ಖಂಡನೀಯ. ಅವರಿಗೆ ನಮ್ಮೆಲ್ಲರಿಂದ ಸರಿಯಾದ ಮತ್ತು ಸಮರ್ಥನೀಯ ಪ್ರತಿಕ್ರಿಯೆಯ ಅಗತ್ಯವಿದೆ. ವಿಶೇಷವಾಗಿ ದಕ್ಷಿಣದಿಂದ ಬಂದವರ ಪ್ರತಿಕ್ರಿಯೆಯು ಘನತೆ, ತಾರ್ಕಿಕ ಮತ್ತು ಸತ್ಯ ಮತ್ತು ಅಂಕಿ ಅಂಶಗಳಿಂದ ತುಂಬಿರಬೇಕು ಎಂದು ಮೋದಿ ಹೇಳಿದರು ಎಂದು ಹೇಳಲಾಗಿದೆ.

'ಹೆಸರು ಕರೆಯುವುದು ಮತ್ತು ಪರಭಾಷೆಯ ಹೆಸರಿನಲ್ಲಿ ಆಟವಾಡುವುದನ್ನು ತಪ್ಪಿಸಬೇಕು ಎಂದು ಸಲಹೆ ನೀಡಿದರು. ಇತಿಹಾಸದ ಆಳಕ್ಕೆ ಹೋಗುವುದನ್ನು ತಪ್ಪಿಸಿ, ಬದಲಿಗೆ ಸಮಕಾಲೀನ ಪರಿಸ್ಥಿತಿಯ ಬಗ್ಗೆ ಮಾತನಾಡುವಂತೆ ಮೋದಿ ತಮ್ಮ ಸಹೋದ್ಯೋಗಿಗಳಿಗೆ ಸಲಹೆ ನೀಡಿದರು. ಮೋದಿಯವರ ನಿರ್ದೇಶನವನ್ನು ಅನುಸರಿಸಿ, ಬಿಜೆಪಿಯು ಉದಯನಿಧಿ ವಿರುದ್ಧ ತಮ್ಮ ದಾಳಿಯನ್ನು ತೀಕ್ಷ್ಣಗೊಳಿಸುತ್ತದೆ ಎಂದು ನಿರೀಕ್ಷಿಸಬಹುದು. 

ಲವು ದಿನಗಳ ಹಿಂದೆ, ಉದಯನಿಧಿ ಅವರು ಸನಾತನ ಧರ್ಮವನ್ನು ನಿರ್ಮೂಲನೆ ಮಾಡಲು ಕರೆ ನೀಡಿದ್ದು ಮಾತ್ರವಲ್ಲದೇ ಅದನ್ನು ಡೆಂಗ್ಯೂ ಮತ್ತು COVID-19 ನಂತಹ ವೈರಲ್ ಕಾಯಿಲೆಗಳಿಗೆ ಹೋಲಿಸಿದ್ದರು.

ಏತನ್ಮಧ್ಯೆ, ಧಾರ್ಮಿಕ ಭಾವನೆಗಳನ್ನು ಕೆರಳಿಸಿದ ಆರೋಪದ ಮೇಲೆ ಉದಯನಿಧಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಹಾಗೂ ಕರ್ನಾಟಕದ ಸಚಿವ ಪ್ರಿಯಾಂಕ್  ಖರ್ಗೆವಿರುದ್ಧ ಉತ್ತರ ಪ್ರದೇಶದಲ್ಲಿ ಎಫ್ಐಆರ್ ದಾಖಲಾಗಿದೆ. ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕೆಂಬ ಅವರ ಕರೆಗಾಗಿ ಉದಯನಿಧಿ ಮತ್ತು ಅವರ ಹೇಳಿಕೆಯನ್ನು ಬೆಂಬಲಿಸಿದ್ದಕ್ಕಾಗಿ ಪ್ರಿಯಾಂಕ್ ಖರ್ಗೆ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸಮಾನಾಂತರವಾಗಿ, ಮಧುರೈ ಪೊಲೀಸರು ಉದಯನಿಧಿಯ ಶಿರಚ್ಛೇದಕ್ಕಾಗಿ ರೂ 10 ಕೋಟಿ ಬಹುಮಾನವನ್ನು ಘೋಷಿಸಿದ ಅಯೋಧ್ಯೆಯ ಸ್ವಾಮೀಜಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಂಪುಟ ಸಭೆಯಲ್ಲಿ ಜಿ20 ಕುರಿತು ಮಹತ್ವದ ಚರ್ಚೆ
ಮುಂಬರುವ ಜಿ 20 ಶೃಂಗಸಭೆಗೆ ಸಂಬಂಧಿಸಿದಂತೆ, ಪ್ರಧಾನಿ ಅವರು ತಮ್ಮ ಮಂತ್ರಿಗಳೊಂದಿಗೆ ಮಾಡಬೇಕಾದ ಮತ್ತು ಮಾಡಬಾರದ ಪಟ್ಟಿಯನ್ನು ಹಂಚಿಕೊಂಡರು. ಉದಾಹರಣೆಗೆ, ಅವರು ತಮ್ಮ ಅಧಿಕೃತ ವಾಹನಗಳನ್ನು ಬಿಟ್ಟು ವಿವಿಧ ಸಭೆಗಳಿಗೆ ಭಾರತ್ ಮಂಟಪ ಮತ್ತು ಇತರ ಸ್ಥಳಗಳನ್ನು ತಲುಪಲು ಶಟಲ್ ಸೇವೆಯನ್ನು ಬಳಸಲು ಕೇಳಿದರು. ಜಿ20 ಇಂಡಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು ಮತ್ತು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಲ್ಲದೆ, ಅತಿಥಿ ದೇವೋಭವ (ಅತಿಥಿಯೇ ದೇವರು) ಭಾರತ ಸಂಸ್ಕೃತಿಯ ಸಾರ ಎಂದು ಸ್ಮರಿಸಿದ ಅವರು ವಿದೇಶಿ ಗಣ್ಯರನ್ನು ಅತ್ಯಂತ ಸೌಜನ್ಯದಿಂದ ಕಾಣುವಂತೆ ಮೋದಿ ಸಲಹೆ ನೀಡಿದರು. ಪ್ರಧಾನಿ ಜಕಾರ್ತಕ್ಕೆ ತೆರಳುವ ಗಂಟೆಗಳ ಮೊದಲು ಸಭೆ ನಡೆಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com