'ಭಾರತ ಸೂಪರ್ ಪವರ್ ರಾಷ್ಟ್ರ, ಚೀನಾಕ್ಕಿಂತ ಮುಂದಿದೆ': ಆಫ್ರಿಕನ್ ಒಕ್ಕೂಟದ ಪ್ರಶಂಸೆ
ಭಾರತ ಸೂಪರ್ ಪವರ್ ರಾಷ್ಟ್ರವಾಗಿ ಮಾರ್ಪಟ್ಟಿದ್ದು, ಚೀನಾಕ್ಕಿಂತ ಮುಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ನಾಯಕತ್ವವನ್ನು ಆಫ್ರಿಕನ್ ಒಕ್ಕೂಟ ಪ್ರಶಂಸಿಸಿದೆ.
Published: 10th September 2023 10:55 PM | Last Updated: 10th September 2023 10:58 PM | A+A A-

ಮೋದಿ ಮತ್ತು ಆಫ್ರಿಕನ್ ಒಕ್ಕೂಟ
ನವದೆಹಲಿ: ಭಾರತ ಸೂಪರ್ ಪವರ್ ರಾಷ್ಟ್ರವಾಗಿ ಮಾರ್ಪಟ್ಟಿದ್ದು, ಚೀನಾಕ್ಕಿಂತ ಮುಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ನಾಯಕತ್ವವನ್ನು ಆಫ್ರಿಕನ್ ಒಕ್ಕೂಟ ಪ್ರಶಂಸಿಸಿದೆ.
ಯೂನಿಯನ್ ಆಫ್ ಕೊಮೊರೊಸ್‌ನ ಅಧ್ಯಕ್ಷ ಮತ್ತು ಆಫ್ರಿಕನ್ ಯೂನಿಯನ್ ಅಧ್ಯಕ್ಷ ಅಜಲಿ ಅಸ್ಸೌಮಾನಿ ಭಾನುವಾರ "ಹಾಲಿ ಸಮಯ"ದಲ್ಲಿ ಅಂದರೆ ಈಗ ಚೀನಾಕ್ಕಿಂತ ಮುಂದಿದೆ. ಈ ವಿಷಯದಲ್ಲಿ ಭಾರತವು ಸೂಪರ್ ಪವರ್ ರಾಷ್ಟ್ರವಾಗಿದೆ. ವಿಶ್ವದ ಐದನೇ ಮಹಾಶಕ್ತಿಯಾಗಿ, ಆಫ್ರಿಕಾದಲ್ಲಿ ಭಾರತಕ್ಕೆ ಸಾಕಷ್ಟು ಸ್ಥಳಾವಕಾಶವಿದೆ ಎಂದು ಹೇಳಿದರು.
ಇದನ್ನೂ ಓದಿ: ಜಿ20 ಶೃಂಗಸಭೆ: ಬೆಲ್ಟ್ ಅಂಡ್ ರೋಡ್ ಪ್ರಾಜೆಕ್ಟ್ ನಿಂದ ಹೊರಬಿದ್ದ ಇಟಲಿ, ಚೀನಾಕ್ಕೆ ಹೊಡೆತ!
"ಭಾರತವು ವಿಶ್ವದ 5ನೇ ಸೂಪರ್ ಪವರ್ ಆಗಿದೆ, ಆದ್ದರಿಂದ ಆಫ್ರಿಕಾದಲ್ಲಿ ಭಾರತಕ್ಕೆ ಸಾಕಷ್ಟು ಅವಕಾಶವಿದೆ. ಭಾರತವು ಬಾಹ್ಯಾಕಾಶಕ್ಕೆ ಹೋದಷ್ಟು ಶಕ್ತಿಶಾಲಿಯಾಗಿದೆ ಎಂದು ನಮಗೆ ತಿಳಿದಿದೆ. ಆದ್ದರಿಂದ ನಾವು ಸಮನ್ವಯಗೊಳಿಸಬೇಕಾಗಿದೆ. ಭಾರತವು ಈ ನಿರ್ಧಿಷ್ಠ ಅವಧಿಯಲ್ಲಿ ಸೂಪರ್ ಪವರ್ ಆಗಿದೆ , ಭಾರತವು ಈಗ ಚೀನಾಕ್ಕಿಂತ ಮುಂದಿದೆ ಎಂದು ಅಸ್ಸೌಮಾನಿ ಹೇಳಿದರು.
ಇದೇ ವೇಳೆ ಬಾಹ್ಯಾಕಾಶ ಸಂಶೋಧನೆಯಲ್ಲಿನ ಪ್ರಗತಿಗಾಗಿ ಅವರು ಭಾರತವನ್ನು ಶ್ಲಾಘಿಸಿದರು.
ಇದನ್ನೂ ಓದಿ: ಜಿ-20 ನ್ನು ರಾಜಕೀಯಗೊಳಿಸದೇ ಇದ್ದದ್ದಕ್ಕೆ ಧನ್ಯವಾದ: ಭಾರತಕ್ಕೆ ರಷ್ಯಾ ವಿದೇಶಾಂಗ ಸಚಿವ
ಆಫ್ರಿಕನ್ ಯೂನಿಯನ್ ಅನ್ನು ಜಿ20 ಕುಟುಂಬಕ್ಕೆ ಔಪಚಾರಿಕವಾಗಿ ಸೇರಿಸಿಕೊಂಡ ನಂತರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಪ್ಪಿಕೊಂಡ ಕ್ಷಣವನ್ನು ನೆನಪಿಸಿಕೊಂಡ AU ಅಧ್ಯಕ್ಷರು, ಇದು ನನಗೆ ಭಾವನಾತ್ಮಕವಾಗಿದೆ ಎಂದು ಹೇಳಿದರು. "ನಾನು ಅಳಲು ಹೊರಟಿದ್ದೆ. ಇದು ನನಗೆ ಒಂದು ದೊಡ್ಡ ಭಾವನಾತ್ಮಕ ವಿಚಾರವಾಗಿತ್ತು. ಏಕೆಂದರೆ ವಾಸ್ತವವಾಗಿ, ಮೊದಲು ನಾವು ಚರ್ಚೆ ನಡೆಸುತ್ತೇವೆ ಮತ್ತು ನಂತರ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಭಾವಿಸಿದ್ದೆವು. ಆದರೆ ಶೃಂಗಸಭೆಯ ಪ್ರಾರಂಭದಲ್ಲೇ ನಾವು ಕೂಡ ಒಂದು ಸದಸ್ಯರಾಷ್ಟ್ರ ಎಂದು ಘೋಷಿಸಲಾಯಿತು ಅವರು ಹೇಳಿದರು.
ಇದನ್ನೂ ಓದಿ: ಕಾಲಕ್ಕೆ ತಕ್ಕಂತೆ ಬದಲಾಗದವರು ತಮ್ಮ ಪ್ರಸ್ತುತತೆಯನ್ನು ಕಳೆದುಕೊಳ್ಳುತ್ತಾರೆ: ಜಿ20 ಅಧಿವೇಶನದಲ್ಲಿ ಪ್ರಧಾನಿ ಮೋದಿ ಮಾತು
ನಿರ್ಧಾರಕ್ಕೆ ಬರುವ ಮೊದಲು ಚರ್ಚೆ ನಡೆಯಲಿದೆ ಎಂದು ಅವರು ಭಾವಿಸಿದ್ದರು ಆದರೆ ಭಾನುವಾರದ ಎರಡು ದಿನಗಳ ಶೃಂಗಸಭೆಯ ಪ್ರಾರಂಭದಲ್ಲಿ ಆಫ್ರಿಕನ್ ಯೂನಿಯನ್ ಅನ್ನು ಜಿ 20 ಕುಟುಂಬದ ಭಾಗವಾಗಿ ಘೋಷಿಸಲಾಯಿತು.