ತೆಲಂಗಾಣ: ಮಹಿಳೆಯರಿಗೆ ಮಾಸಿಕ ರೂ. 2,500 ಆರ್ಥಿಕ ನೆರವು ಸೇರಿದಂತೆ 6 ಗ್ಯಾರಂಟಿ ಘೋಷಿಸಿದ ಸೋನಿಯಾ ಗಾಂಧಿ

ಕರ್ನಾಟಕದಂತೆ ತೆಲಂಗಾಣದಲ್ಲೂ ಕಾಂಗ್ರೆಸ್ ಬರಪೂರ ಯೋಜನೆಗಳನ್ನು ಘೋಷಿಸಿದೆ. ಕಾಂಗ್ರೆಸ್‌ನ ಮಾಜಿ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರು ಚುನಾವಣಾ  ರ‍್ಯಾಲಿಯಲ್ಲಿ ಮಹಿಳೆಯರಿಗೆ ಮಾಸಿಕ ರೂ. 2,500 ಆರ್ಥಿಕ ನೆರವು ಸೇರಿದಂತೆ 6 ಗ್ಯಾರಂಟಿಗಳನ್ನು ಘೋಷಿಸಿದರು.
ಸೋನಿಯಾ ಗಾಂಧಿ
ಸೋನಿಯಾ ಗಾಂಧಿ

ಹೈದರಾಬಾದ್: ಕರ್ನಾಟಕದಂತೆ ತೆಲಂಗಾಣದಲ್ಲೂ ಕಾಂಗ್ರೆಸ್ ಬರಪೂರ ಯೋಜನೆಗಳನ್ನು ಘೋಷಿಸಿದೆ. ಕಾಂಗ್ರೆಸ್‌ನ ಮಾಜಿ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರು ಚುನಾವಣಾ  ರ‍್ಯಾಲಿಯಲ್ಲಿ ಮಹಿಳೆಯರಿಗೆ ಮಾಸಿಕ ರೂ. 2,500 ಆರ್ಥಿಕ ನೆರವು ಸೇರಿದಂತೆ 6 ಗ್ಯಾರಂಟಿಗಳನ್ನು ಘೋಷಿಸಿದರು.

ತೆಲಂಗಾಣದ ಮಹಿಳೆಯರಿಗೆ ಮಹಾಲಕ್ಷ್ಮಿ ಯೋಜನೆಯಡಿ ಮಾಸಿಕ ₹2,500 ಆರ್ಥಿಕ ನೆರವು, ₹500ಕ್ಕೆ ಗ್ಯಾಸ್ ಸಿಲಿಂಡರ್, ರಾಜ್ಯಾದ್ಯಂತ ಟಿಎಸ್‌ಆರ್‌ಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ, ತೆಲಂಗಾಣ ಜನತೆಯ ಆಶೋತ್ತರಗಳನ್ನು ಈಡೇರಿಸಲು ನಾವು 6 ಭರವಸೆಗಳನ್ನು ಘೋಷಿಸುತ್ತಿದ್ದೇವೆ, ಅವುಗಳಲ್ಲಿ ಪ್ರತಿಯೊಂದನ್ನು ಪೂರೈಸಲು ನಾವು ಬದ್ಧರಾಗಿದ್ದೇವೆ ಎಂದು ಅವರು ಹೇಳಿದರು. 

ಹೈದರಾಬಾದ್ ಸಮೀಪದ ತುಕ್ಕುಗುಡದಲ್ಲಿ ನಡೆದ ಚುನಾವಣಾ  ರ‍್ಯಾಲಿಯಲ್ಲಿ ಮಾತನಾಡಿದ ಸೋನಿಯಾ ಗಾಂಧಿ, ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರ ಕಾಣುವುದು ನನ್ನ ಕನಸು, ಅದು ಸಮಾಜದ ಎಲ್ಲಾ ವರ್ಗಗಳ ಪರ ಕೆಲಸ ಮಾಡಲಿದ್ದು, ಕಾಂಗ್ರೆಸ್  ಬೆಂಬಲಿಸುವಂತೆ ಜನತೆಯಲ್ಲಿ ಅವರು ಮನವಿ ಮಾಡಿದರು. 

ತೆಲಂಗಾಣ ರಾಜ್ಯ ಉದಯದಲ್ಲಿ ನಾನು ನನ್ನ ಸಹೋದ್ಯೋಗಿಗಳೊಂದಿಗೆ ಭಾಗಿಯಾದ ಅವಕಾಶ ಸಿಕ್ಕಿತ್ತು. ಈಗ ರಾಜ್ಯದ ಅಭಿವೃದ್ಧಿಗಾಗಿ ಆರು ಗ್ಯಾರಂಟಿಗಳನ್ನು ಘೋಷಿಸಿದ್ದು, ಅವುಗಳನ್ನು ಪೂರೈಸಲು ನಾವು ಬದ್ಧರಾಗಿದ್ದೇವೆ ಎಂದು ಅವರು ತಿಳಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com