ಹಳೆ ಸಂಸತ್ತು ಭವನ ಇನ್ನು ಮುಂದೆ 'ಸಂವಿಧಾನ ಸದನ': ಪ್ರಧಾನಿ ಮೋದಿ ಏನೆಂದರು?

ಸೆಪ್ಟೆಂಬರ್ 19, ಮಂಗಳವಾರ ದೆಹಲಿಯಲ್ಲಿ ಆಡಳಿತ ಶಕ್ತಿ ಕೇಂದ್ರ ಸಂಸತ್ತು ಹಳೆಯ ಕಟ್ಟಡದಿಂದ ಹೊಸ ಕಟ್ಟಡಕ್ಕೆ ಸ್ಥಳಾಂತರವಾಗಿದೆ.
ದೆಹಲಿಯ ಹಳೆ ಮತ್ತು ಹೊಸ ಸಂಸತ್ತು ಭವನ
ದೆಹಲಿಯ ಹಳೆ ಮತ್ತು ಹೊಸ ಸಂಸತ್ತು ಭವನ

ನವದೆಹಲಿ: ಸೆಪ್ಟೆಂಬರ್ 19, ಮಂಗಳವಾರ ದೆಹಲಿಯಲ್ಲಿ ಆಡಳಿತ ಶಕ್ತಿ ಕೇಂದ್ರ ಸಂಸತ್ತು ಹಳೆಯ ಕಟ್ಟಡದಿಂದ ಹೊಸ ಕಟ್ಟಡಕ್ಕೆ ಸ್ಥಳಾಂತರವಾಗಿದೆ.

ಈ ಸಂದರ್ಭದಲ್ಲಿ ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಸಂಸದರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಹೊಸ ಸಂಸತ್ ಭವನಕ್ಕೆ ಹತ್ತಿರದಲ್ಲೇ ಇರುವ ಹಳೆಯ ಸಂಸತ್ ಭವನಕ್ಕೆ ಅಧಿಕೃತವಾಗಿ ‘ಸಂವಿಧಾನ ಸದನ’ ಎಂದು ನಾಮಕರಣ ಮಾಡಿದರು.

ಭಾರತವನ್ನು 'ವಿಕ್ಷಿತ್-ಭಾರತ್' ಆಗಿ ಪರಿವರ್ತಿಸುವ ಸರ್ಕಾರದ ಸಂಕಲ್ಪವನ್ನು ವ್ಯಕ್ತಪಡಿಸಿದ ಪ್ರಧಾನಿ ಮೋದಿಯವರು ಸೆಂಟ್ರಲ್ ಹಾಲ್‌ನ ಐತಿಹಾಸಿಕ ಭವ್ಯತೆಯಿಂದ ಸ್ಫೂರ್ತಿ ಪಡೆದಿದ್ದೇವೆ ಎಂದರು. 

ಹಳೆಯ ಸಂಸತ್ ಭವನದ ಐತಿಹಾಸಿಕ ಪ್ರಾಮುಖ್ಯತೆಯನ್ನು ಪ್ರತಿಬಿಂಬಿಸಿದ ಅವರು, ಸಂವಿಧಾನವು ರೂಪುಗೊಂಡ ಸ್ಥಳವಾಗಿದೆ. ಅಧಿಕಾರದ ಹಸ್ತಾಂತರವನ್ನು ಕಾರ್ಯಗತಗೊಳಿಸಲಾಗಿದೆ. ಸ್ವಾತಂತ್ರ್ಯದ ನಂತರ ಸೆಂಟ್ರಲ್ ಹಾಲ್ ರಾಷ್ಟ್ರೀಯ ಧ್ವಜ ಮತ್ತು ಗೀತೆಯನ್ನು ಅಳವಡಿಸಿಕೊಂಡಿದೆ ಎಂದರು, 1952 ರಿಂದ ಪ್ರಪಂಚದಾದ್ಯಂತದ 41 ಕ್ಕೂ ಹೆಚ್ಚು ದೇಶಗಳು ಮತ್ತು ಸರ್ಕಾರಗಳ ಮುಖ್ಯಸ್ಥರು ಇಲ್ಲಿ ಆತಿಥ್ಯ ಸ್ವೀಕರಿಸಿ ಹೋಗಿದ್ದಾರೆ ಎಂದರು. 

ಭಾರತದ ರಾಷ್ಟ್ರಪತಿಗಳು ಹಳೆಯ ಸಂಸತ್ತು ಭವನದಲ್ಲಿ 86 ಬಾರಿ ಸಭಾಂಗಣವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಕಳೆದ ಏಳು ದಶಕಗಳಲ್ಲಿ ಉಭಯ ಸದನಗಳು ಸುಮಾರು 4,000 ಕಾಯಿದೆಗಳನ್ನು ಅಂಗೀಕರಿಸಿದವು.

ಆರ್ಟಿಕಲ್ 370 ರ ತೆಗೆದುಹಾಕುವಿಕೆಯನ್ನು ಈ ಸಂದರ್ಭದಲ್ಲಿ ಪ್ರಸ್ತಾಪಿಸಿದ ಪ್ರಧಾನಿ, ಜಮ್ಮು ಮತ್ತು ಕಾಶ್ಮೀರವು ಶಾಂತಿ ಮತ್ತು ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ಪ್ರತಿಪಾದಿಸಿದರು, ಭಾರತವು ಈಗ ಶಕ್ತಿಯಿಂದ ತುಂಬಿದೆ ಎಂದ ಅವರು ವೇಗವಾಗಿ ಪ್ರಗತಿ ದರಗಳನ್ನು ಸಾಧಿಸುವ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು, ಸಂಸತ್ತಿನಲ್ಲಿ ಪರಿಚಯಿಸಲಾದ ಸುಧಾರಣೆಗಳು ಪ್ರತಿಯೊಬ್ಬ ಭಾರತೀಯನ ಆಕಾಂಕ್ಷೆಗಳಿಗೆ ಆದ್ಯತೆ ನೀಡಬೇಕು ಎಂದರು. 

ಭಾರತವು "ಆತ್ಮನಿರ್ಭರ್" (ಸ್ವಾವಲಂಬಿ) ಆಗಬೇಕು. ಆರ್ಥಿಕತೆಯನ್ನು ಬಲಪಡಿಸುವುದು ಮತ್ತು ಸಾಮಾಜಿಕ ನ್ಯಾಯವನ್ನು ಖಚಿತಪಡಿಸಿಕೊಳ್ಳುವುದು ಅತ್ಯಗತ್ಯ, ಜಗತ್ತು ಭಾರತದತ್ತ ನೋಡುತ್ತಿದೆ, ಅದು ಈಗ ಶೀತಲ ಸಮರದ ಯುಗದಿಂದ "ತಟಸ್ಥ ದೇಶ" ಕ್ಕಿಂತ ಹೆಚ್ಚಾಗಿ "ವಿಶ್ವ ಮಿತ್ರ" ಎಂದು ಗುರುತಿಸಲ್ಪಟ್ಟಿದೆ ಎಂದರು. 

ನಾರಿ ಶಕ್ತಿ ವಂದನ್ ಅಧಿನಿಯಮ್: ಭಾರತದ ಸಾಮರ್ಥ್ಯ ಮತ್ತು ಬೆಳೆಯುತ್ತಿರುವ ಶಕ್ತಿಯನ್ನು ಎತ್ತಿ ಹಿಡಿದ ಅವರು, ಜಿ20 ನಲ್ಲಿ ಭಾರತದ ಪಾತ್ರವನ್ನು ಪ್ರಸ್ತಾಪಿಸಿದರು. ನಂತರ, ಹೊಸ ಸಂಸತ್ತಿನ ಕಟ್ಟಡದ ಲೋಕಸಭೆಯಲ್ಲಿ ಪ್ರಜಾಪ್ರಭುತ್ವವನ್ನು ಬಲಪಡಿಸಲು ಮತ್ತು ಮಹಿಳೆಯರ ಸಬಲೀಕರಣಕ್ಕಾಗಿ ‘ನಾರಿ ಶಕ್ತಿ ವಂದನೆ ಅಧಿನಿಯಮ’ ಎಂಬ ಐತಿಹಾಸಿಕ ಮಸೂದೆಯನ್ನು ಘೋಷಿಸಿದರು.

ದೇಶದ ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳಿಗೆ ಈ ಮಸೂದೆಯನ್ನು ಕಾನೂನಾಗಿ ಮಾಡುವ ಬದ್ಧತೆಯ ಬಗ್ಗೆ ಮೋದಿ ಭರವಸೆ ನೀಡಿದರು. ಎಲ್ಲರ ಕಲ್ಯಾಣಕ್ಕಾಗಿ ಸಾಮೂಹಿಕ ಸಂವಾದಗಳು ಮತ್ತು ಚರ್ಚೆಗಳಿಗೆ ಕರೆ ನೀಡಿದ ಅವರು ಸಂಸದೀಯ ಸಂಪ್ರದಾಯಗಳನ್ನು ಅನುಸರಿಸಲು ಸದಸ್ಯರನ್ನು ಒತ್ತಾಯಿಸಿದರು.

ರಾಜ್ಯಸಭೆಯಲ್ಲಿ ಮಾತನಾಡಿದ ಮೋದಿ, ರಾಷ್ಟ್ರ ನಿರ್ಮಾಣದಲ್ಲಿ "ನಾರಿಶಕ್ತಿ"ಯ ಸಂಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳಲು ಮಸೂದೆಯನ್ನು ಸರ್ವಾನುಮತದಿಂದ ಅಂಗೀಕರಿಸುವ ಮಹತ್ವವನ್ನು ಒತ್ತಿ ಹೇಳಿದರು. ಸಂಸತ್ತಿನ ಮೇಲ್ಮನೆಯಾಗಿ ರಾಜ್ಯಸಭೆಯು ಅಡೆತಡೆಯಿಲ್ಲದೆ ಮಸೂದೆಯನ್ನು ಅಂಗೀಕರಿಸುತ್ತದೆ ಎಂದರು.

1996 ರಲ್ಲಿ ಆರಂಭವಾದ ಮಹಿಳೆಯರಿಗೆ ಮೀಸಲಾತಿ ಮಸೂದೆಯ ಸುದೀರ್ಘ ಇತಿಹಾಸವನ್ನು ನೆನಪಿಸಿಕೊಂಡರು. ಇದು ಅಂತಿಮವಾಗಿ ಕಾನೂನಾಗಿ "ನಾರಿಶಕ್ತಿ"ಗೆ ಶಕ್ತಿ ತುಂಬುತ್ತದೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com