ಕೆನಡಾದಲ್ಲಿ ಹಿಂದೂಗಳಿಗೆ ಬೆದರಿಕೆ ಹಾಕಿದ್ದ ಖಲಿಸ್ತಾನಿ ಉಗ್ರ ಪನ್ನುನ್ ಆಸ್ತಿ-ಪಾಸ್ತಿ ವಶಕ್ಕೆ ಪಡೆದ ಸರ್ಕಾರ
ಈ ಹಿಂದೆ ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ ಭಾರತದ ವಿರುದ್ದ ಪ್ರತೀಕಾರ ತೀರಿಸಿಕೊಳ್ಳುವ ಬೆದರಿಕೆ ಹಾಕಿದ್ದ ಖಲಿಸ್ತಾನಿ ಭಯೋತ್ಪಾದಕ ಮತ್ತು ನಿಷೇಧಿತ ಪ್ರತ್ಯೇಕತಾವಾದಿ ಸಂಘಟನೆ ಸಿಖ್ಸ್ ಫಾರ್ ಜಸ್ಟಿಸ್ ಮುಖ್ಯಸ್ಥ ಗುರುಪತ್ವಂತ್ ಸಿಂಗ್ ಪನ್ನುನ್ ವಿರುದ್ಧ ಸರ್ಕಾರ ಕ್ರ್ಯಾಕ್ ಡೌನ್ ಕಾರ್ಯಾಚರಣೆ ಆರಂಭಿಸಿದೆ.
Published: 23rd September 2023 03:34 PM | Last Updated: 23rd September 2023 04:16 PM | A+A A-

ಗುರುಪತ್ವಂತ್ ಸಿಂಗ್ ಪನ್ನುನ್
ನವದೆಹಲಿ: ಈ ಹಿಂದೆ ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ ಭಾರತದ ವಿರುದ್ದ ಪ್ರತೀಕಾರ ತೀರಿಸಿಕೊಳ್ಳುವ ಬೆದರಿಕೆ ಹಾಕಿದ್ದ ಖಲಿಸ್ತಾನಿ ಭಯೋತ್ಪಾದಕ ಮತ್ತು ನಿಷೇಧಿತ ಪ್ರತ್ಯೇಕತಾವಾದಿ ಸಂಘಟನೆ ಸಿಖ್ಸ್ ಫಾರ್ ಜಸ್ಟಿಸ್ ಮುಖ್ಯಸ್ಥ ಗುರುಪತ್ವಂತ್ ಸಿಂಗ್ ಪನ್ನುನ್ ವಿರುದ್ಧ ಸರ್ಕಾರ ಕ್ರ್ಯಾಕ್ ಡೌನ್ ಕಾರ್ಯಾಚರಣೆ ಆರಂಭಿಸಿದೆ.
ಹೌದು.. ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ ಇಂದು ಪಂಜಾಬ್‌ನ ಚಂಡೀಗಢದಲ್ಲಿರುವ ಪನ್ನುನ್ ಮನೆಯನ್ನು ವಶಪಡಿಸಿಕೊಂಡಿದೆ. ಇದಲ್ಲದೆ ಅಮೃತಸರದಲ್ಲಿ ಆತನ ಮಾಲೀಕತ್ವದ ಭೂಮಿಯನ್ನು ಕೂಡ ವಶಪಡಿಸಿಕೊಂಡಿದೆ. ಪನ್ನೂನ್ ಪಂಜಾಬ್‌ನಲ್ಲಿ ಮೂರು ದೇಶದ್ರೋಹ ಸೇರಿದಂತೆ 22 ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾನೆ. ಜಪ್ತಿ ಮಾಡಲಾದ ಆಸ್ತಿಗಳಲ್ಲಿ ಅಮೃತಸರ ಜಿಲ್ಲೆಯ ಹೊರವಲಯದಲ್ಲಿರುವ ಅವರ ಪೂರ್ವಜರ ಗ್ರಾಮವಾದ ಖಾನ್‌ಕೋಟ್‌ನಲ್ಲಿರುವ 46 ಕನಾಲ್ ಕೃಷಿ ಭೂಮಿ ಆಸ್ತಿ ಕೂಡ ಸೇರಿದೆ.
ಮತ್ತೊಂದು ಆಸ್ತಿ, ಚಂಡೀಗಢದ ಸೆಕ್ಟರ್ 15-ಸಿ ನಲ್ಲಿರುವ ಮನೆ ನಂಬರ್ 2033 ಅನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಪನ್ನು ಈಗ ಆಸ್ತಿಯ ಹಕ್ಕನ್ನು ಕಳೆದುಕೊಂಡಿದ್ದಾರೆ ಮತ್ತು ಅದು ಈಗ ಸರ್ಕಾರದ ವಶಕ್ಕೆ ಸೇರಿದೆ. 2020 ರಲ್ಲಿ, ಅವರ ಆಸ್ತಿಯನ್ನು ಲಗತ್ತಿಸಲಾಗಿತ್ತು. ಅಂದರೆ ಅವರು ಆಸ್ತಿಯನ್ನು ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ. ಇದೀಗ ನೇರವಾಗಿ ಸರ್ಕಾರ ಆತನ ಆಸ್ತಿ-ಪಾಸ್ತಿಯವನ್ನು ವಶಕ್ಕೆ ಪಡೆದಿದೆ.
ಇತ್ತೀಚೆಗಷ್ಟೇ ಭಾರತ-ಕೆನಡಾದ ಹಿಂದೂಗಳಿಗೆ ದೇಶ ಬಿಟ್ಟು ಭಾರತಕ್ಕೆ ಮರಳುವಂತೆ ಬೆದರಿಕೆ ಹಾಕಿದ್ದ. ಮತ್ತೊಬ್ಬ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಕುರಿತು ಉಭಯ ದೇಶಗಳ ನಡುವಿನ ಭಾರೀ ರಾಜತಾಂತ್ರಿಕ ಗದ್ದಲದ ನಡುವೆ ವೈರಲ್ ವೀಡಿಯೊವೊಂದರಲ್ಲಿ ಪನ್ನುನ್, "ಇಂಡೋ-ಕೆನಡಿಯನ್ ಹಿಂದೂಗಳೇ, ನೀವು ಕೆನಡಾ ಮತ್ತು ಕೆನಡಾದ ಸಂವಿಧಾನಕ್ಕೆ ನಿಮ್ಮ ನಿಷ್ಠೆಯನ್ನು ತಿರಸ್ಕರಿಸಿದ್ದೀರಿ. ನಿಮ್ಮ ಗಮ್ಯಸ್ಥಾನ ಭಾರತ. ಕೆನಡಾ ಬಿಟ್ಟು ಭಾರತಕ್ಕೆ ಹೋಗಿ. ಖಲಿಸ್ತಾನ್ ಪರ ಸಿಖ್ಖರು ಯಾವಾಗಲೂ ಕೆನಡಾಕ್ಕೆ ನಿಷ್ಠರಾಗಿದ್ದಾರೆ. ಅವರು ಯಾವಾಗಲೂ ಕೆನಡಾದ ಪರವಾಗಿರುತ್ತಾರೆ ಮತ್ತು ಅವರು ಯಾವಾಗಲೂ ಕಾನೂನುಗಳು ಮತ್ತು ಸಂವಿಧಾನವನ್ನು ಎತ್ತಿಹಿಡಿದಿದ್ದಾರೆ" ಎಂದು ಅವರು ಹೇಳಿದರು.
ಇದನ್ನೂ ಓದಿ: ಹದಗೆಟ್ಟ ದ್ವಿಪಕ್ಷೀಯ ಸಂಬಂಧ: ಭಯೋತ್ಪಾದನೆ ಆರೋಪ ಎದುರಿಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಿ: ಕೆನಡಾಗೆ ಭಾರತ ಆಗ್ರಹ
ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಗೆ ಭಾರತೀಯ ಹೈಕಮಿಷನರ್ ಸಂಜಯ್ ಕುಮಾರ್ ವರ್ಮಾ ಹೊಣೆಗಾರರೇ ಎಂಬ ಬಗ್ಗೆ ಮತಚಲಾಯಿಸಲು ಅಕ್ಟೋಬರ್ 29 ರಂದು ವ್ಯಾಂಕೋವರ್‌ನಲ್ಲಿ ಎಲ್ಲಾ ಕೆನಡಾದ ಸಿಖ್ಖರು ಸೇರಬೇಕೆಂದು ಪನ್ನುನ್ ಒತ್ತಾಯಿಸಿದ್ದ.
ಗೃಹ ಸಚಿವಾಲಯವು ಜುಲೈ 2020 ರಲ್ಲಿ ಪನ್ನುನ್ ಅವರನ್ನು ಭಯೋತ್ಪಾದಕ ಎಂದು ಘೋಷಿಸಿತ್ತು ಮತ್ತು ಅವರಿಗೆ ಇಂಟರ್‌ಪೋಲ್ ರೆಡ್ ನೋಟಿಸ್‌ಗೆ ವಿನಂತಿಸಿತ್ತು. ಆದರೆ, ಆತನ ವಿರುದ್ಧದ ಭಯೋತ್ಪಾದನೆ ಆರೋಪದ ಮೇಲೆ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಬೇಕೆಂಬ ಭಾರತದ ಮನವಿಯನ್ನು ಇಂಟರ್ ಪೋಲ್ ಎರಡು ಬಾರಿ ತಿರಸ್ಕರಿಸಿದ್ದು, ಸಾಕಷ್ಟು ಮಾಹಿತಿ ನೀಡಿಲ್ಲ ಎಂದು ಹೇಳಿ ಮನವಿ ತಿರಸ್ಕರಿತ್ತು.