ಇಂಡಿಯಾ ಮೈತ್ರಿಕೂಟ ಸಭೆ(ಸಂಗ್ರಹ ಚಿತ್ರ)
ಇಂಡಿಯಾ ಮೈತ್ರಿಕೂಟ ಸಭೆ(ಸಂಗ್ರಹ ಚಿತ್ರ)

'INDIA' ಪದ ಬಳಕೆ ವಿರುದ್ಧ ಅರ್ಜಿ: ಪ್ರತಿಕ್ರಿಯೆ ನೀಡಲು ಸರ್ಕಾರ- ವಿರೋಧ ಪಕ್ಷಗಳಿಗೆ ದೆಹಲಿ ಹೈಕೋರ್ಟ್ ಕೊನೆಯ ಅವಕಾಶ

ಇಂಡಿಯಾ (ಇಂಡಿಯನ್ ನ್ಯಾಷನಲ್ ಡೆವಲಪ್‌ಮೆಂಟ್ ಇನ್‌ಕ್ಲೂಸಿವ್ ಅಲೈಯನ್ಸ್) ಎಂಬ ಸಂಕ್ಷಿಪ್ತ ರೂಪವನ್ನು ಬಳಸುವುದಕ್ಕೆ ತಡೆ ಕೋರಿ ಸಲ್ಲಿಸಲಾದ ಅರ್ಜಿಗೆ ಪ್ರತಿಕ್ರಿಯೆ ನೀಡಲು ದೆಹಲಿ ಹೈಕೋರ್ಟ್ ಮಂಗಳವಾರ ಕೇಂದ್ರ ಸರ್ಕಾರ ಮತ್ತು ಹಲವಾರು ವಿರೋಧ ಪಕ್ಷಗಳಿಗೆ ಕೊನೆಯ ಅವಕಾಶವನ್ನು ನೀಡಿದೆ.
Published on

ನವದೆಹಲಿ: ಇಂಡಿಯಾ (ಇಂಡಿಯನ್ ನ್ಯಾಷನಲ್ ಡೆವಲಪ್‌ಮೆಂಟ್ ಇನ್‌ಕ್ಲೂಸಿವ್ ಅಲೈಯನ್ಸ್) ಎಂಬ ಸಂಕ್ಷಿಪ್ತ ರೂಪವನ್ನು ಬಳಸುವುದಕ್ಕೆ ತಡೆ ಕೋರಿ ಸಲ್ಲಿಸಲಾದ ಅರ್ಜಿಗೆ ಪ್ರತಿಕ್ರಿಯೆ ನೀಡಲು ದೆಹಲಿ ಹೈಕೋರ್ಟ್ ಮಂಗಳವಾರ ಕೇಂದ್ರ ಸರ್ಕಾರ ಮತ್ತು ಹಲವಾರು ವಿರೋಧ ಪಕ್ಷಗಳಿಗೆ ಕೊನೆಯ ಅವಕಾಶವನ್ನು ನೀಡಿದೆ.

ಇಂಡಿಯಾ ಮೈತ್ರಿಕೂಟ ಎಂದು ಸಂಕ್ಷಿಪ್ತ ರೂಪವನ್ನು ಬಳಸಿಕೊಂಡು ಪಕ್ಷಗಳು ದೇಶದ ಹೆಸರಿನಲ್ಲಿ ಅನಗತ್ಯ ಲಾಭ ಮಾಡಿಕೊಳ್ಳುತ್ತಿವೆ ಎಂಬ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗೆ ಒಂದು ವಾರದೊಳಗೆ ಉತ್ತರ ನೀಡಬೇಕೆಂದು ದೆಹಲಿ ಹೈಕೋರ್ಟ್ ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ಮನ್ಮೀತ್ ಪಿಎಸ್ ಅರೋರಾ ಅವರನ್ನೊಳಗೊಂಡ ನ್ಯಾಯಪೀಠ ಆದೇಶ ನೀಡಿದೆ.

ಅರ್ಜಿ ವಿಚಾರಣೆಯ ದಿನಾಂಕವನ್ನು ಮುಂದೂಡಲು ನಿರಾಕರಿಸಿದ ಹೈಕೋರ್ಟ್, ಏಪ್ರಿಲ್ 10 ರಂದು ಅರ್ಜಿಯ ವಿಚಾರಣೆ ಮತ್ತು ವಿಲೇವಾರಿ ಮಾಡಲು ಪ್ರಯತ್ನಿಸಲಾಗುವುದು. ಪ್ರತಿವಾದಿಗಳಿಗೆ ಒಂದು ವಾರದೊಳಗೆ ತಮ್ಮ ಉತ್ತರಗಳನ್ನು ಸಲ್ಲಿಸಲು ಕೊನೆಯ ಮತ್ತು ಅಂತಿಮ ಅವಕಾಶವನ್ನು ನೀಡಲಾಗಿದೆ ಎಂದು ನ್ಯಾಯಪೀಠ ಹೇಳಿದೆ.

2023ರ ಆಗಸ್ಟ್‌ನಿಂದ ಅರ್ಜಿ ಬಾಕಿ ಉಳಿದಿದ್ದು, ಅರ್ಜಿಗಳು ಇನ್ನೂ ಪೂರ್ಣಗೊಂಡಿಲ್ಲ ಮತ್ತು ಚುನಾವಣಾ ಆಯೋಗವು ಚುನಾವಣಾ ವೇಳಾಪಟ್ಟಿಯನ್ನು ಈಗಾಗಲೇ ಪ್ರಕಟಿಸಿರುವ ಹಿನ್ನೆಲೆಯಲ್ಲಿ ಈ ಪ್ರಕರಣದ ಶೀಘ್ರ ವಿಚಾರಣೆಯನ್ನು ಕೋರಿ ಅರ್ಜಿದಾರ ಗಿರೀಶ್ ಭಾರದ್ವಾಜ್ ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ.

ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ವೈಭವ್ ಸಿಂಗ್, ಕೇಂದ್ರ ಸರ್ಕಾರ ಮತ್ತು ವಿರೋಧ ಪಕ್ಷಗಳಿಗೆ ಈಗಾಗಲೇ ಎಂಟು ಅವಕಾಶಗಳನ್ನು ನೀಡಲಾಗಿದೆ ಆದರೆ ಅವರು ಇನ್ನೂ ತಮ್ಮ ಉತ್ತರಗಳನ್ನು ಸಲ್ಲಿಸಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಚುನಾವಣಾ ಆಯೋಗ ಈಗಾಗಲೇ ತನ್ನ ಉತ್ತರವನ್ನು ಸಲ್ಲಿಸಿದೆ ಎಂದು ವಕೀಲ ಸಿದ್ದಾಂತ್ ಕುಮಾರ್ ನ್ಯಾಯಾಲಯಕ್ಕೆ ತಿಳಿಸಿದರು.

ನವೆಂಬರ್ 2023 ರಲ್ಲಿ, ಕೇಂದ್ರ ಸರ್ಕಾರದ ವಕೀಲರು ತಮ್ಮ ಉತ್ತರವನ್ನು ಸಲ್ಲಿಸಲು ಒಂದು ವಾರ ಅಥವಾ 10 ದಿನಗಳ ಹೆಚ್ಚಿನ ಸಮಯವನ್ನು ನೀಡುವಂತೆ ನ್ಯಾಯಾಲಯವನ್ನು ಒತ್ತಾಯಿಸಿದರು.

ಇಂಡಿಯಾ ಮೈತ್ರಿಕೂಟ ಸಭೆ(ಸಂಗ್ರಹ ಚಿತ್ರ)
INDIA ನಿಮಗೆ ತಕ್ಕ ಪ್ರತ್ಯುತ್ತರ ನೀಡುತ್ತೆ: ಕೇಜ್ರಿವಾಲ್ ಬಂಧನ ಹಿನ್ನೆಲೆ ಬಿಜೆಪಿ ವಿರುದ್ಧ ಕೆಂಡ ಕಾರಿದ ಇಂಡಿಯಾ ಮೈತ್ರಿಕೂಟ!

ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಡಿಎಂಕೆ ಮತ್ತು ಇತರ ಒಂಬತ್ತು ರಾಜಕೀಯ ಪಕ್ಷಗಳನ್ನು ಪ್ರತಿನಿಧಿಸಿರುವ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ, ಅರ್ಜಿಯ ವಿರುದ್ಧ "ಪ್ರಾಥಮಿಕ ಆಕ್ಷೇಪಣೆಗಳು" ಇವೆ ಮತ್ತು ಸುಪ್ರೀಂ ಕೋರ್ಟ್ ಈಗಾಗಲೇ ಸಮಸ್ಯೆಯನ್ನು ನಿಭಾಯಿಸಿದೆ ಎಂದು ಹೇಳಿದರು.

ಅರ್ಜಿದಾರರು ಈ ಹಿಂದೆ ಹೈಕೋರ್ಟ್‌ಗೆ ಮೊರೆ ಹೋಗಿ 26 ರಾಜಕೀಯ ಪಕ್ಷಗಳು ಇಂಡಿಯಾ ಎಂಬ ಸಂಕ್ಷಿಪ್ತ ರೂಪದ ಬಳಕೆಯನ್ನು ತಡೆಹಿಡಿಯುವ ಮಧ್ಯಂತರ ಆದೇಶವನ್ನು ಕೋರಿದ್ದರು. ಪ್ರತಿವಾದಿ ರಾಜಕೀಯ ಮೈತ್ರಿಯಿಂದ ಇಂಡಿಯಾ ಎಂಬ ಸಂಕ್ಷಿಪ್ತ ರೂಪದೊಂದಿಗೆ ರಾಷ್ಟ್ರಧ್ವಜವನ್ನು ಬಳಸುವುದನ್ನು ನಿಷೇಧಿಸಬೇಕು ಎಂದು ಕೋರಿದ್ದರು.

ಕಳೆದ ವರ್ಷ ಆಗಸ್ಟ್‌ನಲ್ಲಿ ಅರ್ಜಿಯ ಕುರಿತು ನ್ಯಾಯಾಲಯ ನೋಟಿಸ್ ನೀಡಿತ್ತು. ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಡಿಎಂಕೆ, ಆಮ್ ಆದ್ಮಿ ಪಕ್ಷ, ಜನತಾ ದಳ (ಸಂಯುಕ್ತ), ರಾಷ್ಟ್ರೀಯ ಜನತಾ ದಳ, ಜಾರ್ಖಂಡ್ ಮುಕ್ತಿ ಮೋರ್ಚಾ, ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ (ಶರದ್ ಪವಾರ್), ಶಿವಸೇನೆ (ಯುಬಿಟಿ), ಸಮಾಜವಾದಿ, ರಾಷ್ಟ್ರೀಯ ಲೋಕದಳ, ಅಪ್ನಾ ದಳ (ಕಾಮೆರವಾಡಿ) ಸೇರಿದಂತೆ ರಾಜಕೀಯ ಪಕ್ಷಗಳನ್ನು ಈ ಪ್ರಕರಣದಲ್ಲಿ ಪ್ರತಿವಾದಿಗಳಾಗಿ ಮಾಡಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com