ಕೇಜ್ರಿವಾಲ್ ಸಂದೇಶ ಓದಿದ ಸುನೀತಾ ಕೇಜ್ರಿವಾಲ್; ಪ್ರತಿದಿನ ತಮ್ಮ ಕ್ಷೇತ್ರಗಳಿಗೆ ಭೇಟಿ ನೀಡುವಂತೆ ಎಎಪಿ ಶಾಸಕರಿಗೆ ಸಲಹೆ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತಿಹಾರ್ ಜೈಲಿನಿಂದ ಸಂದೇಶವನ್ನು ಕಳುಹಿಸಿದ್ದು, ಎಲ್ಲಾ ಆಮ್ ಆದ್ಮಿ ಪಕ್ಷದ ಶಾಸಕರು ಪ್ರತಿದಿನ ತಮ್ಮ ಕ್ಷೇತ್ರಗಳಿಗೆ ಭೇಟಿ ನೀಡಿ ಜನರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದಿದ್ದಾರೆ.
ಸುನೀತಾ ಕೇಜ್ರಿವಾಲ್
ಸುನೀತಾ ಕೇಜ್ರಿವಾಲ್

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತಿಹಾರ್ ಜೈಲಿನಿಂದ ಸಂದೇಶವನ್ನು ಕಳುಹಿಸಿದ್ದು, ಎಲ್ಲಾ ಆಮ್ ಆದ್ಮಿ ಪಕ್ಷದ ಶಾಸಕರು ಪ್ರತಿದಿನ ತಮ್ಮ ಕ್ಷೇತ್ರಗಳಿಗೆ ಭೇಟಿ ನೀಡಿ ಜನರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದಿದ್ದಾರೆ.

ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಗುರುವಾರ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದು, ಅರವಿಂದ್ ಕೇಜ್ರಿವಾಲ್ ಅವರು ತಾವು ಜೈಲಿನಲ್ಲಿದ್ದರೂ ಕೂಡ, ತಮ್ಮ ಕುಟುಂಬವಾಗಿರುವ ದೆಹಲಿಯ ಎರಡು ಕೋಟಿ ಜನರು ಯಾವುದೇ ಸಮಸ್ಯೆಗಳನ್ನು ಎದುರಿಸಬಾರದು ಎಂಬ ಸಂದೇಶವನ್ನು ನೀಡಿರುವುದಾಗಿ ತಿಳಿಸಿದ್ದಾರೆ.

ನಾನು ಜೈಲಿನಲ್ಲಿದ್ದೇನೆ ಎಂಬ ಕಾರಣಕ್ಕೆ ದೆಹಲಿಯ ಜನರು ಯಾವುದೇ ರೀತಿಯಲ್ಲಿ ತೊಂದರೆ ಅನುಭವಿಸಬಾರದು. ಪ್ರತಿಯೊಬ್ಬ ಶಾಸಕರು ಪ್ರತಿದಿನ ಅವರ ಕ್ಷೇತ್ರಗಳಿಗೆ ಭೇಟಿ ನೀಡಬೇಕು ಮತ್ತು ಜನರ ಸಮಸ್ಯೆಗಳನ್ನು ಚರ್ಚಿಸಬೇಕು ಮತ್ತು ಪರಿಹರಿಸಬೇಕು ಎಂದು ಎಲ್ಲಾ ಶಾಸಕರಿಗೆ ಸಂದೇಶ ನೀಡಿದ್ದಾರೆ.

ಸರ್ಕಾರಿ ಇಲಾಖೆಗಳ ಕೆಲಸ ಮಾತ್ರವಲ್ಲದೆ ದೆಹಲಿ ನಿವಾಸಿಗಳ ಸಮಸ್ಯೆಗಳನ್ನು ಪರಿಹರಿಸಿ. ದೆಹಲಿಯ 2 ಕೋಟಿ ನಿವಾಸಿಗಳು ನನ್ನ ಕುಟುಂಬ. ಅವರು ಯಾವುದೇ ಕಾರಣಕ್ಕೂ ದುಃಖ ಅಥವಾ ತೊಂದರೆಗೆ ಒಳಗಾಗಬಾರದು. ದೇವರು ಎಲ್ಲರಿಗೂ ಆಶೀರ್ವಾದ ಮಾಡಲಿ, ಜೈ ಹಿಂದ್ ಎಂದು ಸುನೀತಾ ಕೇಜ್ರಿವಾಲ್ ದೆಹಲಿ ಮುಖ್ಯಮಂತ್ರಿಯ ಸಂದೇಶವನ್ನು ಓದಿದರು.

ಸುನೀತಾ ಕೇಜ್ರಿವಾಲ್
ಭಾರತ ಮಾತೆ ನೋವಿನಲ್ಲಿದ್ದಾಳೆ, ಈ ದೌರ್ಜನ್ಯ ಹೆಚ್ಚುದಿನ ನಡೆಯುವುದಿಲ್ಲ: ಕೇಜ್ರಿವಾಲ್ ಸಂದೇಶ ಓದಿದ ಸುನೀತಾ ಕೇಜ್ರಿವಾಲ್

ತಮ್ಮ ಸರ್ಕಾರದ ಈಗ ರದ್ದುಪಡಿಸಿದ ಅಬಕಾರಿ ನೀತಿಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ಅರವಿಂದ ಕೇಜ್ರಿವಾಲ್ ಅವರು ಏಪ್ರಿಲ್ 15ರವರೆಗೆ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com