ಮಮತಾ ಬ್ಯಾನರ್ಜಿ ಜತೆಗಿನ ನನ್ನ ಸಂಬಂಧ ಹಾಳು ಮಾಡಲು ಬಂಗಾಳ ಶಿಕ್ಷಣ ಸಚಿವ ಯತ್ನ: ರಾಜ್ಯಪಾಲ ಆನಂದ ಬೋಸ್

ಪಶ್ಚಿಮ ಬಂಗಾಳ ಶಿಕ್ಷಣ ಸಚಿವ ಬ್ರಾತ್ಯ ಬಸು ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ನನ್ನ ಸಂಬಂಧ ಹಾಳು ಮಾಡಲು ಯತ್ನಿಸುತ್ತಿದ್ದಾರೆ ಎಂದು ಪಶ್ಚಿಮ ಬಂಗಾಳ ರಾಜ್ಯಪಾಲ ಆನಂದ ಬೋಸ್ ಅವರು ಆರೋಪಿಸಿದ್ದಾರೆ.
ಬಂಗಾಳ ರಾಜ್ಯಪಾಲ- ಮಮತಾ ಬ್ಯಾನರ್ಜಿ
ಬಂಗಾಳ ರಾಜ್ಯಪಾಲ- ಮಮತಾ ಬ್ಯಾನರ್ಜಿ
Updated on: 

ಕೋಲ್ಕತಾ: ಸರ್ಕಾರಿ ಸ್ವಾಮ್ಯದ ವಿಶ್ವವಿದ್ಯಾಲಯಗಳ ಕಾರ್ಯನಿರ್ವಹಣೆಗೆ ಸಂಬಂಧಿಸಿದ ಗೊಂದಲದ ನಡುವೆ ಪಶ್ಚಿಮ ಬಂಗಾಳದ ಶಿಕ್ಷಣ ಸಚಿವ ಬ್ರಾತ್ಯ ಬಸು ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ನನ್ನ ಸಂಬಂಧ ಹಾಳು ಮಾಡಲು ಯತ್ನಿಸುತ್ತಿದ್ದಾರೆ ಎಂದು ಪಶ್ಚಿಮ ಬಂಗಾಳ ರಾಜ್ಯಪಾಲ ಆನಂದ ಬೋಸ್ ಅವರು ಗುರುವಾರ ಆರೋಪಿಸಿದ್ದಾರೆ.

ಸಚಿವ ಬ್ರತ್ಯಾ ಬಸು ಅವರು ರಾಜ್ಯಪಾಲರನ್ನು ಹುಚ್ಚ ಮತ್ತು ಮತ್ತು ಆಲ್ಝೈಮರ್‌ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಆನಂದ್ ಬೋಸ್ ಅವರು, ಬಸು ಅವರ ಆರೋಪಗಳು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಂದಿಗಿನ ಸಂಬಂಧವನ್ನು ಹಾಳುಮಾಡುವ ಪ್ರಯತ್ನವಾಗಿದೆ ಎಂದು ತಿರುಗೇಟು ನೀಡಿದ್ದರು.

"ಸಚಿವ ಬ್ರತ್ಯಾ ಬಸು ಅವರು ರಾಜ್ಯಪಾಲರನ್ನು ಹುಚ್ಚರು ಮತ್ತು ಆಲ್ಝೈಮರ್‌ನಿಂದ ಬಳಲುತ್ತಿದ್ದಾರೆ ಎಂದು ಹೇಳಿದ್ದಾರೆ. ಆದರೆ ಇದು ಮುಖ್ಯಮಂತ್ರಿಗಳು ಬಯಸಿದ ಸಮಯದಲ್ಲಿ, ಖಾಲಿ ಇರುವ ವಿಶ್ವವಿದ್ಯಾಲಯಗಳ ಹಂಗಾಮಿ ವಿಸಿಗಳಾಗಿ ನೇಮಕ ಮಾಡಲು ಸಚಿವರು ಸೂಚಿಸಿದ ಎಲ್ಲಾ 4 ಹೆಸರುಗಳನ್ನು ರಾಜ್ಯಪಾಲರು ಒಪ್ಪಿಕೊಂಡಿದ್ದಾರೆ" ಎಂದು ರಾಜಭವನ X ನಲ್ಲಿ ಪೋಸ್ಟ್ ಮಾಡಿದೆ.

ಬಂಗಾಳ ರಾಜ್ಯಪಾಲ- ಮಮತಾ ಬ್ಯಾನರ್ಜಿ
ಸೂಕ್ಷ್ಮ ಪ್ರದೇಶಗಳಿಗೆ ಪಶ್ಚಿಮ ಬಂಗಾಳ ರಾಜ್ಯಪಾಲ ಆನಂದ್ ಬೋಸ್ ಭೇಟಿ; ಶಾಂತಿ, ಸೌಹಾರ್ದತೆಗೆ ಕರೆ

"ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳ ನಡುವಿನ ಸಂಬಂಧವನ್ನು ಸಚಿವರು ಹಾಳು ಮಾಡುತ್ತಿದ್ದಾರೆ ಎಂದು ಆನಂದ್ ಬೋಸ್" ಎಂದು ಪೋಸ್ಟ್ ನಲ್ಲಿ ತಿಳಿಸಲಾಗಿದೆ.

ರಾಜ್ಯ ವಿಶ್ವವಿದ್ಯಾನಿಲಯಗಳ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ರಾಜ್ಯಪಾಲರು "ತರ್ಕಬದ್ಧವಲ್ಲದ ಮತ್ತು ಅಸಮಂಜಸ ಕ್ರಮಗಳನ್ನು" ತೆಗೆದುಕೊಳ್ಳುತ್ತಿದ್ದಾರೆ ಎಂದು ಬಸು ಆರೋಪಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com