ಸ್ಮೃತಿ ಇರಾನಿ ವಿರುದ್ಧ ಅಮೇಥಿಯಿಂದ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಸ್ಪರ್ಧೆ?

ಸೋನಿಯಗಾಂಧಿ ಅಳಿಯ, ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.
ರಾಬರ್ಟ್ ವಾದ್ರಾ
ರಾಬರ್ಟ್ ವಾದ್ರಾ

ನವದೆಹಲಿ: ಸೋನಿಯಗಾಂಧಿ ಅಳಿಯ, ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಲೋಕಸಭೆ ಚುನಾವಣೆ ಬಗ್ಗೆ ಮಾತನಾಡುತ್ತಾ ಅವರು ಪರೋಕ್ಷವಾಗಿ ಅಮೇಥಿಯಲ್ಲಿ ಸ್ಪರ್ಧಿಸುವ ಬಯಕೆ ವ್ಯಕ್ತಪಡಿಸಿದ್ದಾರೆ.

ತಾವು ಸಂಸದರಾಗಲು ಬಯಸಿದರೆ ಅಮೇಠಿ ಕ್ಷೇತ್ರವನ್ನು ಪ್ರತಿನಿಧಿಸುವಂತೆ ಕ್ಷೇತ್ರದ ಜನ ಬಯಸುತ್ತಿದ್ದಾರೆ ಎಂದು ರಾಜಕೀಯ ಪ್ರವೇಶದ ಸುಳಿವು ನೀಡಿದ್ದಾರೆ ರಾಬರ್ಟ್ ವಾದ್ರಾ. ರಾಯ್ ಬರೇಲಿ, ಅಮೇಠಿ ಮತ್ತು ಸುಲ್ತಾನ್‌ಪುರ ಕ್ಷೇತ್ರಗಳ ಅಭಿವೃದ್ಧಿಗೆ ಗಾಂಧಿ ಕುಟುಂಬ ಶ್ರಮಿಸಿದೆ. ಹಾಲಿ ಸಂಸದರಿಂದ ಅಮೇಥಿ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆಕೆಯನ್ನು(ಸ್ಮೃತಿ ಇರಾನಿ) ಆಯ್ಕೆ ಮಾಡಿ ನಾವು ತಪ್ಪು ಮಾಡಿದೆವು ಎಂದು ಪರಿತಪಿಸುತ್ತಿದ್ದಾರೆ ಎಂದು ವಾದ್ರಾ ಎಎನ್‌ಐಗೆ ಪ್ರತಿಕ್ರಿಯಿಸಿದ್ದಾರೆ.

ಪ್ರಿಯಾಂಕಾ ಗಾಂಧಿ ಮೊದಲು ಸಂಸದರಾಗಬೇಕೆಂದು ಬಯಸುತ್ತೇನೆ. ಬಳಿಕ, ನಾನೂ ರಾಜಕೀಯಕ್ಕೆ ಬರಲು ಇಚ್ಛಿಸುತ್ತೇನೆ. ಜನರು ಮತ್ತು ವಿವಿಧ ಪಕ್ಷಗಳ ಸಂಸದರ ಜೊತೆ ಚರ್ಚೆ ನಡೆಸಿರುವೆ. ಅವರೆಲ್ಲ ತಮ್ಮ ಪಕ್ಷವನ್ನು ಪ್ರತಿನಿಧಿಸುವಂತೆ ಒತ್ತಾಯಿಸಿದ್ದಾರೆ. ರಾಜಕೀಯಕ್ಕೆ ಬರಲು ವಿಳಂಬವೇಕೆ? ಎಂದು ಕೇಳುತ್ತಿದ್ದಾರೆ. ಅವರು ನನಗೆ ಬೆಂಬಲ ನೀಡುವ ಭರವಸೆ ಸಹ ಕೊಟ್ಟಿದ್ದಾರೆ. ದೇಶದ ಬೇರೆ ಬೇರೆ ಪಕ್ಷಗಳ ನಾಯಕರು ನನ್ನನ್ನು ಆಹ್ವಾನಿಸಿದ್ದಾರೆ. ಪಕ್ಷಬೇಧವಿಲ್ಲದೆ ಹಲವು ಪಕ್ಷಗಳಲ್ಲಿ ನನಗೆ ಗೆಳೆಯರಿದ್ದಾರೆ ಎಂದೂ ಅವರು ಹೇಳಿದ್ದಾರೆ.

ಐದು ಅವಧಿಗೆ ರಾಯ್‌ಬರೇಲಿ ಪ್ರತಿನಿಧಿಸಿದ್ದ ಸೋನಿಯಾ ಗಾಂಧಿ ಚುನಾವಣಾ ರಾಜಕೀಯ ಬಿಟ್ಟು ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಕಳೆದ ಬಾರಿ ಅಮೇಥಿಯಲ್ಲಿ ಸೋತ ರಾಹುಲ್ ಗಾಂಧಿ ವಯನಾಡಿನಲ್ಲಿ ಭರ್ಜರಿಯಾಗಿ ಗೆದ್ದು ಬೀಗಿದ್ದರು. ಸದ್ಯ ವಯನಾಡಿನಿಂದ ಸ್ಪರ್ಧಿಸಿರುವ ಅವರು ಅಮೇಥಿಯಿಂದ (Amethi) ಸ್ಪರ್ಧಿಸುವ ಬಗ್ಗೆ ಯಾವುದೇ ಸುಳಿವು ನೀಡಿಲ್ಲ. ಹೀಗಾಗೀ ಗಾಂಧಿ ಕುಟುಂಬದ ಭದ್ರಕೋಟೆ ಎನಿಸಿಕೊಂಡಿರುವ ರಾಯ್‌ಬರೇಲಿ ಮತ್ತು ಅಮೇಥಿಯಲ್ಲಿ ಅಭ್ಯರ್ಥಿ ಯಾರು ಎನ್ನುವ ಚರ್ಚೆ ಶುರುವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com