ಆಂಧ್ರ ಪ್ರದೇಶ: YSRCP ಶಾಸಕ ಎಂಎಸ್ ಬಾಬು ಕಾಂಗ್ರೆಸ್‌ ಸೇರ್ಪಡೆ

ಪುತಲಪಟ್ಟು ವೈಎಸ್‌ಆರ್‌ಸಿಪಿ ಶಾಸಕ ಎಂಎಸ್ ಬಾಬು ಶನಿವಾರ ಆಡಳಿತಾರೂಢ ಪಕ್ಷ ತೊರೆದು ಆಂಧ್ರಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ವೈಎಸ್ ಶರ್ಮಿಳಾ ಅವರ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆ.
ಕಾಂಗ್ರೆಸ್‌
ಕಾಂಗ್ರೆಸ್‌

ಕಡಪ: ಪುತಲಪಟ್ಟು ವೈಎಸ್‌ಆರ್‌ಸಿಪಿ ಶಾಸಕ ಎಂಎಸ್ ಬಾಬು ಶನಿವಾರ ಆಡಳಿತಾರೂಢ ಪಕ್ಷ ತೊರೆದು ಆಂಧ್ರಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ವೈಎಸ್ ಶರ್ಮಿಳಾ ಅವರ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾದರು.

2019 ರ ಚುನಾವಣೆಯಲ್ಲಿ ವೈಎಸ್‌ಆರ್‌ಸಿಪಿ ಟಿಕೆಟ್‌ನಲ್ಲಿ ಗೆದ್ದಿದ್ದ ಬಾಬು ಅವರಿಗೆ 2024 ರ ಚುನಾವಣೆಗೆ ಟಿಕೆಟ್ ನಿರಾಕರಿಸಲಾಗಿತ್ತು. ಎಸ್‌ಸಿ-ಮೀಸಲು ಕ್ಷೇತ್ರ ಪುತಲಪಟ್ಟುವಿನಲ್ಲಿ ವೈಎಸ್‌ಆರ್‌ಸಿಪಿ ಎಂ ಸುನೀಲ್ ಕುಮಾರ್‌ ಅವರನ್ನು ಕಣಕ್ಕಿಳಿಸಿದೆ.

ಇದೇ ವೇಳೆ ಶರ್ಮಿಳಾ ಅವರು ಕಡಪ ಜಿಲ್ಲೆಯಲ್ಲಿ ಚುನಾವಣಾ ಪ್ರವಾಸ ಮುಂದುವರೆಸಿದ್ದು, ಇಂದು ಕಡಪ ಪಟ್ಟಣದ ಅಮೀನ್ ಪೀರ್ ದರ್ಗಾಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಕಾಂಗ್ರೆಸ್‌
ಲೋಕಸಭೆ ಚುನಾವಣೆ: 17 ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ, ಕಡಪದಿಂದ ವೈಎಸ್ ಶರ್ಮಿಳಾ ಕಣಕ್ಕೆ

ಧರ್ಮದ ಹೆಸರಿನಲ್ಲಿ ಘರ್ಷಣೆ ಎಬ್ಬಿಸುವ ಬಿಜೆಪಿ ವಿರುದ್ಧ ವೈಎಸ್‌ಆರ್ (ವೈಎಸ್ ರಾಜಶೇಖರ್ ರೆಡ್ಡಿ) ಸದಾ ವಾಗ್ದಾಳಿ ನಡೆಸುತ್ತಿದ್ದರು. ಆದರೆ ವೈಎಸ್‌ಆರ್ ಪುತ್ರ ಜಗನ್ ಮೋಹನ್ ರೆಡ್ಡಿ ಬಿಜೆಪಿಯ ಗುಲಾಮರಾಗಿದ್ದಾರೆ ಎಂದು ಶರ್ಮಿಳಾ ವಾಗ್ದಾಳಿ ನಡೆಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com