ಕಾಶಿ ವಿಶ್ವನಾಥ ದೇವಸ್ಥಾನ ಟ್ರಸ್ಟ್ ಫೇಸ್‌ಬುಕ್ ಪೇಜ್ ಹ್ಯಾಕ್; ಸೈಬರ್ ಸೆಲ್‌ಗೆ ದೂರು

ಕಾಶಿ ವಿಶ್ವನಾಥ ದೇವಸ್ಥಾನ ಟ್ರಸ್ಟ್‌ನ ಫೇಸ್‌ಬುಕ್ ಪುಟವನ್ನು ಶನಿವಾರ ದುಷ್ಕರ್ಮಿಗಳು ಹ್ಯಾಕ್ ಮಾಡಿದ್ದಾರೆ. ಬಳಿಕ ಟ್ರಸ್ಟ್ ಪುಟವನ್ನು ಮರಳಿ ಪಡೆದಿದೆ ಎಂದು ತಿಳಿದುಬಂದಿದೆ. ವಾರಣಾಸಿ ಪೊಲೀಸರ ಸೈಬರ್ ಸೆಲ್‌ಗೆ ದೂರು ನೀಡಲಾಗಿದೆ.
ವಿಶ್ವಭೂಷಣ ಮಿಶ್ರಾ
ವಿಶ್ವಭೂಷಣ ಮಿಶ್ರಾ
Updated on

ವಾರಣಾಸಿ: ಕಾಶಿ ವಿಶ್ವನಾಥ ದೇವಸ್ಥಾನ ಟ್ರಸ್ಟ್‌ನ ಫೇಸ್‌ಬುಕ್ ಪುಟವನ್ನು ಶನಿವಾರ ದುಷ್ಕರ್ಮಿಗಳು ಹ್ಯಾಕ್ ಮಾಡಿದ್ದಾರೆ. ಬಳಿಕ ಟ್ರಸ್ಟ್ ಪುಟವನ್ನು ಮರಳಿ ಪಡೆದಿದೆ ಎಂದು ತಿಳಿದುಬಂದಿದೆ.

ಶನಿವಾರ ಬೆಳಗ್ಗೆ 11 ಗಂಟೆಗೆ ಕಾಶಿ ವಿಶ್ವನಾಥ ದೇವಸ್ಥಾನ ಟ್ರಸ್ಟ್‌ನ ಫೇಸ್‌ಬುಕ್ ಪೇಜ್ ಅನ್ನು ಯಾರೋ ದುಷ್ಕರ್ಮಿಗಳು ಹ್ಯಾಕ್ ಮಾಡಿದ್ದಾರೆ. ಆದಾಗ್ಯೂ, ಫೇಸ್ಬುಕ್ ಅಧಿಕಾರಿಗಳ ಸಹಾಯದಿಂದ, ಪುಟವನ್ನು ಹಿಂಪಡೆಯಲಾಗಿದೆ ಎಂದು ಟ್ರಸ್ಟ್ ಸಿಇಒ ವಿಶ್ವಭೂಷಣ ಮಿಶ್ರಾ ಹೇಳಿದ್ದಾರೆ.

'ನಾವು ಫೇಸ್‌ಬುಕ್ ಆಡಳಿತದೊಂದಿಗೆ ಸಮಾಲೋಚಿಸಿ ಮತ್ತೆ ಫೇಸ್‌ಬುಕ್ ಪುಟದ ನಿಯಂತ್ರಣವನ್ನು ಪಡೆದುಕೊಂಡಿದ್ದೇವೆ. ಶ್ರೀ ಕಾಶಿ ವಿಶ್ವನಾಥ ದೇವಸ್ಥಾನ ಟ್ರಸ್ಟ್‌ನ ಎಲ್ಲ ಸಾಮಾಜಿಕ ಮಾಧ್ಯಮ ಪುಟಗಳು ಮತ್ತು ವೆಬ್‌ಸೈಟ್‌ಗಳ ಸೈಬರ್ ಭದ್ರತೆಯನ್ನು ಬಲಪಡಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಆದ್ದರಿಂದ ಇಂತಹ ಘಟನೆಗಳು ಮತ್ತೆ ಸಂಭವಿಸುವುದಿಲ್ಲ' ಎಂದು ಮಿಶ್ರಾ ಹೇಳಿದರು.

ದೇವಸ್ಥಾನದ ಟ್ರಸ್ಟ್ ತೀವ್ರ ವಿಷಾದ ವ್ಯಕ್ತಪಡಿಸಿದ್ದು, ಹ್ಯಾಕಿಂಗ್‌ನಿಂದಾಗಿ ಫೇಸ್‌ಬುಕ್ ಪುಟದ ಸಂದರ್ಶಕರಿಗೆ ಉಂಟಾದ ಅನಾನುಕೂಲತೆಗೆ ತೀವ್ರ ವಿಷಾದವಿದೆ. ವಾರಣಾಸಿ ಪೊಲೀಸರ ಸೈಬರ್ ಸೆಲ್‌ಗೆ ದೂರು ನೀಡಲಾಗಿದೆ ಎಂದು ಮಿಶ್ರಾ ಹೇಳಿದ್ದಾರೆ.

ವಿಶ್ವಭೂಷಣ ಮಿಶ್ರಾ
Delhi police Websites hacked: ದೆಹಲಿ ಪೊಲೀಸ್ ವೆಬ್ ಸೈಟ್ ಗಳನ್ನೇ ಹ್ಯಾಕ್ ಮಾಡಿದ 'ಖತರ್ನಾಕ್'ಗಳು!

ಇದಕ್ಕೂ ಮುನ್ನ ಮಾರ್ಚ್ 9 ರಂದು ಪ್ರಧಾನಿ ನರೇಂದ್ರ ಮೋದಿ ವಾರಣಾಸಿಯಲ್ಲಿ ಬೃಹತ್ ರೋಡ್ ಶೋ ನಡೆಸಿದ್ದರು. ರೋಡ್‌ಶೋ ನಂತರ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಪ್ರಧಾನಿ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com