ಛತ್ತೀಸ್ ಗಢ: ನಕ್ಸಲರ ಅಡಗುದಾಣ ಪತ್ತೆ, ಅಪಾರ ಪ್ರಮಾಣದ ಸ್ಫೋಟಕ, ಶಸ್ತ್ರಾಸ್ತ್ರ ವಶಕ್ಕೆ!

ಛತ್ತೀಸ್ ಘಡದಲ್ಲಿ ಮತ್ತೊಂದು ನಕ್ಸಲ್ ಅಡಗುದಾಣವನ್ನು ಭದ್ರತಾ ಪಡೆಗಳು ಭೇದಿಸಿದ್ದು, ಕ್ಸಲರು ಅಡಗಿಸಿಟ್ಟಿದ್ದ ಭಾರಿ ಪ್ರಮಾಣದ ಸ್ಫೋಟಕ, ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ.
ನಕ್ಸಲರ ಅಡಗುದಾಣ ಪತ್ತೆ
ನಕ್ಸಲರ ಅಡಗುದಾಣ ಪತ್ತೆANI

ರಾಯ್ ಪುರ: ಛತ್ತೀಸ್ ಘಡದಲ್ಲಿ ಮತ್ತೊಂದು ನಕ್ಸಲ್ ಅಡಗುದಾಣವನ್ನು ಭದ್ರತಾ ಪಡೆಗಳು ಭೇದಿಸಿದ್ದು, ಕ್ಸಲರು ಅಡಗಿಸಿಟ್ಟಿದ್ದ ಭಾರಿ ಪ್ರಮಾಣದ ಸ್ಫೋಟಕ, ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ.

ಛತ್ತೀಸಗಢದ ಸುಖ್ಮಾ ಜಿಲ್ಲೆಯ ಎರಡು ಕಡೆಗಳಲ್ಲಿ ನಕ್ಸಲ ಅಡಗುದಾಣಗಳನ್ನು ಭದ್ರತಾ ಪಡೆಗಳು ಪತ್ತೆ ಮಾಡಿದ್ದು, ಇಲ್ಲಿ ನಕ್ಸಲರು ಅಡಗಿಸಿಟ್ಟಿದ್ದ ಭಾರಿ ಪ್ರಮಾಣದ ಸ್ಫೋಟಕವನ್ನು ಭದ್ರತಾ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ.

ಸಿಆರ್‌ಪಿಎಫ್, ಕೋಬ್ರಾ ಮತ್ತು ಬಸ್ತಾರ್ ಬೆಟಾಲಿಯನ್‌ಗಳ ಜಂಟಿ ಕಾರ್ಯಾಚರಣೆ ನಡೆಸಿ ಕಿಸ್ತರಾಮ್ ಪೊಲೀಸ್ ಠಾಣಾ ವ್ಯಾಪ್ತಿಯ ತೊಂಡಮಾರ್ಕ ಮತ್ತು ಡಬ್ಬಮಾರ್ಕ ಹಳ್ಳಿಗಳಲ್ಲಿ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ.

ನಕ್ಸಲರ ಅಡಗುದಾಣ ಪತ್ತೆ
ರೈತರ ಮನೆಗೆ ಶಂಕಿತ ನಕ್ಸಲರ ಭೇಟಿ: ನಾಲ್ವರ ವಿರುದ್ಧ ಪೊಲೀಸ್ ಎಫ್ಐಆರ್

ಸೇನಾ ಮೂಲಗಳ ಪ್ರಕಾರ ದಾಳಿ ವೇಳೆ 350 ಗ್ರಾಂ ಜಿಲೆಟಿನ್ ಸ್ಟಿಕ್ಸ್, 105 ಎಲೆಕ್ಟ್ರಿಕ್ ಡೆಟೊನೇಟರ್ಸ್, ಬ್ಯಾರೆಲ್ ಗ್ರೆನೇಡ್ ಲಾಂಚರ್(ಬಿಜಿಎಲ್), 22 ಬಿಜಿಎಲ್ ಪ್ರೊಜೆಕ್ಟರ್‌ಗಳು, 19 ಬಿಜಿಎಲ್ ಬಾಂಬ್‌ಗಳು, 5 ಕೆ.ಜಿ ತೂಕದ ಸುಧಾರಿತ ಸ್ಫೋಟಕ ಸಾಧನ, 30 ಕೆ.ಜಿ ಗನ್ ಪೌಡರ್ ಮತ್ತು ಮಾವೋವಾದಿಗಳ ಬರಹವಿರುವ ಪುಸ್ತಕಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲಾ ಭದ್ರತಾ ಪಡೆ, 208 ಕಾರ್ಪ್ಸ್ ಕೋಬ್ರಾ, 217 ಮತ್ತು 212, 241 ಕಾರ್ಪ್ಸ್ ಸಿಆರ್‌ಪಿಎಫ್, ಬಸ್ತಾರ್ ಬೆಟಾಲಿಯನ್ ಪಡೆಗಳು ಕಿಸ್ತಾರಾಮ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಅಪಾರ ಪ್ರಮಾಣದ ಜಿಲೆಟಿನ್ ಸ್ಟಿಕ್‌ಗಳು, ಡಿಟೋನೇಟರ್‌ಗಳು, ಸ್ಫೋಟಕಗಳು, ಐಇಡಿ, ಬಿಜಿಎಲ್ ಬಾಂಬ್‌ಗಳು ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸುಕ್ಮಾ ಜಿಲ್ಲೆ, ಪೊಲೀಸರು ತಿಳಿಸಿದ್ದಾರೆ.

ಇದಲ್ಲದೆ ಬಟ್ಟೆ, ಚೀಲಗಳು, ಮಾವೋವಾದಿ ಸಾಹಿತ್ಯ, ಶೂಗಳು, ಕಾರ್ಡೆಕ್ಸ್ ವೈರ್, ಮೈಕ್ರೋಟೆಕ್ ಇನ್ವರ್ಟರ್ ಯುಪಿಎಸ್, ಸಿಡಿಮದ್ದುಗಳು, ಡ್ರೈವಿಂಗ್ ಲೈಸೆನ್ಸ್, ಬೆಲ್ಟ್‌ಗಳು, ಅಮುಲ್ ಹಾಲಿನ ಪುಡಿ, ಕಾರ್ಬನ್ ಪೇಪರ್, ಟೇಪ್, ಮ್ಯಾಚ್‌ಬಾಕ್ಸ್, ವೆಲ್ಡಿಂಗ್ ರಾಡ್‌ಗಳು, ಪ್ಲಾಸ್ಟಿಕ್ ಹಾಳೆಗಳು, ವೈರ್, ಸ್ವಿಚ್‌ಗಳು, ಪ್ಲಗ್‌ಗಳು, ಕಬ್ಬಿಣದ ಮೊಳೆಗಳು , ಬಡಗಿ ಉಪಕರಣಗಳು, ಕಬ್ಬಿಣದ ಸರಳುಗಳು, ಜಿಲೆಟಿನ್, ಗನ್ ಪೌಡರ್, ಸುಧಾರಿತ ಗ್ರೆನೇಡ್ ಮತ್ತು ಇತರ ನಕ್ಸಲೀಯರ ದೈನಂದಿನ ಉಪಯುಕ್ತ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com