ಕೇರಳ: ಟಿಪ್ಪು ಸುಲ್ತಾನ್ ನೊಂದಿಗೆ ನಂಟು, ಸುಲ್ತಾನ್ ಬತೇರಿ ಹೆಸರು ಬದಲಾವಣೆಗೆ ಬಿಜೆಪಿ ಮುಂದು...

ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ಟಿಪ್ಪು ಸುಲ್ತಾನ್‌ಗೆ ಸಂಬಂಧಿಸಿದ ಸುಲ್ತಾನ್ ಬತೇರಿ ಪಟ್ಟಣದ ಹೆಸರನ್ನು ಬದಲಾಯಿಸಬೇಕು ಎಂದು ಬಿಜೆಪಿ ಗುರುವಾರ ಹೇಳಿದೆ.
ಸುಲ್ತಾನ್ ಬತೇರಿ ಕೋಟೆ, ಟಿಪ್ಪು ಸುಲ್ತಾನ್
ಸುಲ್ತಾನ್ ಬತೇರಿ ಕೋಟೆ, ಟಿಪ್ಪು ಸುಲ್ತಾನ್

ವಯನಾಡು: ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ಟಿಪ್ಪು ಸುಲ್ತಾನ್‌ಗೆ ಸಂಬಂಧಿಸಿದ ಸುಲ್ತಾನ್ ಬತೇರಿ ಪಟ್ಟಣದ ಹೆಸರನ್ನು ಬದಲಾಯಿಸಬೇಕು ಎಂದು ಬಿಜೆಪಿ ಗುರುವಾರ ಹೇಳಿದೆ. ಎರಡು ಶತಮಾನಗಳ ಹಿಂದೆ ಮೈಸೂರು ಅರಸರು ಕೇರಳದ ಮಲಬಾರ್ ಪ್ರದೇಶದ ಮೇಲೆ ಆಕ್ರಮಣ ಮಾಡುವ ಮೊದಲು ಈ ಸ್ಥಳವನ್ನು ಮೂಲತಃ ಗಣಪತಿವಟ್ಟಂ ಎಂದು ಕರೆಯಲಾಗುತಿತ್ತು.

ಈ ವಿಷಯವನ್ನು ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಸ್ಪರ್ಧಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಕೆ ಸುರೇಂದ್ರನ್ ಮತ್ತು ಸಿಪಿಐ ನಾಯಕ, ಆಡಳಿತಾರೂಢ ಎಲ್‌ಡಿಎಫ್ ಅಭ್ಯರ್ಥಿ ಅನ್ನಿ ರಾಜಾ ಪ್ರಸ್ತಾಪಿಸಿದ್ದಾರೆ. ಗಣಪತಿವಟ್ಟಂ ಎಂಬುದು ಸುಲ್ತಾನ್ ಬತೇರಿಯ ನಿಜವಾದ ಹೆಸರು. ಅದರ ಹೆಸರು ಬದಲಾವಣೆ ಅಗತ್ಯ ಎಂದು ಸುರೇಂದ್ರನ್ ತಾಮರಸ್ಸೆರಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಸುಲ್ತಾನ್ ಬತೇರಿ ಕೋಟೆ, ಟಿಪ್ಪು ಸುಲ್ತಾನ್
ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಟಿಪ್ಪು ಸುಲ್ತಾನ್ ಕುಟುಂಬಸ್ಥರು: ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ

ಚುನಾವಣಾ ಪ್ರಚಾರದ ವೇಳೆ ಟಿಪ್ಪು ಸುಲ್ತಾನನ ಮಲಬಾರ್ ಆಕ್ರಮಣದ ವಿಷಯವನ್ನು ಪ್ರಸ್ತಾಪಿಸಿದ ಬಿಜೆಪಿ ನಾಯಕ, ಕಾಂಗ್ರೆಸ್ ಮತ್ತು ಎಲ್‌ಡಿಎಫ್ ಇದನ್ನು ಸುಲ್ತಾನ್ ಬತೇರಿ ಎಂದು ಉಲ್ಲೇಖಿಸಲು ಬಯಸುತ್ತಿವೆ. ಕೇರಳದಲ್ಲಿರುವ ಇಂತಹ ಸ್ಥಳಕ್ಕೆ ಆಕ್ರಮಣಕಾರರ ಹೆಸರನ್ನು ಏಕೆ ಇಡಬೇಕು? ಎಂದು ಪ್ರಶ್ನಿಸಿದರು.

"ವಾಸ್ತವವಾಗಿ ಈ ಸ್ಥಳ ಗಣಪತಿವಟ್ಟಂ ಆಗಿದೆ. ಸುಲ್ತಾನನ ಆಕ್ರಮಣ ಎಷ್ಟು ವರ್ಷಗಳ ಹಿಂದೆ ಸಂಭವಿಸಿತು? ಸುಲ್ತಾನ್ ಯಾರು? ವಯನಾಡ್ ಮತ್ತು ಅದರ ಜನರಿಗೆ ಸಂಬಂಧಿಸಿದಂತೆ ಟಿಪ್ಪು ಸುಲ್ತಾನನ ಮಹತ್ವವೇನು? ಎಂದು ಪ್ರಶ್ನೆಗಳ ಸುರಿಮಳೆಗೈದ ಸುರೇಂದ್ರನ್, "ಆ ಸ್ಥಳವನ್ನು ಗಣಪತಿವಟ್ಟಂ ಎಂದು ಕರೆಯಲಾಗುತ್ತಿತ್ತು. ಜನರಿಗೆ ಇದರ ಬಗ್ಗೆ ಅರಿವಿದೆ. ಕೇರಳದಲ್ಲಿ ವಿಶೇಷವಾಗಿ ವಯನಾಡ್ ಮತ್ತು ಮಲಬಾರ್‌ನಲ್ಲಿ ಲಕ್ಷಾಂತರ ಜನರನ್ನು ಮತಾಂತರ ಮಾಡಿದ ಟಿಪ್ಪು ಸುಲ್ತಾನ್‌ನೊಂದಿಗೆ ಕಾಂಗ್ರೆಸ್ ಮತ್ತು ಎಲ್‌ಡಿಎಫ್ ಹೊಂದಾಣಿಕೆ ಮಾಡಿಕೊಂಡಿವೆ ಎಂದು ಆರೋಪಿಸಿದರು.

1984 ರಲ್ಲಿ ದಿವಂಗತ ಬಿಜೆಪಿ ನಾಯಕ ಪ್ರಮೋದ್ ಮಹಾಜನ್ ಅವರು ಈ ವಿಷಯವನ್ನು ಮೊದಲು ಪ್ರಸ್ತಾಪಿಸಿದ್ದಾಗಿ ಸುರೇಂದ್ರನ್ ಹೇಳಿದ್ದಾರೆ. ಕೇರಳ ಪ್ರವಾಸೋದ್ಯಮದ ಪ್ರಕಾರ, ಸುಲ್ತಾನ್ ಬತೇರಿಯನ್ನು ಮೊದಲು ಗಣಪತಿವಟ್ಟಂ ಎಂದು ಕರೆಯಲಾಗುತ್ತಿತ್ತು. ಇದಕ್ಕೆ ಸುಲ್ತಾನ್ ಬತೇರಿ ಎಂದು ಹೆಸರಿಟ್ಟವರು ಟಿಪ್ಪು ಸುಲ್ತಾನ್. ಮಲಾಬಾರ್ ಪ್ರದೇಶದ ಆಕ್ರಮಣದ ಸಂದರ್ಭದಲ್ಲಿ ಕೋಝಿಕೋಡ್ ನ ಹಳೆಯ ಜೈನ್ ದೇವಾಲಯದಲ್ಲಿ ಮದ್ದು ಗುಂಡುಗಳು ಮತ್ತು ಶಸಾಸ್ತ್ರಗಳನ್ನು ಇಟ್ಟಿದ್ದರಿಂದ ಈ ಸ್ಥಳವನ್ನು ಸುಲ್ತಾನ್ ಬತೇರಿ ಎಂದು ಕರೆಯಲಾಗುತ್ತಿತ್ತು. ಇಲ್ಲಿಯೂ ಕೂಡಾ ಟಿಪ್ಪು ಸುಲ್ತಾನ್ ಒಂದು ಕೋಟೆ ನಿರ್ಮಿಸಿದ್ದು, ಅದು ಈಗ ಪಾಳುಬಿದ್ದಿದೆ ಮತ್ತು ಈಗ ಕೋಟೆಯ ದಿಬ್ಬಗಳ ಮೇಲೆ ಪೊಲೀಸ್ ಠಾಣೆ ಇದೆ" ಎಂದು ಕೇರಳ ಪ್ರವಾಸೋದ್ಯಮ ವೆಬ್‌ಸೈಟ್ ಹೇಳಿದೆ.

ಸುಲ್ತಾನ್ ಬತೇರಿ ಹೆಸರು ಬದಲಾಯಿಸುವ ಸುರೇಂದ್ರನ್ ಹೇಳಿಕೆ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ. ಸುರೇಂದ್ರನ್ ಏನು ಬೇಕಾದರೂ ಹೇಳಬಹುದು."ಅವರು ಗೆಲ್ಲಲು ಆಗಲ್ಲ. ಇದು ಕೇವಲ ಜನರ ಗಮನ ಸೆಳೆಯುವ ಪ್ರಯತ್ನವಾಗಿದೆ. ಇದು ಆಗುವುದಿಲ್ಲ ಮತ್ತು ಅವರ ಹೇಳಿಕೆಗೆ ಯಾವುದೇ ಬೆಲೆಯಿಲ್ಲ ಎಂದು ಕಾಂಗ್ರೆಸ್ ಮುಖಂಡ ಹಾಗೂ ಶಾಸಕ ಟಿ ಸಿದ್ದಿಕ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com