ದಶಕಗಳ ನಂತರ ಭಯೋತ್ಪಾದನೆ, ಗಡಿಯಾಚೆಗಿನ ಗುಂಡಿನ ದಾಳಿಯ ಭಯವಿಲ್ಲದೆ ಜಮ್ಮು-ಕಾಶ್ಮೀರದಲ್ಲಿ ಚುನಾವಣೆ ನಡೆಯುತ್ತಿದೆ: ಪ್ರಧಾನಿ ಮೋದಿ

ನನ್ನನ್ನು ನಂಬಿ ನಿಮ್ಮ ಸಮಸ್ಯೆಗಳನ್ನು ನಾನು ಬಗೆಹರಿಸುತ್ತೇನೆ ಎಂದ ಪ್ರಧಾನಿ ಮೋದಿ
ಉದಂಪುರದಲ್ಲಿ ಸಾರ್ವಜನಿಕ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ
ಉದಂಪುರದಲ್ಲಿ ಸಾರ್ವಜನಿಕ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ
Updated on

ಉಧಂಪುರ: ಮುಂಬರುವ ಲೋಕಸಭೆ ಚುನಾವಣೆ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ, ದಾಳಿ, ಕಲ್ಲು ತೂರಾಟ ಮತ್ತು ಗಡಿಯಾಚೆಗಿನ ಗುಂಡಿನ ದಾಳಿಯ ಭಯವಿಲ್ಲದೆ ನಡೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.

ಇಂದು ಉಧಂಪುರದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಮ್ಮು ಮತ್ತು ಕಾಶ್ಮೀರದ ಜನರ ದೀರ್ಘಾವಧಿಯ ನೋವುಗಳನ್ನು ಕೊನೆಗೊಳಿಸುವ ಭರವಸೆಯನ್ನು ಈಡೇರಿಸಿದ್ದೇನೆ. 2019ರ ಆಗಸ್ಟ್‌ನಲ್ಲಿ ಬಿಜೆಪಿ ನೇತೃತ್ವದ ಕೇಂದ್ರಸರ್ಕಾರ ತೆಗೆದುಹಾಕಿದ ಸಂವಿಧಾನದ 370ನೇ ವಿಧಿಯನ್ನು ಸಾಧ್ಯವಾದರೆ ಮತ್ತೆ ತನ್ನಿ ನೋಡೋಣ ಎಂದು ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳಿಗೆ ಸವಾಲು ಹಾಕಿದರು.

ಉಧಮ್‌ಪುರ ಲೋಕಸಭಾ ಕ್ಷೇತ್ರದಿಂದ ಹ್ಯಾಟ್ರಿಕ್‌ ಗೆಲುವು ಸಾಧಿಸುತ್ತಿರುವ ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ ಅವರನ್ನು ಬೆಂಬಲಿಸಲು ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಮೋದಿ ಮೈದಾನದಲ್ಲಿ ರ್ಯಾಲಿಯನ್ನು ಆಯೋಜಿಸಲಾಗಿತ್ತು.

ಉಧಂಪುರಕ್ಕೆ ಏಪ್ರಿಲ್ 19 ರಂದು ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಚೌಧರಿ ಲಾಲ್ ಸಿಂಗ್ ಅವರನ್ನು ಕಣಕ್ಕಿಳಿಸಿದೆ, ಡೆಮಾಕ್ರಟಿಕ್ ಪ್ರೋಗ್ರೆಸಿವ್ ಆಜಾದ್ ಪಾರ್ಟಿ (DPAP) ಜಿ ಎಂ ಸರೂರಿ ಅವರನ್ನು ಕ್ಷೇತ್ರದಿಂದ ನಾಮನಿರ್ದೇಶನ ಮಾಡಿದೆ.

ಉದಂಪುರದಲ್ಲಿ ಸಾರ್ವಜನಿಕ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ
ಜಮ್ಮು-ಕಾಶ್ಮೀರದಲ್ಲಿ INDI ಮೈತ್ರಿಕೂಟಕ್ಕೆ ಆಘಾತ: PDP ಪ್ರತ್ಯೇಕ ಸ್ಪರ್ಧೆ, ಅಡಕತ್ತರಿಯಲ್ಲಿ National Conference!

ಕಳೆದ ಐದು ದಶಕಗಳಿಂದ ನಾನು ಜಮ್ಮು ಮತ್ತು ಕಾಶ್ಮೀರಕ್ಕೆ ಬರುತ್ತಿದ್ದೇನೆ. 1992 ರಲ್ಲಿ ಲಾಲ್ ಚೌಕ್‌ನಲ್ಲಿ (ಶ್ರೀನಗರದ ಹೃದಯಭಾಗದಲ್ಲಿರುವ) ತ್ರಿವರ್ಣ ಧ್ವಜವನ್ನು ಹಾರಿಸಲು ಕೈಗೊಂಡಿದ್ದ ಏಕತಾ ಏಕತಾ ಯಾತ್ರೆ ನೆನಪಿದೆ. ನಮಗೆ ಭವ್ಯವಾದ ಸ್ವಾಗತ ಸಿಕ್ಕಿತು. 2014 ರಲ್ಲಿ, ಪ್ರಾರ್ಥನೆ ಸಲ್ಲಿಸಿದ ನಂತರ ವೈಷ್ಣೋದೇವಿ ದೇವಸ್ಥಾನದಲ್ಲಿ, ನಾನು ಇದೇ ಸ್ಥಳದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ್ದೆ. ತಲೆಮಾರುಗಳಿಂದ ಭಯೋತ್ಪಾದನೆಯಿಂದ ಬಳಲುತ್ತಿರುವ ಜನರನ್ನು ಮುಕ್ತಗೊಳಿಸುವ ಭರವಸೆ ನೀಡುತ್ತಿದ್ದೇನೆ ಎಂದರು.

ಇಂದು ನಿಮ್ಮ ಆಶೀರ್ವಾದದಿಂದ ಮೋದಿ ಆ ಭರವಸೆಯನ್ನು ಈಡೇರಿಸಿದ್ದಾರೆ. ದಶಕಗಳ ನಂತರ ಭಯೋತ್ಪಾದನೆ, ಪ್ರತ್ಯೇಕತಾವಾದ, ಕಲ್ಲು ತೂರಾಟ, ದಾಳಿ ಮತ್ತು ಗಡಿಯಾಚೆಗಿನ ಭಯೋತ್ಪಾದನೆಯ ಭಯವಿಲ್ಲದೆ ಈ ಚುನಾವಣೆ ನಡೆಯುತ್ತಿದೆ. ವೈಷ್ಣೋದೇವಿ ಮತ್ತು ಅಮರನಾಥ ತೀರ್ಥಯಾತ್ರೆಗಳ ಭದ್ರತೆಯ ಬಗ್ಗೆ ಕಾಳಜಿ ಇತ್ತು. ಇಂದು ಜಮ್ಮು-ಕಾಶ್ಮೀರ ಪರಿಸ್ಥಿತಿಯು ಸಂಪೂರ್ಣವಾಗಿ ಬದಲಾಗಿದೆ, ಜಮ್ಮು ಮತ್ತು ಕಾಶ್ಮೀರವು ಅಭಿವೃದ್ಧಿಗೆ ಸಾಕ್ಷಿಯಾಗಿದೆ ಮತ್ತು ಸರ್ಕಾರದ ಮೇಲಿನ ಜನರ ನಂಬಿಕೆ ಬಲಗೊಳ್ಳುತ್ತಿದೆ ಎಂದರು.

370 ನೇ ವಿಧಿಯ ರದ್ದತಿಯನ್ನು ಉಲ್ಲೇಖಿಸಿದ ಅವರು ವಿವಾದಾತ್ಮಕ ಸಾಂವಿಧಾನಿಕ ನಿಬಂಧನೆಯನ್ನು ಹಿಂಪಡೆಯಲು ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳಿಗೆ ಸವಾಲು ಹಾಕಿದರು.

ದಯವಿಟ್ಟು ನನ್ನನ್ನು ನಂಬಿ, ಕಳೆದ 60 ವರ್ಷಗಳಿಂದ ಜಮ್ಮು ಮತ್ತು ಕಾಶ್ಮೀರವನ್ನು ಕಾಡುತ್ತಿರುವ ಸಮಸ್ಯೆಗಳನ್ನು ನಾನು ತೊಡೆದುಹಾಕುತ್ತೇನೆ. ಕಳೆದ 10 ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರವು ಸಂಪೂರ್ಣವಾಗಿ ಬದಲಾಗಿರುವುದರಿಂದ ನಾನು ಕೊಟ್ಟಿದ್ದ ಭರವಸೆಯನ್ನು ಈಡೇರಿಸಿದ್ದೇನೆ ಎಂದರು.

ಬಿಜೆಪಿ ಅಭ್ಯರ್ಥಿಗಳಾದ ಸಿಂಗ್ ಉದಮ್‌ಪುರ ಕ್ಷೇತ್ರದಿಂದ ಮತ್ತು ಜುಗಲ್ ಕಿಶೋರ್ ಜಮ್ಮು ಕ್ಷೇತ್ರದಿಂದ ಅವರ ಪರವಾರಿ ಮತ ಯಾಚಿಸಿರುವ ಮೋದಿ, ಮುಂಬರುವ ಚುನಾವಣೆಯು ಕೇಂದ್ರದಲ್ಲಿ ಬಲವಾದ ಸರ್ಕಾರವನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com