ಎನ್ ಸಿಬಿ ವಶದಲ್ಲಿ ಜಾಫರ್ ಸಾದಿಕ್
ಎನ್ ಸಿಬಿ ವಶದಲ್ಲಿ ಜಾಫರ್ ಸಾದಿಕ್

ಡ್ರಗ್ಸ್ ನಿಂದ ಗಳಿಸಿದ 40 ಕೋಟಿ ರೂ. ಚಿತ್ರೋದ್ಯಮದಲ್ಲಿ ಹೂಡಿಕೆ: ಡಿಎಂಕೆ ಮಾಜಿ ಮುಖಂಡನ ವಿರುದ್ಧ ಇಡಿ ಆರೋಪ

ಈಗ ಡಿಎಂಕೆ ಪಕ್ಷದಿಂದ ಉಚ್ಚಾಟನೆಗೊಂಡಿರುವ ಜಾಫರ್ ಸಾದಿಕ್ ಅವರು ಡ್ರಗ್ಸ್ ಕಳ್ಳಸಾಗಣೆಯಿಂದ ಗಳಿಸಿದ 40 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ತಮಗೆ ಸಂಬಂಧಿಸಿದ ಚಲನಚಿತ್ರ ನಿರ್ಮಾಣ ಸಂಸ್ಥೆಗಳಲ್ಲಿ ಹೂಡಿಕೆ.
Published on

ಚೆನ್ನೈ: ಈಗ ಡಿಎಂಕೆ ಪಕ್ಷದಿಂದ ಉಚ್ಚಾಟನೆಗೊಂಡಿರುವ ಜಾಫರ್ ಸಾದಿಕ್ ಅವರು ಡ್ರಗ್ಸ್ ಕಳ್ಳಸಾಗಣೆಯಿಂದ ಗಳಿಸಿದ 40 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ತಮಗೆ ಸಂಬಂಧಿಸಿದ ಚಲನಚಿತ್ರ ನಿರ್ಮಾಣ ಸಂಸ್ಥೆಗಳಲ್ಲಿ, ಹಾಸ್ಪಿಟಾಲಿಟಿ ಮತ್ತು ರಿಯಲ್ ಎಸ್ಟೇಟ್‌ನಂತಹ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ಇಡಿ ಶನಿವಾರ ಆರೋಪಿಸಿದೆ.

ಏಪ್ರಿಲ್ 9 ರಂದು ಚೆನ್ನೈ, ಮಧುರೈ ಮತ್ತು ತಿರುಚಿರಾಪಳ್ಳಿಯಲ್ಲಿ ಇಡಿ ದಾಳಿ ನಡೆಸಿದ ನಂತರ ಫೆಡರಲ್ ಏಜೆನ್ಸಿ ಹೊರಡಿಸಿದ ಅಧಿಕೃತ ಹೇಳಿಕೆಯಲ್ಲಿ ಈ ಮಾಹಿತಿ ನೀಡಿದೆ.

2,000 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಸುಮಾರು 3,500 ಕೆಜಿ ಸೂಡೊಫೆಡ್ರಿನ್ ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ 36 ವರ್ಷದ ಸಾದಿಕ್ ಅವರನ್ನು ಕಳೆದ ತಿಂಗಳು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಬಂಧಿಸಿತ್ತು.

ಎನ್ ಸಿಬಿ ವಶದಲ್ಲಿ ಜಾಫರ್ ಸಾದಿಕ್
ಡಿಎಂಕೆ ಸಂಸದ ಎ ರಾಜಾಗೆ ಸೇರಿದ 55 ಕೋಟಿ ರೂ. ಮೌಲ್ಯದ ಬೇನಾಮಿ ಆಸ್ತಿ ಜಪ್ತಿ ಮಾಡಿದ ಇಡಿ

ಸಾದಿಕ್ ಡ್ರಗ್ಸ್ ಜಾಲದಲ್ಲಿ ಸಿಲುಕಿದ ನಂತರ ಕಳೆದ ಫೆಬ್ರವರಿಯಲ್ಲಿ ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಅವರನ್ನು ಪಕ್ಷದಿಂದ ಹೊರಹಾಕಿತ್ತು.

NCB ಮತ್ತು ಕಸ್ಟಮ್ಸ್ ಇಲಾಖೆ ದಾಖಲಿಸಿದ ದೂರಿನ ಆಧಾರದ ಮೇಲೆ ಇಡಿ, ಸಾದಿಕ್ ಮತ್ತು ಪಾಲುದಾರರ ವಿರುದ್ಧ ಮನಿ ಲಾಂಡರಿಂಗ್ ಪ್ರಕರಣ ದಾಖಲಿಸಿದೆ.

ಸಾದಿಕ್, ಅಂತಾರಾಷ್ಟ್ರೀಯ ಮಾದಕವಸ್ತು ಕಳ್ಳಸಾಗಣೆ ಜಾಲದ ಮಾಸ್ಟರ್‌ಮೈಂಡ್ ಎಂದು ಹೇಳಲಾಗಿದ್ದು, ಸ್ಯೂಡೋಫೆಡ್ರಿನ್ ಅನ್ನು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ಗೆ ಕಳ್ಳಸಾಗಣೆ ಮಾಡಿದ ಆರೋಪವಿದೆ ಎಂದು ಇಡಿ ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com