ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಗುಜರಾತ್: ಲೋಕಸಭೆ ಚುನಾವಣೆ ನಡುವೆಯೇ 35 ಅಧಿಕಾರಿಗಳ ಎತ್ತಂಗಡಿ

ಲೋಕಸಭೆ ಚುನಾವಣೆಗೆ ನೀತಿ ಸಂಹಿತೆ ಜಾರಿಯಲ್ಲಿರುವಂತೆಯೇ ಗುಜರಾತ್ ಸರ್ಕಾರ ಭಾನುವಾರ 35 ಭಾರತೀಯ ಪೊಲೀಸ್ ಸೇವಾ ಅಧಿಕಾರಿಗಳಿಗೆ ಬಡ್ತಿ ನೀಡಿ ವರ್ಗಾವಣೆ ಮಾಡಿದೆ. ಇದರಿಂದಾಗಿ ಸೂರತ್ ಮತ್ತು ವಡೋದರದಂತಹ ಪ್ರಮುಖ ನಗರಗಳು ಹೊಸ ಪೊಲೀಸ್ ಆಯುಕ್ತರನ್ನು ಪಡೆದುಕೊಂಡಿವೆ.
Published on

ಗಾಂಧಿನಗರ: ಲೋಕಸಭೆ ಚುನಾವಣೆಗೆ ನೀತಿ ಸಂಹಿತೆ ಜಾರಿಯಲ್ಲಿರುವಂತೆಯೇ ಗುಜರಾತ್ ಸರ್ಕಾರ ಭಾನುವಾರ 35 ಭಾರತೀಯ ಪೊಲೀಸ್ ಸೇವಾ ಅಧಿಕಾರಿಗಳಿಗೆ ಬಡ್ತಿ ನೀಡಿ ವರ್ಗಾವಣೆ ಮಾಡಿದೆ. ಇದರಿಂದಾಗಿ ಸೂರತ್ ಮತ್ತು ವಡೋದರದಂತಹ ಪ್ರಮುಖ ನಗರಗಳು ಹೊಸ ಪೊಲೀಸ್ ಆಯುಕ್ತರನ್ನು ಪಡೆದುಕೊಂಡಿವೆ.

ಸರ್ಕಾರದ ಹೊಸ ಆದೇಶದ ಪ್ರಕಾರ, ವಡೋದರಾ ಪೊಲೀಸ್ ಕಮಿಷನರ್ ಅನುಪಮ್ ಸಿಂಗ್ ಗೆಹ್ಲೋಟ್ ಅವರನ್ನು ಸೂರತ್ ಪೊಲೀಸ್ ಆಯುಕ್ತರನ್ನಾಗಿ ಮಾಡಲಾಗಿದೆ. ಅವರ ಜಾಗಕ್ಕೆ ಗಾಂಧಿನಗರದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಆಡಳಿತ), ನರಶಿಮಾ ಕೋಮರ್ ಬಂದಿದ್ದಾರೆ.

ಸಾಂದರ್ಭಿಕ ಚಿತ್ರ
ನಮಾಜ್ ವಿವಾದದ ಬೆನ್ನಲ್ಲೇ ಹಾಸ್ಟೆಲ್ ತೊರೆಯುವಂತೆ ಗುಜರಾತ್ ನ 7 ವಿದೇಶಿ ವಿದ್ಯಾರ್ಥಿಗಳಿಗೆ ಸೂಚನೆ

ಐಪಿಎಸ್ ಅಧಿಕಾರಿಗಳಾದ ಮನೋಜ್ ಅಗರ್ವಾಲ್, ಕೆಎಲ್ ಎನ್ ರಾವ್, ಜಿ ಎಸ್ ಮಲಿಕ್ ಮತ್ತು ಹಸ್ಮುಖ್ ಪಟೇಲ್ ಅವರನ್ನು ಎಡಿಜಿಯಿಂದ ಮಹಾನಿರ್ದೇಶಕರಾಗಿ ಬಡ್ತಿ ನೀಡಲಾಗಿದೆ. ಗುಜರಾತ್ ಸರ್ಕಾರದಿಂದ ಒಟ್ಟು 20 ಐಪಿಎಸ್ ಅಧಿಕಾರಿಗಳಿಗೆ ಬಡ್ತಿ ನೀಡಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com