ವಲಸೆ ಹೋದ ಜನರು, ಕಾಡಿನಂತಾದ ಊರು; ಉತ್ತರಾಖಂಡದ ಈ 24 ಗ್ರಾಮಗಳಲ್ಲಿ ಮತಗಟ್ಟೆಯೇ ಇಲ್ಲ!

ಆಳೆತ್ತರ ಕಳೆ ಬೆಳೆದು ನಿಂತ ಹೊಲ, ಗದ್ದೆಗಳು. ಹಾಡಹಗಲೇ ರಾಜಾರೋಷವಾಗಿ ತಿರುಗುವ ಕಾಡು ಪ್ರಾಣಿಗಳು. ಜನರಿಲ್ಲದೆ ಪಾಳುಬಿದ್ದ ಮನೆಗಳು ಮತ್ತು ಸ್ಮಶಾನ ಮೌನ. ಉತ್ತರಾಖಂಡದ ಗುಡ್ಡಗಾಡು ಪ್ರದೇಶದ ಗ್ರಾಮಗಳಲ್ಲಿ ಕಂಡು ಬರುವ ಸಾಮಾನ್ಯ ದೃಶ್ಯವಿದು. ಇದು ಕೇವಲ ಒಂದು ಗ್ರಾಮದ ಕಥೆಯಲ್ಲ. ನೂರಾರು ಗ್ರಾಮಗಳ ಸ್ಥಿತಿ ಹೀಗೆಯೇ ಇದೆ.
ಉತ್ತರಾಖಂಡ
ಉತ್ತರಾಖಂಡ

ಡೆಹ್ರಾಡೂನ್: ಆಳೆತ್ತರ ಕಳೆ ಬೆಳೆದು ನಿಂತ ಹೊಲ, ಗದ್ದೆಗಳು. ಹಾಡಹಗಲೇ ರಾಜಾರೋಷವಾಗಿ ತಿರುಗುವ ಕಾಡು ಪ್ರಾಣಿಗಳು. ಜನರಿಲ್ಲದೆ ಪಾಳುಬಿದ್ದ ಮನೆಗಳು ಮತ್ತು ಸ್ಮಶಾನ ಮೌನ. ಉತ್ತರಾಖಂಡದ ಗುಡ್ಡಗಾಡು ಪ್ರದೇಶದ ಗ್ರಾಮಗಳಲ್ಲಿ ಕಂಡು ಬರುವ ಸಾಮಾನ್ಯ ದೃಶ್ಯವಿದು. ಇದು ಕೇವಲ ಒಂದು ಗ್ರಾಮದ ಕಥೆಯಲ್ಲ. ನೂರಾರು ಗ್ರಾಮಗಳ ಸ್ಥಿತಿ ಹೀಗೆಯೇ ಇದೆ.

ಕೆಲಸ ಹುಡುಕಿಕೊಂಡು ವಲಸೆ ಹೋದ ಸಾವಿರಾರು ಜನರು ಮರಳಿ ಬಾರದ ಕಾರಣ ಉತ್ತರಾಖಂಡದಲ್ಲಿ ನಿರ್ಜನ ಗ್ರಾಮಗಳು ಸೃಷ್ಟಿಯಾಗಿವೆ. ಗುಡ್ಡಗಾಡು ಪ್ರದೇಶಗಳಲ್ಲಿರುವ ಗ್ರಾಮಗಳು ಅಭಿವೃದ್ಧಿ ಕಂಡಿಲ್ಲ. ಹಾಗಾಗಿ ಉದ್ಯೋಗ ಹುಡುಕಿಕೊಂಡು ಜನರು ವಲಸೆ ಹೋಗುತ್ತಿದ್ದಾರೆ. ಇದರಿದಂ ಗುಡ್ಡಗಾಡಿನ ಹಲವಾರು ಗ್ರಾಮಗಳು ಬರಿದಾಗಿವೆ.

ಈ ನಡುವೆ ಉತ್ತರಾಖಂಡದ ಈ 24 ಗ್ರಾಮಗಳನ್ನು ನಿರ್ಜನ ಗ್ರಾಮಗಳೆಂದು ಘೋಷಣೆ ಮಾಡಲಾಗಿದ್ದು, ಇಲ್ಲಿ ಯಾವುದ ಚುನಾವಣಾ ಪ್ರಕ್ರಿಯೆ ನಡೆಸದಿರಲು ಚುನಾವಣಾ ಆಯೋಗ ನಿರ್ಧರಿಸಿದೆ. ಇದಕ್ಕೆ ಕಾರಣ ಕೂಡ ರಾಜ್ಯ ವಲಸೆ ಆಯೋಗದ ವರದಿಯಾಗಿದೆ.

ರಾಜ್ಯ ಚುನಾವಣಾ ಆಯೋಗ ನೀಡಿರುವ ಅಂಕಿಅಂಶಗಳ ಪ್ರಕಾರ, ಸ್ವಾತಂತ್ರ್ಯ ನಂತರ ಕಳೆದ 16 ಲೋಕಸಭೆ ಚುನಾವಣೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ 24 ಗ್ರಾಮಗಳು ಈ ಬಾರಿ ಮಾತ್ರ ನಿರ್ಜನ ಪ್ರದೇಶವಾಗಿ ಮಾರ್ಪಟ್ಟಿದೆ.

ಈ ಗ್ರಾಮಗಳು ಅಲ್ಮೋರಾ, ತೆಹ್ರಿ, ಚಂಪಾವತ್, ಪೌರಿ ಗರ್ವಾಲ್, ಪಿಥೋರಗಢ್ ಮತ್ತು ಚಮೋಲಿ ಜಿಲ್ಲೆಗಳಲ್ಲಿದ್ದು, ಜನವಸತಿಯಿಲ್ಲದ ಪ್ರದೇಶ ಎಂದು ಪರಿಗಣಿಸಲಾಗಿದೆ.

ಉತ್ತರಾಖಂಡ
ಲೋಕಸಭೆ ಚುನಾವಣೆ 2024: ಬಿಜೆಪಿ ಪ್ರಣಾಳಿಕೆ 'ಸಂಕಲ್ಪ ಪತ್ರ'ದಲ್ಲಿ 'ಮೋದಿ ಗ್ಯಾರಂಟಿ' ಅಸ್ತ್ರಗಳೇನು?

ತೆಹ್ರಿ ಗರ್ವಾಲ್‌ನಲ್ಲಿ 9, ಚಂಪಾವತ್‌ನಲ್ಲಿ 5, ಪೌರಿ ಗರ್ವಾಲ್‌ನಲ್ಲಿ 3, ಪಿಥೋರಗಢ್‌ನಲ್ಲಿ 3, ಅಲ್ಮೋರಾದಲ್ಲಿ 2, ಚಮೋಲಿಯಲ್ಲಿ 2 ಗ್ರಾಮಗಳನ್ನು ಗೋಸ್ಟ್ ವಿಲೇಜ್ ಎಂದು ಕರೆಯಲಾಗುತ್ತಿದೆ.

ಫೆಬ್ರವರಿ 2023 ರಲ್ಲಿ ಬಿಡುಗಡೆಯಾದ ಎರಡನೇ ವರದಿಯು, 2018 ಮತ್ತು 2022 ರ ನಡುವೆ ರಾಜ್ಯದ 6,436 ಗ್ರಾಮ ಪಂಚಾಯತ್‌ಗಳಿಂದ ತಾತ್ಕಾಲಿಕ ವಲಸೆ ನಡೆದಿದೆ. ಮೂರು ಲಕ್ಷಕ್ಕೂ ಹೆಚ್ಚು ಜನರು ಉದ್ಯೋಗಕ್ಕಾಗಿ ತಮ್ಮ ಹಳ್ಳಿಯನ್ನು ತೊರೆದಿದ್ದಾರೆ ಎಂದು ಉಲ್ಲೇಖಿಸಿದೆ.

ರಾಜ್ಯದ 2067 ಗ್ರಾಮ ಪಂಚಾಯಿತಿಗಳಲ್ಲಿನ ಜನರು ಉದ್ಯೋಗ, ಶಿಕ್ಷಣ, ಆರೋಗ್ಯ ಕಾರಣದಿಂದಾಗಿ ಏಕಕಾಲದಲ್ಲಿ ಶಾಶ್ವತ ವಲಸೆ ಹೋಗಿದ್ದು, ಹಿಂತಿರುಗಿಲ್ಲ ಎಂದು ತಿಳಿಸಿದೆ.

ಹಲವು ತಮ್ಮ ಪೂರ್ವಜರ ಭೂಮಿಯನ್ನು ಮಾರಾಟ ಮಾಡಿದ್ದಾರೆ. ಇನ್ನು ಹಲವ ಭೂಮಿ ಬಂಜರು ಆಗಿದೆ. ಜನರಿಲ್ಲದೆ ಅಲ್ಮೋರಾ ಜಿಲ್ಲೆಯ 80 ಗ್ರಾಮ ಪಂಚಾಯತ್‌ಗಳನ್ನೇ ಮುಚ್ಚಲಾಗಿದೆ. 2018 ಮತ್ತು 2022 ರ ನಡುವೆ ರಾಜ್ಯದ 24 ಹಳ್ಳಿಗಳು ನಿರ್ಜನ ಗ್ರಾಮವಾಗಿದೆ ಎಂದು ಆಯೋಗದ ವರದಿ ತಿಳಿಸಿದೆ.

ಈ ಕಾರಣದಿಂದಾಗಿ ಈ ನಿರ್ಜನ ಪ್ರದೇಶದಲ್ಲಿ ಚುನಾವಣೆಯ ಯಾವುದೇ ಪ್ರಕ್ರಿಯೆ ನಡೆಯುವುದಿಲ್ಲ. ಈ ಪ್ರದೇಶದಲ್ಲಿ ಯಾವುದೇ ಮತಗಟ್ಟೆ ಸ್ಥಾಪಿಸಲಾಗುವುದಿಲ್ಲ ಮತ್ತು ಅಭ್ಯರ್ಥಿಗಳು ಅಲ್ಲಿ ಪ್ರಚಾರ ಮಾಡುತ್ತಿಲ್ಲ ಎಂದು ತಿಳಿದುಬಂದಿದೆ.

ಉತ್ತರಾಖಂಡ
ಲೋಕಸಭೆ ಚುನಾವಣೆ ಪ್ರಚಾರ: ಗದ್ದೆಯಲ್ಲಿ ನಿಂತು ಗೋಧಿ ಕಟಾವು ಮಾಡಿದ ಡ್ರೀಮ್ ಗರ್ಲ್!

ಸ್ಥಳೀಯರು ಈ ಗ್ರಾಮವನ್ನು ‘ಭೂತ ಗ್ರಾಮಗಳು’ ಅಥವಾ ಗೋಸ್ಟ್ ವಿಲೇಜಸ್ ಎಂದು ಕರೆಯುತ್ತಾರೆ. ಈ 24 ಗ್ರಾಮಗಳನ್ನು ‘ಜನವಸತಿ ಇಲ್ಲದ ಗ್ರಾಮಗಳು’ ಅಥವಾ ‘ನಿರ್ಜನ ಪ್ರದೇಶ’ ಎಂದು ಗುರುತಿಸಲಾಗಿದ್ದು, ರಾಜ್ಯ ವಲಸೆ ಆಯೋಗದ ವರದಿ ಅನ್ವಯ ಈ ಗ್ರಾಮಗಳನ್ನು ಚುನಾವಣಾ ಪ್ರಕ್ರಿಯೆಯಿಂದ ಹೊರಗಿಡಲಾಗಿದೆ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಈ 24 ಗ್ರಾಮಗಳಲ್ಲಿ ಮತಗಟ್ಟೆಗಳೇ ಇರುವುದಿಲ್ಲ.

ಈ ಬಗ್ಗೆ ಪತ್ರಿಕೆಗೆ ಪ್ರತಿಕ್ರಿಯಿಸಿದ ಉತ್ತರಾಖಂಡದ ಮುಖ್ಯ ಚುನಾವಣಾಧಿಕಾರಿ ಬಿವಿಆರ್‌ಸಿ ಪುರುಷೋತ್ತಮ್ ಅವರು, “ಚುನಾವಣಾ ಆಯೋಗವು 50 ಕ್ಕಿಂತ ಕಡಿಮೆ ಮತದಾರರು ವಾಸಿಸುವ ರಾಜ್ಯದ ಅತ್ಯಂತ ದೂರದ ಪ್ರದೇಶಗಳಲ್ಲಿಯೂ ಮತಗಟ್ಟೆಗಳನ್ನು ಸ್ಥಾಪಿಸಿದೆ. ಆದರೆ, ಈ 24 ಗ್ರಾಮಗಳಲ್ಲಿ ಸಮಸ್ಯೆಗಳಲ್ಲಿ ಜನರ ವಲಸೆ ಸಮಸ್ಯೆ ಎದುರಾಗಿದೆ ಎಂದು ಹೇಳಿದ್ದಾರೆ.

ಮಾಹಿತಿಗಳ ಪ್ರಕಾರ, 2018 ಮತ್ತು 2022 ರ ನಡುವೆ ರಾಜ್ಯದ 2,067 ಗ್ರಾಮ ಪಂಚಾಯಿತಿಗಳಲ್ಲಿ ವಾಸಿಸುತ್ತಿದ್ದ ಒಟ್ಟು 28,531 ಜನರು ಶಾಶ್ವತ ವಲಸೆ ಹೋಗಿದ್ದು, ಜಿಲ್ಲಾ ಕೇಂದ್ರ ಅಥವಾ ಇತರ ಜಿಲ್ಲೆಗಳಿಗೆ ಸ್ಥಳಾಂತರಗೊಂಡಿದ್ದಾರೆಂದು ತಿಳಿದುಬಂದಿದೆ.

35.47 ರಷ್ಟು ಜನರು ಹತ್ತಿರದ ಪಟ್ಟಣಗಳನ್ನು ಆಯ್ಕೆ ಮಾಡಿಕೊಂಡಿದ್ದು, 23.61 ರಷ್ಟು ಜನರು ಇತರ ಜಿಲ್ಲೆಗಳಿಗೆ ತೆರಳಿದ್ದಾರೆ. ಹಾಗೂ 21.08 ರಷ್ಟು ಜನರು ಇತರೆ ರಾಜ್ಯಗಳಿಗೆ ಹೋಗಿದ್ದಾರೆಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com