ಭಾರತೀಯ ನೌಕಪಡೆಯಿಂದ ಅರಬ್ಬಿ ಸಮುದ್ರದಲ್ಲಿ 940 ಕೆಜಿ ಡ್ರಗ್ಸ್ ವಶ!

ಭಾರತೀಯ ನೌಕಾಪಡೆಯು ಪಶ್ಚಿಮ ಅರೇಬಿಯನ್ ಸಮುದ್ರದಲ್ಲಿ 940 ಕೆಜಿ ನಿಷೇಧಿತ ಮಾದಕವಸ್ತುಗಳನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಭಾರತೀಯ ನೌಕಾಪಡೆಯು ಪಶ್ಚಿಮ ಅರೇಬಿಯನ್ ಸಮುದ್ರದಲ್ಲಿ 940 ಕೆಜಿ ನಿಷೇಧಿತ ಮಾದಕವಸ್ತುಗಳನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಮುಂಚೂಣಿ ಹಡಗು ಐಎನ್‌ಎಸ್ ತಲ್ವಾರ್‌ನಲ್ಲಿ ನಿಯೋಜಿತರಾದ ಭಾರತೀಯ ನೌಕಾಪಡೆಯ ಗಣ್ಯ ಮಾರ್ಕೋಸ್ ಕಮಾಂಡೋಗಳು ಏಪ್ರಿಲ್ 13 ರಂದು 'ಕ್ರಿಮ್ಸನ್ ಬರ್ರಾಕುಡಾ' ಹೆಸರಿನ ಕಾರ್ಯಾಚರಣೆಯ ಭಾಗವಾಗಿ ದೋಣಿಯೊಂದರಿಂದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಭಾರತೀಯ ನೌಕಾಪಡೆಯ ವಕ್ತಾರರು ತಿಳಿಸಿದ್ದಾರೆ.

ಕೆನಡಾದ ನೇತೃತ್ವದ ಸಂಯೋಜಿತ ಟಾಸ್ಕ್ ಫೋರ್ಸ್ 150 ಗೆ ಬೆಂಬಲವಾಗಿ ಕಾರ್ಯನಿರ್ವಹಿಸುತ್ತಿರುವ INS ತಲ್ವಾರ್ ಇದೇ ಮೊದಲ ಬಾರಿಗೆ ಮಾದಕ ವಸ್ತು ಸಾಗಣೆ ವಿರುದ್ಧ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದು,

ಅರಬ್ಬಿ ಸಮುದ್ರದಲ್ಲಿ 940 ಕೆಜಿಯಷ್ಟು ಮಾದಕವಸ್ತುಗಳನ್ನು ವಶಪಡಿಸಿಕೊಂಡಿದೆ ಎಂದು ಸಂಯೋಜಿತ ಕಡಲ ಪಡೆ (CMF) ಹೇಳಿದೆ.

CMF 42-ರಾಷ್ಟ್ರಗಳ ನೌಕಾ ಪಾಲುದಾರಿಕೆಯಾಗಿದ್ದು, ವಿಶ್ವದ ಕೆಲವು ಪ್ರಮುಖ ಹಡಗು ಮಾರ್ಗಗಳನ್ನು ಒಳಗೊಂಡಿರುವ 3.2 ಮಿಲಿಯನ್ ಚದರ ಮೈಲುಗಳಷ್ಟು ನೀರಿನಲ್ಲಿ ಭದ್ರತೆ ಮತ್ತು ಸ್ಥಿರತೆಯನ್ನು ಉತ್ತೇಜಿಸುವ ಮೂಲಕ ಅಂತರರಾಷ್ಟ್ರೀಯ ನಿಯಮಗಳನ್ನು ಎತ್ತಿಹಿಡಿಯುವ ಗುರಿಯನ್ನು ಹೊಂದಿದೆ.

ಸಾಂದರ್ಭಿಕ ಚಿತ್ರ
ಮೀನುಗಾರಿಕೆ ಆರೋಪ: 43 ಭಾರತೀಯ ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಪಡೆ

ಕಡಲ ಭದ್ರತಾ ಕಾರ್ಯಾಚರಣೆಗಾಗಿ ಪಶ್ಚಿಮ ಅರೇಬಿಯನ್ ಸಮುದ್ರದಲ್ಲಿ ನಿಯೋಜಿಸಲಾಗಿರುವ ಭಾರತೀಯ ನೌಕಾಪಡೆಯ ಹಡಗು INS ತಲ್ವಾರ್, ಏಪ್ರಿಲ್ 13 ರಂದು ನಿಷೇಧಿತ ಮಾದಕ ವಸ್ತುವನ್ನು ಯಶಸ್ವಿಯಾಗಿ ವಶಪಡಿಸಿಕೊಂಡಿದೆ" ಎಂದು ಭಾರತೀಯ ನೌಕಾಪಡೆಯ ವಕ್ತಾರರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com