ಮೀನುಗಾರಿಕೆ ಆರೋಪ: 43 ಭಾರತೀಯ ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಪಡೆ

ಶ್ರೀಲಂಕಾಕ್ಕೆ ಸೇರಿದ ಗಡಿಯಲ್ಲಿ ಮೀನುಗಾರಿಕೆ ನಡೆಸಿದ ಆರೋಪದಲ್ಲಿ 43 ಭಾರತೀಯ ಮೀನುಗಾರರನ್ನು ಬಂಧಿಸಲಾಗಿದ್ದು,  ಆರು ದೋಣಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಶ್ರೀಲಂಕಾ ನೌಕಪಡೆ ಭಾನುವಾರ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಕೊಲಂಬೊ: ಶ್ರೀಲಂಕಾಕ್ಕೆ ಸೇರಿದ ಗಡಿಯಲ್ಲಿ ಮೀನುಗಾರಿಕೆ ನಡೆಸಿದ ಆರೋಪದಲ್ಲಿ 43 ಭಾರತೀಯ ಮೀನುಗಾರರನ್ನು ಬಂಧಿಸಲಾಗಿದ್ದು,  ಆರು ದೋಣಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಶ್ರೀಲಂಕಾ ನೌಕಪಡೆ ಭಾನುವಾರ ತಿಳಿಸಿದೆ. ಶನಿವಾರ ಜಾಫ್ನಾದಲ್ಲಿರುವ ಡೆಲ್ಫ್ಟ್ ದ್ವೀಪದ ಆಗ್ನೇಯ ಸಮುದ್ರದಲ್ಲಿ ನೌಕಾಪಡೆ ಮೀನುಗಾರರನ್ನು ಬಂಧಿಸಿದೆ.

ಶನಿವಾರ ರಾತ್ರಿ  ಜಾಫ್ನಾದಲ್ಲಿರುವ ಡೆಲ್ಫ್ಟ್ ದ್ವೀಪದ ಆಗ್ನೇಯ ಸಮುದ್ರದಲ್ಲಿ ವಿಶೇಷ ಕಾರ್ಯಾಚರಣೆಯೊಂದನ್ನು ನಡೆಸಿದ ನೌಕಪಡೆ, ಶ್ರೀಲಂಕಾ ಕಡಲಿನಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದ 43 ಭಾರತೀಯ ಮೀನುಗಾರರೊಂದಿಗೆ ಆರು ಭಾರತೀಯ ದೋಣಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಶ್ರೀಲಂಕಾ ನೌಕಪಡೆ ಹೇಳಿಕೆಯಲ್ಲಿ ತಿಳಿಸಿದೆ.

ಉತ್ತರ ನೌಕ ಕಮಾಂಡ್ ಗೆ ಹೊಂದಿಕೊಂಡ 4ಎಫ್ ಎ ಎಫ್ ನೌಕೆ ಮೂಲಕ ಕೋವಿಡ್ ಶಿಷ್ಠಾಚಾರ ಪಾಲನೆಯೊಂದಿಗೆ ಭಾರತೀಯ ಮೀನುಗಾರರನ್ನು ಬಂಧಿಸಲಾಗಿದೆ. ಬಂಧಿತರಿಗೆ ರಾಪಿಡ್ ಆಂಟಿಜೆನ್ ಪರೀಕ್ಷೆ ನಂತರ ಕಾನೂನು ಕ್ರಮಕ್ಕಾಗಿ ಸಂಬಂಧಿತ ಅಧಿಕಾರಿಗಳ ವಶಕ್ಕೆ ನೀಡಲಾಗಿದೆ ಎಂದು ಮಾಹಿತಿ ನೀಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com