ಲೋಕಸಭಾ ಚುನಾವಣೆ 2024 ಮೊದಲ ಹಂತ: 11 ಗಂಟೆ ವರೆಗೂ ಶೇ.24.5 ರಷ್ಟು ಮತದಾನ

18 ನೇ ಲೋಕಸಭೆಗೆ ಮೊದಲ ಹಂತದಲ್ಲಿ ಮತದಾನ ಆರಂಭವಾಗಿದ್ದು, ಬೆಳಿಗ್ಗೆ 11 ಗಂಟೆ ವರೆಗೆ ಶೇ.24.5 ರಷ್ಟು ಮತದಾನ ನಡೆದಿದೆ.
ಮತದಾನ
ಮತದಾನ

ನವದೆಹಲಿ: 18 ನೇ ಲೋಕಸಭೆಗೆ ಮೊದಲ ಹಂತದಲ್ಲಿ ಮತದಾನ ಆರಂಭವಾಗಿದ್ದು, ಬೆಳಿಗ್ಗೆ 11 ಗಂಟೆ ವರೆಗೆ ಶೇ.24.5 ರಷ್ಟು ಮತದಾನ ನಡೆದಿದೆ.

21 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಇಂದು ಮತದಾನ ನಡೆಯುತ್ತಿದೆ. ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್‌ಗಢ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ರಾಜಸ್ಥಾನ, ಸಿಕ್ಕಿಂ, ತಮಿಳುನಾಡು, ತ್ರಿಪುರ, ಉತ್ತರ ಪ್ರದೇಶ, ಉತ್ತರಾಖಂಡ, ಪಶ್ಚಿಮ ಬಂಗಾಳ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಜಮ್ಮು ಮತ್ತು ಕಾಶ್ಮೀರ, ಲಕ್ಷದ್ವೀಪ, ಮತ್ತು ಪುದುಚೇರಿಗಳಲ್ಲಿ ಮತದಾನ ನಡೆಯುತ್ತಿದೆ.

ತ್ರಿಪುರಾದಲ್ಲಿ ಅತಿ ಹೆಚ್ಚು ಅಂದರೆ ಶೇ.34.54 ರಷ್ಟು ಮತದಾನ ನಡೆದಿದ್ದರೆ, ಲಕ್ಷದ್ವೀಪದಲ್ಲಿ ಶೇ.16.33 ರಷ್ಟು ಮತದಾನ ನಡೆದಿದೆ.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ- ಶೇ 21.82, ಅರುಣಾಚಲ ಪ್ರದೇಶ - ಶೇ 18.74, ಅಸ್ಸಾಂ - ಶೇ 27.22, ಬಿಹಾರ - ಶೇ 20.42, ಛತ್ತೀಸ್‌ಗಢ - ಶೇ 28.12, ಜಮ್ಮು ಮತ್ತು ಕಾಶ್ಮೀರ - ಶೇ 22.60, ಮಹಾರಾಷ್ಟ್ರ - ಶೇ 2 - 19.17 ಶೇ., ಮೇಘಾಲಯ - ಶೇ.33.12, ಮಿಜೋರಾಂ - ಶೇ.26.56, ನಾಗಾಲ್ಯಾಂಡ್ - ಶೇ.22.82, ಪುದುಚೇರಿ - ಶೇ.28.10, ರಾಜಸ್ಥಾನ - ಶೇ.22.51, ಸಿಕ್ಕಿಂ - ಶೇ.21.20, ತಮಿಳುನಾಡು - ಶೇ.23.72, ತ್ರಿಪುರ - ಶೇ.34 , ಉತ್ತರ ಪ್ರದೇಶ - ಶೇ.25.20, ಉತ್ತರಾಖಂಡ ಶೇ.24.83. ರಷ್ಟು ಮತದಾನ ನಡೆದಿದೆ.

ಮತದಾನ
ಲೋಕಸಭಾ ಚುನಾವಣೆ 2024: ರಾಜ್ಯದಲ್ಲಿ ಏಪ್ರಿಲ್ 24ರಿಂದ ಚುನಾವಣಾ ಪ್ರಚಾರ, ಚುನಾವಣೋತ್ತರ ಸಮೀಕ್ಷೆ ನಿಷೇಧ

ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಭೂಪೇಂದ್ರ ಯಾದವ್, ಕಿರಣ್ ರಿಜಿಜು, ಜಿತೇಂದ್ರ ಸಿಂಗ್, ಅರ್ಜುನ್ ರಾಮ್ ಮೇಘವಾಲ್ ಮತ್ತು ಸರ್ಬಾನಂದ ಸೋನೋವಾಲ್ ಅವರು ಮೊದಲ ಹಂತದಲ್ಲಿ ಕಣದಲ್ಲಿದ್ದಾರೆ. ಕಾಂಗ್ರೆಸ್‌ನ ಗೌರವ್ ಗೊಗೊಯ್, ಡಿಎಂಕೆಯ ಕನಿಮೊಳಿ ಮತ್ತು ಬಿಜೆಪಿಯ ತಮಿಳುನಾಡು ಮುಖ್ಯಸ್ಥ ಕೆ ಅಣ್ಣಾಮಲೈ ಸ್ಪರ್ಧಿಸಿರುವ ಕ್ಷೇತ್ರಗಳಿಗೂ ಕೂಡ ಇಂದು ಮತದಾನ ನಡೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com