ಅಲೋಪತಿ ಕುರಿತ ಟೀಕೆ: 'ಎಲ್ಲಾ ದೂರುದಾರರನ್ನು ಕಕ್ಷಿದಾರರನ್ನಾಗಿ ಮಾಡಿ'; Baba Ramdev ಗೆ ಸುಪ್ರೀಂ ಕೋರ್ಟ್ ಸೂಚನೆ

ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಅಲೋಪತಿ ವಿರುದ್ಧ ಮಾಡಿದ್ದ ಟೀಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದೂರು ದಾಖಲಿಸಿದ್ದ ಎಲ್ಲ ದೂರುದಾರರನ್ನೂ ಕಕ್ಷಿದಾರರನ್ನಾಗಿ ಮಾಡುವಂತೆ ಯೋಗ ಗುರು ಬಾಬಾ ರಾಮ್ ದೇವ್ ಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
Baba Ramdev
ಬಾಬಾ ರಾಮ್ ದೇವ್
Updated on

ನವದೆಹಲಿ: ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಅಲೋಪತಿ ವಿರುದ್ಧ ಮಾಡಿದ್ದ ಟೀಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದೂರು ದಾಖಲಿಸಿದ್ದ ಎಲ್ಲ ದೂರುದಾರರನ್ನೂ ಕಕ್ಷಿದಾರರನ್ನಾಗಿ ಮಾಡುವಂತೆ ಯೋಗ ಗುರು ಬಾಬಾ ರಾಮ್ ದೇವ್ ಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.

ಪಾಟ್ನಾ ಮತ್ತು ರಾಯ್‌ಪುರದ ಐಎಂಎ (Indian Medical Association) 2021ರಲ್ಲಿ ಬಾಬಾ ರಾಮ್‌ದೇವ್ ವಿರುದ್ಧ ದೂರು ದಾಖಲಿಸಿತ್ತು. ಬಾಬಾ ರಾಮ್‌ದೇವ್ ಅವರ ಹೇಳಿಕೆಗಳಿಂದ ಜನರು ಅಲೋಪತಿ ಔಷಧಿಗಳ ಬಗ್ಗೆ ಶಂಕೆ ಪಡುವಂತಾಗಿದೆ. ಜನ ಭ್ರಮನಿರಸನಗೊಂಡಿದ್ದಾರೆ ಮತ್ತು ಜನರಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿರಲಿಲ್ಲ. ಇದರಿಂದಾಗಿ ಕೊರೊನಾ ನಿಯಂತ್ರಣಕ್ಕೆ ತೊಂದರೆಯಾಗಿತ್ತು ಎಂದು ದೂರಿನಲ್ಲಿ ಹೇಳಲಾಗಿದೆ.

ಬಾಬಾ ರಾಮದೇವ್ ಅವರು ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಅಲೋಪತಿ ಔಷಧಿಗಳ ಬಗ್ಗೆ ಮಾಡಿದ ಟೀಕೆ ಪ್ರಕರಣದಲ್ಲಿ ಕ್ರಿಮಿನಲ್ ಕ್ರಮಕ್ಕೆ ತಡೆ ನೀಡಬೇಕೆಂದು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಶುಕ್ರವಾರ ಅರ್ಜಿಯ ವಿಚಾರಣೆ ವೇಳೆ, ಬಾಬಾ ರಾಮ್‌ದೇವ್ ಅವರ ವಿರುದ್ಧ ದೂರು ನೀಡಿರುವ ಎಲ್ಲ ದೂರುದಾರರನ್ನು ಪ್ರಕರಣದಲ್ಲಿ ಕಕ್ಷಿದಾರರನ್ನಾಗಿ ಮಾಡುವಂತೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.

ಬಾಬಾ ರಾಮದೇವ್ ಅವರ ಅರ್ಜಿಯನ್ನು ಆಲಿಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಂಎಂ ಸುಂದರೇಶ್ ಮತ್ತು ನ್ಯಾಯಮೂರ್ತಿ ಪಿಬಿ ವರಾಳೆ ಅವರ ಪೀಠವು ದೂರುದಾರರನ್ನು ಕಕ್ಷಿದಾರರನ್ನಾಗಿ ಮಾಡುವಂತೆ ಕೇಳಿದೆ. ಅಲ್ಲದೆ ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ಬೇಸಿಗೆ ರಜೆಯ ತನಕ ಮುಂದೂಡಿದೆ.

Baba Ramdev
ಪತಂಜಲಿ ದಾರಿ ತಪ್ಪಿಸುವ ಜಾಹೀರಾತು: ಸಾರ್ವಜನಿಕವಾಗಿ ಕ್ಷಮೆಕೋರಲು ಬಾಬಾ ರಾಮ್‌ದೇವ್, ಬಾಲಕೃಷ್ಣ ಮುಂದು

ಬಾಬಾ ರಾಮದೇವ್ ಹೇಳಿಕೆ ವಿರುದ್ಧ ಹಲವು ದೂರುಗಳು

ಅಂದಹಾಗೆ ಬಾಬಾ ರಾಮ್‌ದೇವ್ ಅವರು 2021 ರಲ್ಲಿ ತಮ್ಮ ಹೇಳಿಕೆಯೊಂದರಲ್ಲಿ ಅಲೋಪತಿ ಔಷಧಿಗಳಲ್ಲಿ ನನಗೆ ನಂಬಿಕೆಯಿಲ್ಲ ಎಂದು ಹೇಳಿದ್ದರು. ಬಾಬಾ ರಾಮ್ ದೇವ್ ಹೇಳಿಕೆ ತೀವ್ರ ವಿವಾದಕ್ಕೀಡಾಗಿತ್ತು. ಅವರ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದವು. ಪಾಟ್ನಾ ಮತ್ತು ರಾಯ್‌ಪುರದ ಐಎಂಎ 2021ರಲ್ಲಿ ಬಾಬಾ ರಾಮ್‌ದೇವ್ ವಿರುದ್ಧ ದೂರು ದಾಖಲಿಸಿತ್ತು.

ಇಂದು ಬಿಹಾರ ಸರ್ಕಾರದ ಪರವಾಗಿ ನ್ಯಾಯಾಲಯಕ್ಕೆ ಹಾಜರಾದ ವಕೀಲರು ಈ ಪ್ರಕರಣದಲ್ಲಿ ತಮ್ಮ ಉತ್ತರವನ್ನು ಸಲ್ಲಿಸಲು ಸಮಯ ಬೇಕಾಗುತ್ತದೆ ಎಂದು ಹೇಳಿದರು. ಬಾಬಾ ರಾಮ್‌ದೇವ್ ಅವರು ತಮ್ಮ ಅರ್ಜಿಯಲ್ಲಿ ಕೇಂದ್ರ ಸರ್ಕಾರ, ಬಿಹಾರ ಸರ್ಕಾರ, ಛತ್ತೀಸ್‌ಗಢ ಸರ್ಕಾರ ಮತ್ತು ಐಎಂಎಯನ್ನು ಕಕ್ಷಿದಾರರನ್ನಾಗಿ ಮಾಡಿದ್ದಾರೆ. ಅಂತೆಯೇ ತಮ್ಮ ವಿರುದ್ಧ ನಡೆಯುತ್ತಿರುವ ಕ್ರಿಮಿನಲ್ ಮೊಕದ್ದಮೆಗಳ ತನಿಖೆಗೆ ತಡೆ ನೀಡುವಂತೆ ಒತ್ತಾಯಿಸಿದ್ದಾರೆ.

ಕೊರೋನಿಲ್‌ನಿಂದ ಸಾವಿರ ಕೋಟಿಗೂ ಹೆಚ್ಚು ಗಳಿಸಿದ ಪತಂಜಲಿ

ಇನ್ನು ಆಲೋಪತಿ ಔಷಧಿಗಳನ್ನು ಟೀಕಿಸಿದ್ದು ಮಾತ್ರವಲ್ಲದೇ ತಮ್ಮ ಕೊರೋನಿಲ್ ಔಷಧಿಯನ್ನು ಪ್ರಚಾರ ಮಾಡಿದ್ದ ಬಾಬಾ ರಾಮ್ ದೇವ್ ಮತ್ತು ಅವರ ಪತಂಜಲಿ ಸಂಸ್ಥೆ ಕೊರೋನಿಲ್‌ ಕಿಟ್ ಗಳನ್ನು ಮಾರಾಟ ಮಾಡಿ ಸಾವಿರ ಕೋಟಿಗೂ ಹೆಚ್ಚು ಹಣ ಗಳಿಸಿದೆ ಎಂದು ಆರೋಪಿಸಲಾಗಿದೆ. ಅವರ ಹೇಳಿಕೆ ಬಳಿಕ ದೇಶದಲ್ಲಿ ಅಲೋಪತಿ ವರ್ಸಸ್ ಆಯುರ್ವೇದ ಎಂಬ ಚರ್ಚೆ ಆರಂಭವಾಗಿದ್ದು, ಲಸಿಕೆಗಳು ಮತ್ತು ಚಿಕಿತ್ಸಾ ಪ್ರೋಟೋಕಾಲ್‌ಗಳನ್ನು ನಿರ್ಲಕ್ಷಿಸಲು ಜನರನ್ನು "ಪ್ರಚೋದನೆ" ಮಾಡಿದ್ದಾರೆ.

ರಾಮ್‌ದೇವ್ ಅಲೋಪತಿಯನ್ನು ಅವಮಾನಿಸಿದ್ದಾರೆ. ಕೊರೋನಾ ಸಮಯದಲ್ಲಿ ಕರೋನಿಲ್ ಔಷಧಿಯನ್ನು ಮಾರಾಟ ಮಾಡುವ ಮೂಲಕ ಬಾಬಾ ರಾಮ್‌ದೇವ್ ಅವರ ಕಂಪನಿ ಪತಂಜಲಿಯು 1,000 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಗಳಿಸಿದೆ. ಆದರೂ ಈ ಔಷಧಿಯು ಯಾವುದೇ ಸ್ಪರ್ಧಾತ್ಮಕ ಪ್ರಾಧಿಕಾರದಿಂದ ಅನುಮೋದನೆಯನ್ನು ಪಡೆದಿಲ್ಲ. 15,000 ವೈದ್ಯರನ್ನು ಹೊಂದಿರುವ ಡಿಎಂಎ, ಸಕ್ಷಮ ಪ್ರಾಧಿಕಾರದಿಂದ ಅನುಮೋದಿಸದ ಕೊರೊನಿಲ್ ಕಿಟ್‌ಗಳನ್ನು ಮಾರಾಟ ಮಾಡಿದ್ದಾರೆ ಎಂದು ದೆಹಲಿ ವೈದ್ಯಕೀಯ ಸಂಘ ಆರೋಪಿಸಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com