1.2 ಕೋಟಿ ರೂ. ದರೋಡೆ: ಜೋಶಿ ಮನೆಯಲ್ಲಿ ಕಳ್ಳತನಕ್ಕೂ ಮುನ್ನ 2,700 ಕಿ.ಮೀ. ಪ್ರಯಾಣಿಸಿದ್ದ 'ಬಿಹಾರ್ ರಾಬಿನ್ ಹುಡ್' ಇರ್ಫಾನ್!

ಮಲಯಾಳಂ ಚಲನಚಿತ್ರ ನಿರ್ದೇಶಕ ಜೋಶಿ ಅವರ ನಿವಾಸದಲ್ಲಿ ಕಳ್ಳತನ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ಬಿಹಾರದ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪತಿ ಇರ್ಫಾನ್ ಕಳ್ಳತನಕ್ಕೂ ಮುನ್ನ ಬಿಹಾರದ ಸೀತಾಮರ್ಹಿ ನಿಂದ ಕೇರಳದ ಕೊಚ್ಚಿಗೆ 2700 ಕಿ.ಮೀ ಪ್ರಯಾಣಿಸಿದ್ದನು.
ಆರೋಪಿ ಇರ್ಫಾನ್ ಬಂಧನ
ಆರೋಪಿ ಇರ್ಫಾನ್ ಬಂಧನTNIE
Updated on

ಕೊಚ್ಚಿ(ಕೇರಳ): ಮಲಯಾಳಂ ಚಲನಚಿತ್ರ ನಿರ್ದೇಶಕ ಜೋಶಿ ಅವರ ನಿವಾಸದಲ್ಲಿ ಕಳ್ಳತನ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ಬಿಹಾರದ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪತಿ ಇರ್ಫಾನ್ ಕಳ್ಳತನಕ್ಕೂ ಮುನ್ನ ಬಿಹಾರದ ಸೀತಾಮರ್ಹಿ ನಿಂದ ಕೇರಳದ ಕೊಚ್ಚಿಗೆ 2700 ಕಿ.ಮೀ ಪ್ರಯಾಣಿಸಿದ್ದನು.

ಸ್ವಯಂ ಘೋಷಿತ ಬಿಹಾರ್ ರಾಬಿನ್ ಹುಡ್ ಇರ್ಫಾನ್ ನನ್ನು ಬಂಧಿಸಲಾಗಿದೆ ಎಂದು ಕೇರಳ ಪೊಲೀಸರು ಸೋಮವಾರ ಮಾಹಿತಿ ನೀಡಿದ್ದಾರೆ. ಕರ್ನಾಟಕ ಪೊಲೀಸರ ನೆರವಿನಿಂದ ಉಡುಪಿ ಜಿಲ್ಲೆಯಿಂದ ಸಿಕ್ಕಿಬಿದ್ದ ಆರೋಪಿ ಮೊಹಮ್ಮದ್ ಇರ್ಫಾನ್ (37)ನನ್ನು ಕೇರಳ ಪೊಲೀಸರು ಕೊಚ್ಚಿಗೆ ಕರೆತಂದಿದ್ದಾರೆ.

ಆರೋಪಿಯನ್ನು ಮುಖ್ಯವಾಗಿ ಸಿಸಿಟಿವಿ ದೃಶ್ಯಾವಳಿ ಮತ್ತು ಅಪರಾಧ ಸ್ಥಳದಿಂದ ಪರಾರಿಯಾಗಲು ಬಳಸಿದ ಕಾರನ್ನು ಆಧರಿಸಿ ಬಂಧಿಸಲಾಗಿದೆ ಎಂದು ಕೊಚ್ಚಿ ನಗರ ಪೊಲೀಸ್ ಆಯುಕ್ತ ಶ್ಯಾಮಸುಂದರ್ ತಿಳಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ವೇಳೆ ನಮಗೆ ಅನುಮಾನಾಸ್ಪದ ಹೋಂಡಾ ಅಕಾರ್ಡ್ ಕಾರನ್ನು ಪತ್ತೆ ಮಾಡಿ ಅದರ ಮಾರ್ಗವನ್ನು ಅನುಸರಿಸಿದ್ದೇವು ಎಂದು ಶ್ಯಾಮಸುಂದರ್ ಹೇಳಿದರು. ಕಾರು ಕಾಸರಗೋಡು ದಾಟಿದ್ದು ಕಂಡು ಬಂತು. ಆರೋಪಿಗಳನ್ನು ಬಂಧಿಸಲು ನಮಗೆ ಸಹಾಯ ಮಾಡಿದ ಕರ್ನಾಟಕದ ಅಧಿಕಾರಿಗಳಿಗೆ ಈ ಬಗ್ಗೆ ತಿಳಿಸಿದ್ದೇವೆ. ಕಾರಿನ ಮೇಲೆ ಸೀತಾಮರ್ಹಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಹೆಸರನ್ನು ಬರೆಯಲಾಗಿದೆ ಎಂದು ತಿಳಿಸಿದರು.

ಆರೋಪಿ ಇರ್ಫಾನ್ ಬಂಧನ
10 ಹಳದಿ ಅನಕೊಂಡ ಹಾವುಗಳ ಕಳ್ಳಸಾಗಣೆಗೆ ಯತ್ನ; ವಿಮಾನ ನಿಲ್ದಾಣದಲ್ಲಿ ವ್ಯಕ್ತಿ ವಶಕ್ಕೆ

ಆರೋಪಿಯ ಪತ್ನಿ ಸೀತಾಮರ್ಹಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಎಂದು ಆಯುಕ್ತರು ತಿಳಿಸಿದ್ದಾರೆ. ರಾಬಿನ್ ಹುಡ್ ನಂತೆ ಹಣ, ಚಿನ್ನಾಭರಣ ದೋಚುವ ಮೂಲಕ ಬಡವರಿಗೆ ನೆರವಾಗುವುದು ಆರೋಪಿಯ ಉದ್ದೇಶವಾಗಿತ್ತು ಎಂದು ಕೆಲವು ವರದಿಯಾಗುತ್ತಿವೆ. ಈ ವರದಿಯ ಕುರಿತು ಶ್ಯಾಮಸುಂದರ್ ಅವರನ್ನು ಕೇಳಿದಾಗ, 'ಪೊಲೀಸರ ಪಾಲಿಗೆ ಆತನೊಬ್ಬ ಕ್ರಿಮಿನಲ್' ಅಷ್ಟೆ. ಆರೋಪಿಯು ಏಪ್ರಿಲ್ 20ರಂದು ಕೊಚ್ಚಿ ತಲುಪಿದ್ದು, ಪ್ರಾಥಮಿಕ ತನಿಖೆಯ ಪ್ರಕಾರ ಗೂಗಲ್ ಸಹಾಯದಿಂದ ನಗರದ ದುಬಾರಿ ಪ್ರದೇಶಗಳನ್ನು ಪರಿಶೋಧಿಸಿದ್ದಾನೆ. ಇರ್ಫಾನ್ ಅದೇ ದಿನ ರಾತ್ರಿ ಪ್ರದೇಶದ ಇತರ ಮೂರು ಮನೆಗಳಿಗೆ ಪ್ರವೇಶಿಸಲು ಪ್ರಯತ್ನಿಸಿದ್ದನು. ಆದರೆ ವಿಫಲನಾಗಿದ್ದನು. ಈತನ ವಿರುದ್ಧ ಆರು ರಾಜ್ಯಗಳಲ್ಲಿ 19 ಕಳ್ಳತನ ಪ್ರಕರಣಗಳು ದಾಖಲಾಗಿವೆ ಎಂದು ಆಯುಕ್ತರು ತಿಳಿಸಿದ್ದಾರೆ. ಇದೇ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ ಕಳೆದ ತಿಂಗಳಷ್ಟೇ ಜೈಲಿನಿಂದ ಹೊರ ಬಂದಿದ್ದನು.

ಆರೋಪಿಗಳಿಂದ 1.2 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಚಿನ್ನ ಮತ್ತು ವಜ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈತ ತಿರುವನಂತಪುರದಲ್ಲಿ ಇದೇ ರೀತಿಯ ಕಳ್ಳತನ ಪ್ರಕರಣದಲ್ಲಿ ಶಂಕಿತ. ಆರೋಪಿ ಅಡುಗೆ ಮನೆಯ ಕಿಟಕಿಯನ್ನು ಒಡೆದು ಒಳ ಪ್ರವೇಶಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಮನೆಗೆ ನುಗ್ಗಿದಾಗ ನಿರ್ದೇಶಕರು ಮತ್ತು ಅವರ ಕುಟುಂಬ ಸದಸ್ಯರು ಮನೆಯಲ್ಲಿಯೇ ಇದ್ದರು. ಆರೋಪಿ ಎರಡನೇ ಮಹಡಿಯಲ್ಲಿರುವ ಕಬೋರ್ಡ್‌ನಿಂದ ಚಿನ್ನಾಭರಣಗಳನ್ನು ದೋಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com