ವೀಸಾ ವಿಸ್ತರಿಸಲು ಕೇಂದ್ರ ಸರ್ಕಾರ ನಿರಾಕರಣೆ: ಆಸ್ಟ್ರೇಲಿಯಾ ಪತ್ರಕರ್ತೆ ಆರೋಪ

ತನ್ನ ವರದಿಯನ್ನು ಉಲ್ಲೇಖಿಸಿ, ಕೆಲಸದ ವೀಸಾವನ್ನು ವಿಸ್ತರಿಸಲು ಕೇಂದ್ರ ಸರ್ಕಾರ ನಿರಾಕರಿಸಿದ ನಂತರ ಭಾರತವನ್ನು ತೊರೆಯಲು ಒತ್ತಾಯಿಸಲಾಯಿತು ಎಂದು ಆಸ್ಟ್ರೇಲಿಯಾದ ಪತ್ರಕರ್ತೆಯೊಬ್ಬರು ಮಂಗಳವಾರ ಹೇಳಿದ್ದಾರೆ.
ಪತ್ರಕರ್ತೆ ಅವನಿ ಡಯಾಸ್
ಪತ್ರಕರ್ತೆ ಅವನಿ ಡಯಾಸ್

ನವದೆಹಲಿ: ತನ್ನ ವರದಿಯನ್ನು ಉಲ್ಲೇಖಿಸಿ, ಕೆಲಸದ ವೀಸಾವನ್ನು ವಿಸ್ತರಿಸಲು ಕೇಂದ್ರ ಸರ್ಕಾರ ನಿರಾಕರಿಸಿದ ನಂತರ ಭಾರತವನ್ನು ತೊರೆಯುವಂತೆ ಬಲವಂತಪಡಿಸಲಾಯಿತು ಎಂದು ಆಸ್ಟ್ರೇಲಿಯಾದ ಪತ್ರಕರ್ತೆಯೊಬ್ಬರು ಮಂಗಳವಾರ ಹೇಳಿದ್ದಾರೆ.

ಆಸ್ಟ್ರೇಲಿಯನ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್‌ನ ದಕ್ಷಿಣ ಏಷ್ಯಾ ಬ್ಯೂರೋ ಮುಖ್ಯಸ್ಥೆ ಅವನಿ ಡಯಾಸ್, ಸಿಖ್ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಕುರಿತು ವರದಿ ಮಾಡಿದ್ದಕ್ಕೆ ಸರ್ಕಾರ ಆಕ್ಷೇಪಿಸಿದ ನಂತರ ಲೋಕಸಭೆ ಚುನಾವಣೆ ಪ್ರಾರಂಭವಾದ ಏಪ್ರಿಲ್ 19 ರಂದು ಭಾರತ ತೊರೆಯಬೇಕಾಯಿತು ಎಂದು ತಿಳಿಸಿದ್ದಾರೆ.

ಪತ್ರಕರ್ತೆ ಅವನಿ ಡಯಾಸ್
ನಿಜ್ಜರ್ ಹತ್ಯೆ: ರಾಜತಾಂತ್ರಿಕ ಕಿರಿಕ್ ಬಳಿಕ ಬೆಂಗಳೂರು, ಚಂಡೀಗಢ, ಮುಂಬೈನಲ್ಲಿ ವೀಸಾ ಸೇವೆ ಸ್ಥಗಿತಗೊಳಿಸಿದ ಕೆನಡಾ

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, "ಕಳೆದ ವಾರ, ನಾನು ಹಠಾತ್ತನೆ ಭಾರತ ತೊರೆಯಬೇಕಾಯಿತು. ಮೋದಿ ಸರ್ಕಾರ ವೀಸಾ ವಿಸ್ತರಣೆ ನಿರಾಕರಿಸಿ, ನನ್ನ ವರದಿಯು ನಿಯಮ ಮೀರಿದೆ ಎಂದು ಹೇಳಿದೆ ಅವರು ಬರೆದುಕೊಂಡಿದ್ದಾರೆ.

"ಭಾರತೀಯ ಸಚಿವಾಲಯದ ನಿರ್ದೇಶನದ ಕಾರಣದಿಂದ ಚುನಾವಣಾ ಮಾನ್ಯತೆ ಬರುವುದಿಲ್ಲ ಎಂದು ತಿಳಿಸಲಾಯಿತು. ಮೋದಿ ಪ್ರಜಾಪ್ರಭುತ್ವ ತಾಯಿ ಎಂದು ಕರೆದಿದ್ದ ಮೊದಲ ಹಂತದ ಮತದಾನದಿಂದು ನಾನು ಭಾರತ ತೊರೆದಿದ್ದೇನೆ ಎಂದು ಡಯಾಸ್ ಹೇಳಿದ್ದಾರೆ. ಅವರು ಭಾರತದಲ್ಲಿ ಕಳೆದ ಎರಡೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದರು.

ಆಸ್ಟ್ರೇಲಿಯನ್ ಸರ್ಕಾರದ ಮಧ್ಯಪ್ರವೇಶದ ನಂತರ ವೀಸಾವನ್ನು ಎರಡು ತಿಂಗಳವರೆಗೆ ವಿಸ್ತರಿಸಲಾಯಿತು. ಇದನ್ನು ತಾನೂ ವಿಮಾನ ಪ್ರಯಾಣಕ್ಕೂ 24 ಗಂಟೆಗಳ ಮುನ್ನ ತಿಳಿಸಲಾಯಿತು. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿಯೊಬ್ಬರು ಈ ನಿರ್ಧಾರವನ್ನು ಡಯಾಸ್ ಗೆ ತಿಳಿಸಿದ್ದಾರೆ ಎಂದು ಆಸ್ಟ್ರೇಲಿಯನ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ ಹೇಳಿದೆ. ನಿಜ್ಜರ್ ಹತ್ಯೆಯ ಕುರಿತಾದ ತನ್ನ ಸುದ್ದಿ ಸರಣಿಯ ವಿದೇಶಿ ವರದಿಗಾರನ ಸಂಚಿಕೆಗೆ ಭಾರತದಲ್ಲಿ ಯೂ ಟ್ಯೂಬ್ ಬ್ಲಾಕ್ ಮಾಡಿದೆ ಎಂದು ಎಬಿಸಿ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com