ಲೋಕಸಭೆ ಚುನಾವಣೆ: ಮೊದಲ ಬಾರಿ ಭರ್ಜರಿ ರೋಡ್ ಶೋ ನಡೆಸಿದ ದೆಹಲಿ ಸಿಎಂ ಪತ್ನಿ ಸುನೀತಾ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು "ಶೇರ್"(ಸಿಂಹ) ಮತ್ತು ಯಾರೂ ಅವರನ್ನು ಬಗ್ಗಿಸಲು ಸಾಧ್ಯವಿಲ್ಲ ಎಂದು ಅವರ ಪತ್ನಿ ಸುನೀತಾ ಕೇಜ್ರಿವಾಲ್ ಅವರು ಶನಿವಾರ ಹೇಳಿದ್ದಾರೆ.
ಸುನೀತಾ ಕೇಜ್ರಿವಾಲ್
ಸುನೀತಾ ಕೇಜ್ರಿವಾಲ್

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು "ಶೇರ್"(ಸಿಂಹ) ಮತ್ತು ಯಾರೂ ಅವರನ್ನು ಬಗ್ಗಿಸಲು ಸಾಧ್ಯವಿಲ್ಲ ಎಂದು ಅವರ ಪತ್ನಿ ಸುನೀತಾ ಕೇಜ್ರಿವಾಲ್ ಅವರು ಶನಿವಾರ ಹೇಳಿದ್ದಾರೆ.

ಲೋಕಸಭೆ ಚುನಾವಣಾ ಪ್ರಚಾರ ಅಖಾಡಕ್ಕೆ ಇಳಿದಿರುವ ಸುನೀತಾ ಕೇಜ್ರಿವಾಲ್ ಅವರು, ಇಂದು ಸಂಜೆ ಎಎಪಿಯ ಪೂರ್ವ ದೆಹಲಿ ಅಭ್ಯರ್ಥಿಯ ಪರವಾಗಿ ಮೊದಲ ಬಾರಿ ರೋಡ್ ಶೋ ನಡೆಸಿದರು.

ವಾಹನದ ಸನ್‌ರೂಫ್ ಮೂಲಕ ಭರ್ಜರಿ ರೋಡ್ ಶೋ ನಡೆಸಿದ ಸುನೀತಾ ಕೇಜ್ರಿವಾಲ್ ಅವರನ್ನು ಪೂರ್ವ ದೆಹಲಿ ಕ್ಷೇತ್ರದ ಕೊಂಡ್ಲಿ ಪ್ರದೇಶದಲ್ಲಿ ಮತದಾರರು ಅದ್ಧೂರಿ ಸ್ವಾಗತ ನೀಡಿದರು.

ಸುನೀತಾ ಕೇಜ್ರಿವಾಲ್
ಲೋಕಸಭೆ ಚುನಾವಣಾ ಅಖಾಡಕ್ಕೆ ಕೇಜ್ರಿವಾಲ್ ಪತ್ನಿ ಎಂಟ್ರಿ: ನಾಳೆ ದೆಹಲಿಯಲ್ಲಿ ಸುನೀತಾ ರೋಡ್ ಶೋ!

ಉತ್ತಮ ದರ್ಜೆಯ ಶಾಲೆಗಳನ್ನು ನಿರ್ಮಿಸಿ, ಉಚಿತ ವಿದ್ಯುತ್‌ ಒದಗಿಸಿದ ಮತ್ತು ಮೊಹಲ್ಲಾ ಕ್ಲಿನಿಕ್‌ಗಳನ್ನು ತೆರೆದಿದ್ದಕ್ಕಾಗಿ ದೆಹಲಿ ಮುಖ್ಯಮಂತ್ರಿ ಜೈಲು ಪಾಲಾದರು ಎಂದು ಸುನೀತಾ ಆಕ್ರೋಶ ವ್ಯಕ್ತಪಡಿಸಿದರು.

ಸರ್ವಾಧಿಕಾರ ತೊಲಗಿ ಪ್ರಜಾಪ್ರಭುತ್ವ ಉಳಿಸಲು ನಾವು ಮತ ಹಾಕುತ್ತೇವೆ ಎಂದು ಸುನೀತಾ ಕೇಜ್ರಿವಾಲ್ ಕೇಂದ್ರದ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ಅವರು ಜೈಲಿನಲ್ಲಿರುವಾಗ, ಅವರ ಪತ್ನಿ ಎಎಪಿಯ ಚುನಾವಣಾ ಪ್ರಚಾರವನ್ನು ಮುನ್ನಡೆಸಲಿದ್ದಾರೆ ಮತ್ತು ಭಾನುವಾರ ಪಶ್ಚಿಮ ದೆಹಲಿ ಲೋಕಸಭಾ ಕ್ಷೇತ್ರ ಸೇರಿದಂತೆ ಹಲವು ಕಡೆ ರೋಡ್‌ಶೋಗಳನ್ನು ನಡೆಸಲಿದ್ದಾರೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.

ಗುಜರಾತ್ ಮತ್ತು ಪಂಜಾಬ್‌ ರಾಜ್ಯಗಳಲ್ಲೂ ಎಎಪಿ ಅಭ್ಯರ್ಥಿಗಳ ಪರ ಸುನೀತಾ ಕೇಜ್ರಿವಾಲ್ ಅವರು ಪ್ರಚಾರ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಗುಜರಾತ್‌ನ ಎಎಪಿ ಘಟಕದ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲೂ ಸುನೀತಾ ಹೆಸರಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com