India sends Sarayu water to Sri Lanka: ಶ್ರೀಲಂಕಾದಲ್ಲಿ ಸೀತಾಮಾತೆ ದೇಗುಲ ಪ್ರತಿಷ್ಠಾಪನೆಗೆ ಭಾರತದ ಪವಿತ್ರ ಸರಯೂ ನದಿ ನೀರು ಪೂರೈಕೆ!

ಭಾರತದಲ್ಲಿ ಅಯೋಧ್ಯೆ ರಾಮಮಂದಿರ ನಿರ್ಮಾಣದ ಬೆನ್ನಲ್ಲೇ ರಾಮಾಯಣದ ಪ್ರಮುಖ ಭಾಗವಾಗಿರುವ ಶ್ರೀಲಂಕಾದಲ್ಲೂ ಸೀತಾಮಾತೆ ದೇಗುಲ ನಿರ್ಮಾಣವಾಗುತ್ತಿದ್ದು, ಈ ದೇಗುಲಕ್ಕೆ ಭಾರತದ ಸರಯೂ ನದಿಯಿಂದ ಪವಿತ್ರ ನೀರನ್ನು ರವಾನೆ ಮಾಡಲಾಗಿದೆ.
India sends holy Sarayu water to Sri Lanka
ಶ್ರೀಲಂಕಾ ಸೀತಾಮಾತೆ ದೇಗುಲಕ್ಕೆ ಭಾರತದ ಸರಯೂ ನದಿ ನೀರು ಪೂರೈಕೆ
Updated on

ನವದೆಹಲಿ: ಭಾರತದಲ್ಲಿ ಅಯೋಧ್ಯೆ ರಾಮಮಂದಿರ ನಿರ್ಮಾಣದ ಬೆನ್ನಲ್ಲೇ ರಾಮಾಯಣದ ಪ್ರಮುಖ ಭಾಗವಾಗಿರುವ ಶ್ರೀಲಂಕಾದಲ್ಲೂ ಸೀತಾಮಾತೆ ದೇಗುಲ ನಿರ್ಮಾಣವಾಗುತ್ತಿದ್ದು, ಈ ದೇಗುಲಕ್ಕೆ ಭಾರತದ ಸರಯೂ ನದಿಯಿಂದ ಪವಿತ್ರ ನೀರನ್ನು ರವಾನೆ ಮಾಡಲಾಗಿದೆ.

ಸೀತಾ ದೇವಿಗೆ ಸಮರ್ಪಿತವಾಗಿರುವ ಸೀತಾ ಅಮ್ಮನ ದೇವಾಲಯದ ಪವಿತ್ರ ಕಾರ್ಯಕ್ರಮಕ್ಕಾಗಿ ಶ್ರೀಲಂಕಾಕ್ಕೆ ಪವಿತ್ರ ಸರಯೂ ನದಿ ನೀರನ್ನು ಕಳುಹಿಸುವ ಪ್ರಕ್ರಿಯೆಯನ್ನು ಭಾರತ ಪ್ರಾರಂಭಿಸಿದೆ. ಮೇ 19 ರಂದು ಸೀತಾ ಅಮ್ಮನವರ ದೇವಸ್ಥಾನದ ಮಹಾಮಸ್ತಕಾಭಿಷೇಕ ಕಾರ್ಯಕ್ರಮ ನಡೆಯಲಿದ್ದು, ಶ್ರೀಲಂಕಾದ ಪ್ರತಿನಿಧಿಗಳು ಉತ್ತರ ಪ್ರದೇಶ ಸರ್ಕಾರಕ್ಕೆ ಬರೆದ ಪತ್ರದ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

India sends holy Sarayu water to Sri Lanka
ಅಯೋಧ್ಯೆ ರಾಮನ ಸೂರ್ಯ ತಿಲಕದ ಹಿಂದಿದೆ ವಿಜ್ಞಾನ ಕೌತುಕ: ಇಲ್ಲಿದೆ ಕುತೂಹಲಕಾರಿ ಮಾಹಿತಿ

ಈ ಧಾರ್ಮಿಕ ಸಮಾರಂಭಗಳಿಗೆ ಸರಯೂ ನದಿ ನೀರು ಮತ್ತು ದೇವಾಲಯದಲ್ಲಿ ಸೀತಾ ದೇವಿಯ ವಿಗ್ರಹವನ್ನು ಪ್ರತಿಷ್ಠಾಪಿಸಲು ವಿನಂತಿಸಲಾಗಿದೆ. ಉತ್ತರ ಪ್ರದೇಶ ಸರ್ಕಾರದ ನಿರ್ದೇಶನದ ಮೇರೆಗೆ ಪ್ರವಾಸೋದ್ಯಮ ಇಲಾಖೆಗೆ ಪವಿತ್ರ ಜಲವನ್ನು ಸಾಗಿಸುವ ಜವಾಬ್ದಾರಿಯನ್ನು ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಇನ್ನು ಶ್ರೀಲಂಕಾ ಮತ್ತು ಉತ್ತರ ಪ್ರದೇಶ ಸರ್ಕಾರದ ಕಾರ್ಯವನ್ನು ಅಯೋಧ್ಯ ರಾಮಜನ್ಮಭೂಮಿ ಟ್ರಸ್ಟ್ ಶ್ಲಾಘಿಸಿದ್ದು, ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವಲ್ಲಿ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಬೆಳೆಸುವಲ್ಲಿ ಇದರ ಮಹತ್ವ ಅಧಿಕವಾಗಿದೆ ಎಂದು ಹೇಳಿದೆ.

ಈ ಬಗ್ಗೆ ಮಾತನಾಡಿರುವ ಅಯೋಧ್ಯಾ ತೀರ್ಥ ವಿಕಾಸ ಪರಿಷತ್‌ನ ಸಿಇಒ ಸಂತೋಷ್ ಕುಮಾರ್ ಶರ್ಮಾ ಅವರು, 'ಶ್ರೀಲಂಕಾದಲ್ಲಿ ಸೀತಾ ಅಮ್ಮನ ದೇವಾಲಯವನ್ನು ನಿರ್ಮಿಸಲಾಗುತ್ತಿದೆ. ದೇವಾಲಯದ ಪ್ರತಿನಿಧಿಯು ಉತ್ತರ ಪ್ರದೇಶ ಸರ್ಕಾರದಿಂದ ಸರಯೂ ನದಿ ನೀರನ್ನು ಕೇಳಿದ್ದಾರೆ. ನಾವು ಪವಿತ್ರ ನೀರನ್ನು ಕಲಶದಲ್ಲಿ ಇಟ್ಟು ರವಾನಿಸುತ್ತೇವೆ. ಮೇ 19 ರಂದು ಧಾರ್ಮಿಕ ಕ್ರಿಯೆಗಳು ನಡೆಯಲಿದ್ದು, ಈ ಕ್ರಿಯೆಗಳಿಗೆ ಇದೇ ಪವಿತ್ರ ಜಲವನ್ನು ಬಳಕೆ ಮಾಡಲಾಗುತ್ತದೆ ಎಂದು ಹೇಳಿದರು.

ಸೀತಾ ಅಮ್ಮನ ದೇವಸ್ಥಾನದಲ್ಲಿ ನಡೆಯುವ ಸಮಾರಂಭವು ಭಾರತ ಮತ್ತು ಶ್ರೀಲಂಕಾ ನಡುವಿನ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಬಾಂಧವ್ಯವನ್ನು ಸಂಕೇತಿಸುವ ಎರಡೂ ರಾಷ್ಟ್ರಗಳ ಹೃದಯಗಳನ್ನು ಒಂದುಗೂಡಿಸುವ ಗುರಿಯನ್ನು ಹೊಂದಿದೆ. ಏತನ್ಮಧ್ಯೆ, ಶ್ರೀಲಂಕಾದ ಸೀತಾ ಅಮ್ಮನ ದೇವಾಲಯವು ಎಲ್ಲಾ 'ಸನಾತನಿಗಳಿಗೆ' ಹೆಮ್ಮೆಯ ವಿಷಯವಾಗಲಿದೆ ಎಂದು ಮಹಂತ್ ಶಶಿಕಾಂತ್ ದಾಸ್ ಪ್ರಧಾನಿ ನರೇಂದ್ರ ಮೋದಿಯವರ ಪ್ರಯತ್ನವನ್ನು ಶ್ಲಾಘಿಸಿದರು.

"ಇದು ಎಲ್ಲಾ ಸನಾತನಿಗೆ ಹೆಮ್ಮೆಯ ವಿಷಯವಾಗಿದೆ. ಲಂಕಾದಲ್ಲಿ ಸೀತಾದೇವಿಯು ಅನೇಕ ಕಷ್ಟಗಳನ್ನು ಎದುರಿಸಿದ್ದಾರೆ ಮತ್ತು ಇಂದು ಅದೇ ಲಂಕಾದಲ್ಲಿ ಭವ್ಯವಾದ ದೇವಾಲಯವನ್ನು ನಿರ್ಮಿಸಲಾಗುತ್ತಿದೆ" ಎಂದು ಶಶಿಕಾಂತ್ ದಾಸ್ ಮಹಂತ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com