ಕಾಂಗ್ರೆಸ್ ನ್ಯಾಯ ಪತ್ರದ ಬಗ್ಗೆ ಮಾತನಾಡಲು ಪ್ರಧಾನಿಗೆ ಗೊಬೆಲ್ಸ್ ಸ್ಫೂರ್ತಿ: ಜೈರಾಮ್ ರಮೇಶ್

ಕಾಂಗ್ರೆಸ್ ಪ್ರಣಾಳಿಕೆ ‘ನ್ಯಾಯ ಪತ್ರ’ದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಮಾತನಾಡಲು ನಾಜಿ ಪ್ರಚಾರಕ ಜೋಸೆಫ್ ಗೋಬೆಲ್ಸ್ ಅವರಿಂದ ಸ್ಫೂರ್ತಿ ಪಡೆದಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್‌ ಲೇವಡಿ ಮಾಡಿದ್ದಾರೆ.
ಜೈರಾಮ್ ರಮೇಶ್
ಜೈರಾಮ್ ರಮೇಶ್

ನವದೆಹಲಿ: ಕಾಂಗ್ರೆಸ್ ಪ್ರಣಾಳಿಕೆ ‘ನ್ಯಾಯ ಪತ್ರ’ದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಮಾತನಾಡಲು ನಾಜಿ ಪ್ರಚಾರಕ ಜೋಸೆಫ್ ಗೋಬೆಲ್ಸ್ ಅವರಿಂದ ಸ್ಫೂರ್ತಿ ಪಡೆದಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್ ಲೇವಡಿ ಮಾಡಿದ್ದಾರೆ.

ಎನ್‌ಟಾಯರ್‌ ಪೊಲಿಟಿಕಲ್‌ ಸೈನ್ಸ್‌ನಲ್ಲಿ ಎಂಎ ಮಾಡುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಗೋಬೆಲ್ಸ್‌ ಅವರ ಬಗ್ಗೆ ಓದಿ ಸ್ಪೂರ್ತಿ ಪಡೆದುಕೊಂಡಿರಬೇಕು ಎಂದು ವ್ಯಂಗ್ಯವಾಡಿದ್ದಾರೆ. ದೊಡ್ಡ ಸುಳ್ಳೊಂದು ಹೇಳಿ ಅದೇ ಸುಳ್ಳನ್ನು ಮತ್ತೆ ಮತ್ತೆ ಹೇಳಿದರೆ ಜನ ಅದನ್ನು ನಂಬುತ್ತಾರೆ ಎಂಬ ಗೋಬೆಲ್ಸ್‌ನ ಮಾತನ್ನು ಇಲ್ಲಿ ಉಲ್ಲೇಖಸಿದ್ದಾರೆ.

ಇತ್ತೀಚೆಗೆ ಟಿವಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ಮೋದಿ ಅವರು ಮತ್ತೊಮ್ಮೆ ನಿರ್ಲಜ್ಜವಾಗಿ, ನಾಚಿಕೆಯಿಲ್ಲದೆ ಸುಳ್ಳು ಹೇಳಿದ್ದಾರೆ. ಇದು 'ಅಸತ್ಯಮೇವ ಜಯತೇ' ಪ್ರಧಾನಿಯ ಧ್ಯೇಯವೆಂದು ಮತ್ತೊಮ್ಮೆ ಸಾಬೀತುಪಡಿಸಿದೆ. ಅವರು ಮಾತನಾಡುವಾಗಲೆಲ್ಲಾ ಸತ್ಯವನ್ನು ಕೊಲ್ಲುತ್ತಾರೆ ಎಂದು ರಮೇಶ್‌ ಕಿಡಿಕಾರಿದ್ದಾರೆ. ಹಿಟ್ಲರ್ ಆಡಳಿತದಲ್ಲಿ ಗೋಬೆಲ್ಸ್‌ ಪ್ರಚಾರ ಮಂತ್ರಿಯಾಗಿ ಕೆಲಸ ಮಾಡುತ್ತಿದ್ದರು.

ಜೈರಾಮ್ ರಮೇಶ್
ಪ್ರಧಾನಿ ನರೇಂದ್ರ ಮೋದಿ 'ಅಸತ್ಯಮೇವ ಜಯತೇ' ಸಂಕೇತ: ಜೈರಾಮ್ ರಮೇಶ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com