ಚೆನ್ನೈ: ಅಪಾರ್ಟ್‌ಮೆಂಟ್‌ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವನ್ನು ನಿವಾಸಿಗಳು ರಕ್ಷಿಸಿದ ಪರಿ ನೋಡಿ...!

ಚೆನ್ನೈನ ಅವಡಿಯಲ್ಲಿರುವ ಅಪಾರ್ಟ್‌ಮೆಂಟ್ ಸಮುಚ್ಚಯದ ಟಿನ್ ಛಾವಣಿಯ ಅಂಚಿನಲ್ಲಿ ಶಿಶುವೊಂದು ನಾಲ್ಕನೇ ಮಹಡಿಯಿಂದ ಆಕಸ್ಮಿಕವಾಗಿ ಜಾರಿ ಬಿದ್ದಿತ್ತು. ಮಗು ರೂಫ್ ಟಾಪ್ ನಲ್ಲಿರುವುದು ಮತ್ತು ಹರಸಾಹಸಪಟ್ಟು ಮಗುವನ್ನು ನಿವಾಸಿಗಳು ರಕ್ಷಿಸಿರುವ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನಿವಾಸಿಗಳಿಂದ ಮಗುವಿನ ರಕ್ಷಣೆ
ನಿವಾಸಿಗಳಿಂದ ಮಗುವಿನ ರಕ್ಷಣೆ

ಚೆನ್ನೈ: ನಿನ್ನೆ ಭಾನುವಾರ ಚೆನ್ನೈನ ಅವಡಿಯಲ್ಲಿರುವ ಅಪಾರ್ಟ್‌ಮೆಂಟ್ ಸಮುಚ್ಚಯದಲ್ಲಿ ಪವಾಡ ರೀತಿಯಲ್ಲಿ ನಿವಾಸಿಗಳು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟವರಂತೆ ಹರಸಾಹಸಪಟ್ಟು ಎಂಟು ತಿಂಗಳ ಮಗುವನ್ನು ಸಾವಿನ ದವಡೆಯಿಂದ ರಕ್ಷಿಸಿದ್ದಾರೆ.

ಚೆನ್ನೈನ ಅವಡಿಯಲ್ಲಿರುವ ಅಪಾರ್ಟ್‌ಮೆಂಟ್ ಸಮುಚ್ಚಯದ ಟಿನ್ ಛಾವಣಿಯ ಅಂಚಿನಲ್ಲಿ ಶಿಶುವೊಂದು ನಾಲ್ಕನೇ ಮಹಡಿಯಿಂದ ಆಕಸ್ಮಿಕವಾಗಿ ಜಾರಿ ಬಿದ್ದಿತ್ತು. ಮಗು ರೂಫ್ ಟಾಪ್ ನಲ್ಲಿರುವುದು ಮತ್ತು ಹರಸಾಹಸಪಟ್ಟು ಮಗುವನ್ನು ನಿವಾಸಿಗಳು ರಕ್ಷಿಸಿರುವ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ನಿವಾಸಿಯೊಬ್ಬರ ಬಾಲ್ಕನಿಯಿಂದ ರೆಕಾರ್ಡ್ ಮಾಡಿದ ಕ್ಲಿಪ್‌ನಲ್ಲಿ ಎಂಟು ತಿಂಗಳ ಮಗು ರೂಫ್ ಟಾಪ್ ನಲ್ಲಿ ಬಿದ್ದಿದೆ. ಅಕ್ಕಪಕ್ಕದ ನಿವಾಸಿಗಳು ಮಗುವನ್ನು ನೋಡಿ ಬೊಬ್ಬಿಡುತ್ತಿದ್ದಾರೆ. ಮೂವರು ಪುರುಷರು ಮಗುವನ್ನು ಹಿಡಿಯಲು ಮೊದಲ ಮಹಡಿಯ ಕಿಟಕಿಯಿಂದ ಮೇಲಕ್ಕೆ ಏರಲು ಪ್ರಯತ್ನಿಸುತ್ತಿರುವಾಗ ಗಾಬರಿಗೊಂಡ ನಿವಾಸಿಗಳು ಸಹಾಯಕ್ಕಾಗಿ ಕಿರುಚುತ್ತಾರೆ, ಮಗು ಮೇಲಿನಿಂದ ಕೆಳಗೆ ಬಿದ್ದು ಸಾವು ನೋವಿನ ಪರಿಸ್ಥಿತಿ ಬರಬಾರದು ಸುರಕ್ಷಿತವಾಗಿ ಕಾಪಾಡಬೇಕೆಂದು ಜನರ ಗುಂಪು ಕಿಟಕಿಯ ಕೆಳಗೆ ನೆಲ ಮಹಡಿಯಲ್ಲಿ ಬೆಡ್‌ಶೀಟ್ ನ್ನು ಹರಡಿ ನಿಲ್ಲುತ್ತಾರೆ. ಮಗುವಿಗೆ ನೋವಾಗದಂತೆ ನೋಡಿಕೊಳ್ಳಲು ಬೆಡ್ ಶೀಟ್ ಮೇಲೆ ಮೆತ್ತನೆಯ ಹಾಸಿಗೆಯನ್ನು ಇರಿಸಿರುತ್ತಾರೆ.

ಮಗು ರೂಫ್ ಟಾಪ್ ನ ಅಂಚಿನಲ್ಲಿದೆ. ಮಗುವಿನ ಕಾಲುಗಳು ಬಹುತೇಕ ಗಾಳಿಯಲ್ಲಿ ತೂಗಾಡುತ್ತಿರುತ್ತದೆ. ಒಬ್ಬ ವ್ಯಕ್ತಿಯು ಮೊದಲ ಮಹಡಿಯ ಕಿಟಕಿಯಿಂದ ಹೊರಬಂದು ಮಗುವನ್ನು ತಲುಪಲು ರೇಲಿಂಗ್ ಮೇಲೆ ನಿಂತಾಗ ನಿವಾಸಿಗಳು ಮತ್ತಷ್ಟು ಕಿರುಚುತ್ತಾರೆ. ಆಗ ಅವರು ತನ್ನ ತೋಳನ್ನು ಚಾಚಿ, ಶಿಶುವನ್ನು ಹಿಡಿದುಕೊಂಡು ಅಪಾರ್ಟ್ ಮೆಂಟ್ ಒಳಗಿರುವ ವ್ಯಕ್ತಿಗೆ ನೀಡಿದಾಗ ಇತರ ಇಬ್ಬರು ಅವರನ್ನು ಗಟ್ಟಿಯಾಗಿ ಹಿಡಿದುಕೊಳ್ಳುತ್ತಾರೆ.

ಚೆನ್ನೈಯ ಅವಡಿಯಲ್ಲಿನ ವಸತಿ ಸಮುದಾಯವಾದ ವಿಜಿಎನ್ ಸ್ಟಾಫರ್ಡ್‌ನಲ್ಲಿ ಮಗುವಿನ ತಾಯಿ ರಮ್ಯಾ ಬಾಲ್ಕನಿಯಲ್ಲಿ ಶುಶ್ರೂಷೆ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಕೈಜಾರಿ ಮಗು ಕೆಳಗೆ ಬಿದ್ದಿದೆ ಎಂದು ಅವಡಿ ಪೊಲೀಸ್ ಕಮಿಷನರ್ ಶಂಕರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಮಗುವನ್ನು ಅಪಾರ್ಟ್ ಮೆಂಟಿನ ನೆರೆಹೊರೆಯ ನಿವಾಸಿಗಳು ಸುರಕ್ಷಿತವಾಗಿ ಕಾಪಾಡಿದ್ದು ಅವರ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com