ISS ಮಿಷನ್: Axiom ಸ್ಪೇಸ್ ಜತೆ ಒಪ್ಪಂದಕ್ಕೆ ISRO ಸಹಿ; ಬಾಹ್ಯಾಕಾಶ ಯಾನಕ್ಕೆ ಶುಭಾಂಶು ಶುಕ್ಲಾ, ಪ್ರಶಾಂತ್ ಬಾಲಕೃಷ್ಣನ್ ನಾಯರ್ ಆಯ್ಕೆ

ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ (ಪ್ರಮುಖ) ಮತ್ತು ಗ್ರೂಪ್ ಕ್ಯಾಪ್ಟನ್ ಪ್ರಶಾಂತ್ ಬಾಲಕೃಷ್ಣನ್ ನಾಯರ್ (ಬ್ಯಾಕಪ್) ಅವರನ್ನು ಮಿಷನ್‌ಗೆ ಆಯ್ಕೆ ಮಾಡಲಾಗಿದೆ ಎಂದು ಇಸ್ರೋ ಘೋಷಿಸಿದೆ.
Group Captain Shubhanshu Shukla (prime) and Group Captain Prasanth Balakrishnan Nair
ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಮತ್ತು ಗ್ರೂಪ್ ಕ್ಯಾಪ್ಟನ್ ಪ್ರಶಾಂತ್ ಬಾಲಕೃಷ್ಣನ್ ನಾಯರ್ online desk
Updated on

ಬೆಂಗಳೂರು: ಭಾರತದ ಮೊದಲ ಮಾನವ ಸಹಿತ ಬಾಹ್ಯಾಕಾಶ ಯಾನಕ್ಕೆ ISRO ಇಸ್ರೋ ಸಜ್ಜುಗೊಂಡಿದ್ದು, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಲಿರುವ ಇಬ್ಬರು ಗಗನಯಾತ್ರಿಗಳ ಹೆಸರನ್ನು ಪ್ರಕಟಿಸಿದೆ.

ಅಮೇರಿಕಾದ ಆಕ್ಸಿಯಮ್ ಸ್ಪೇಸ್ (Axiom Space) ಜತೆ ಇಸ್ರೋ ಒಪ್ಪಂದಕ್ಕೆ ಸಹಿ ಹಾಕಿದ್ದು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ (ಪ್ರಮುಖ) ಮತ್ತು ಗ್ರೂಪ್ ಕ್ಯಾಪ್ಟನ್ ಪ್ರಶಾಂತ್ ಬಾಲಕೃಷ್ಣನ್ ನಾಯರ್ (ಬ್ಯಾಕಪ್) ಅವರನ್ನು ಮಿಷನ್‌ಗೆ ಆಯ್ಕೆ ಮಾಡಲಾಗಿದೆ ಎಂದು ಘೋಷಿಸಿದೆ.

ಜೂನ್ 2023 ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು USA ಗೆ ಭೇಟಿ ನೀಡಿದ ನಂತರ ಈ ಬೆಳವಣಿಗೆಯಾಗಿದ್ದು, ಇಸ್ರೋದ ಹ್ಯೂಮನ್ ಸ್ಪೇಸ್ ಫ್ಲೈಟ್ ಸೆಂಟರ್ (ಎಚ್‌ಎಸ್‌ಎಫ್‌ಸಿ) ಐಎಸ್‌ಎಸ್‌ಗೆ ಮುಂಬರುವ ಆಕ್ಸಿಯಮ್-4 ಮಿಷನ್‌ಗಾಗಿ ನಾಸಾದೊಂದಿಗೆ ಬಾಹ್ಯಾಕಾಶ ಹಾರಾಟದ ಒಪ್ಪಂದವನ್ನು (ಎಸ್‌ಎಫ್‌ಎ) ಮಾಡಿಕೊಂಡಿದೆ.

"ಆಯ್ಕೆಯಾದ ಗಗನಯಾತ್ರಿಗಳು ಆಗಸ್ಟ್ 2024 ರ ಮೊದಲ ವಾರದಿಂದ ಮಿಷನ್‌ಗಾಗಿ ತಮ್ಮ ತರಬೇತಿಯನ್ನು ಪ್ರಾರಂಭಿಸುತ್ತಾರೆ. ಕಾರ್ಯಾಚರಣೆಯ ಸಮಯದಲ್ಲಿ, ಗಗನಯಾತ್ರಿಯು ISS ನಲ್ಲಿ ಆಯ್ದ ವೈಜ್ಞಾನಿಕ ಸಂಶೋಧನೆ ಮತ್ತು ತಂತ್ರಜ್ಞಾನ ಪ್ರದರ್ಶನ ಪ್ರಯೋಗಗಳನ್ನು ಕೈಗೊಳ್ಳುತ್ತದೆ ಮತ್ತು ಬಾಹ್ಯಾಕಾಶ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತದೆ" ಎಂದು ಇಸ್ರೋ ಹೇಳಿದೆ.

ಈ ಕಾರ್ಯಾಚರಣೆಯ ಸಮಯದಲ್ಲಿ ಪಡೆದ ಅನುಭವಗಳು ಪ್ರಸ್ತುತ ಪರೀಕ್ಷಾ ಹಂತದಲ್ಲಿರುವ ಭಾರತದ ಗಗನ್ ಯಾನ್ ಹಾರಾಟಕ್ಕೆ ಪ್ರಯೋಜನಕಾರಿಯಾಗುತ್ತವೆ ಮತ್ತು ಇಸ್ರೋ ಮತ್ತು ನಾಸಾ ನಡುವಿನ ಮಾನವ ಬಾಹ್ಯಾಕಾಶ ಪ್ರಯಾಣದ ಸಹಕಾರವನ್ನು ಬಲಪಡಿಸುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com